Advertisement

ಟಿಎಂಸಿ ಸಾವಿನ ಸಂಖ್ಯೆ ಮರೆಮಾಚಿದೆ: ಕಿರೀಟ್‌

04:37 PM Jun 25, 2020 | Suhan S |

ಥಾಣೆ, ಜೂ. 24: ರಾಜ್ಯ ಸರಕಾರದಂತೆ ಥಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ (ಟಿಎಂಸಿ) ಕೂಡ ನಗರದಲ್ಲಿ ನಿಜವಾದ ಕೋವಿಡ್‌ -19 ಸಾವಿನ ಸಂಖ್ಯೆಯನ್ನು ಮರೆಮಾಚಿದೆ ಎಂದು ಮಾಜಿ ಸಂಸದ ಕಿರೀಟ್‌ ಸೋಮಯ್ಯ ಆರೋಪಿಸಿದ್ದಾರೆ.

Advertisement

ನಿಗಮವು ಕನಿಷ್ಠ 50ಕ್ಕೂ ಅಧಿಕ ಸಾವುಗಳನ್ನು ಬಹಿ ರಂಗ ಪಡಿಸುತ್ತಿಲ್ಲ, ಅದು ಅಂಕಿ ಅಂಶಗಳ ಸಮನ್ವಯದ ಸಮಯದಲ್ಲಿ ಹೊರಬರುತ್ತದೆ. ಈ ಅಂಕಿ ಅಂಶವನ್ನು ನಿಗಮವು ರಾಜ್ಯ ಸರಕಾರಕ್ಕೆ ಕಳುಹಿಸಿಲ್ಲ ಎಂದು ಸೋಮಯ್ಯ ಆರೋಪಿಸಿದ್ದಾರೆ. ಮುಂಬ್ರಾದಲ್ಲಿ ಟಿಎಂಸಿ ಕಡಿಮೆ ಸಾವಿನ ಅಂಕಿಅಂಶಗಳನ್ನು ತೋರಿಸಿದೆ. ಅಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಥಾಣೆ ನಗರದ ಪರಿಸ್ಥಿತಿಯನ್ನು ತಿಳಿಯಲು ನಾಗರಿಕ ಆಯುಕ್ತ ವಿಜಯ್‌ ಸಿಂಘಾಲ್‌ ಅವರನ್ನು ಭೇಟಿಯಾದ ಕಿರೀಟ್‌ ಅವರು. ಇತ್ತೀಚಿನ ವರದಿಯನು ನಾಗರಿಕ ಪ್ರಾಧಿಕಾರದಿಂದ ಪಡೆದಿದ್ದು ಅದರಲ್ಲಿರುವ ಅಂಕಿ ಅಂಶಗಳಿಂದ ನನಗೆ ತೃಪ್ತಿಯಿಲ್ಲ ಎಂದಿದ್ದಾರೆ. ಠಾಕ್ರೆ ಸರಕಾರವು 3,000 ಸಾವುಗಳನ್ನು ಮರೆಮಾಡಿದ್ದು, ಸೋಲಾಪುರ ಮುನ್ಸಿಪಲ್‌ ಕಾರ್ಪೊರೇಶನ್‌ ಸಹ ಸೋಮವಾರ 40 ಕಡಿಮೆ ಸಾವುಗಳನ್ನು ತೋರಿಸಲು ಪ್ರಯತ್ನಿಸಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತವೆ. ಸರಕಾರ ಮರೆಮಾಡಿದ ಒಟ್ಟು ಸಾವುಗಳಲ್ಲಿ 2,000 ಮುಂಬಯಿ ಮತ್ತು ಕನಿಷ್ಠ 50 ಮಂದಿ ಥಾಣೆ ನಗರದವರಾಗಿದ್ದಾರೆ ಎಂದು ಅವರು ಹೇಳಿದರು.

ಮುಂಬ್ರಾದಲ್ಲಿ ಸಾವಿನ ಸಂಖ್ಯೆ ನಿಗಮ ತೋರಿಸಿದ್ದಕ್ಕಿಂತ ಹೆಚ್ಚಿದೆ. ನಿಗಮವು ಮುಂಬ್ರಾದಲ್ಲಿ ಸಂಭವಿಸಿದ ನೈಜ ಸಾವುಗಳಲ್ಲಿ ಕೇವಲ ಶೇ. 50ರಷ್ಟನ್ನು ತೋರಿಸಿದೆ. ಡೇಟಾದಲ್ಲಿನ ಈ ವ್ಯತ್ಯಾಸಗಳ ಬಗ್ಗೆ ತನಿಖೆಗೆ ನಾವು ಒತ್ತಾಯಿಸಿದ್ದೇವೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಲಾಭದಾಯಕವಾಗುವುದಕ್ಕಿಂತ ಹೆಚ್ಚಾಗಿ ಸರಕಾರಿ ಆಸ್ಪತ್ರೆಗಳ ಬದಲು ರೋಗಿಗಳನ್ನು ವೇಗವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಆಮ್ಲಜನಕದ ಪೂರೈಕೆಯ ಕೊರತೆ ಅಥವಾ ವೆಂಟಿಲೇಟರ್‌ಗಳಂತಹ ತಾಂತ್ರಿಕ ಸಮಸ್ಯೆಗಳೂ ಸಹ ಇವೆ. ಇಂತಹ ಸಮಸ್ಯೆ ಗಳತ್ತ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿಪಕ್ಷದ ಮುಖಂಡ ಪ್ರವೀಣ್‌ ದಾರೇಕರ್‌ ಅವರು ಮಂಗಳವಾರ ಕಲ್ಯಾಣ್‌-ಡೊಂಬಿವಲಿ ಕಾರ್ಪೊರೇಶನ್‌ನ ಪುರಸಭೆ ಆಯುಕ್ತ ವಿಜಯ್‌ ಸೂರ್ಯವಂಶಿ ಅವರನ್ನು ಭೇಟಿಯಾದರು. ಮುಂಬಯಿ ಮತ್ತು ಹತ್ತಿರದ ಸ್ಥಳಗಳಿಗೆ ಅಗತ್ಯ ಸೇವೆಗಳ ಭಾಗವಾಗಿ ಕೆಡಿಎಂಸಿ ವ್ಯಾಪ್ತಿಯಲ್ಲಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಜನರು ತಮ್ಮ ಕುಟುಂಬಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸೋಂಕಿನ ಸರಪಳಿಯನ್ನು ಮುರಿಯಲು ಕ್ರಮಗಳು ಅಥವಾ ಇತರ ನಿಬಂಧನೆಗಳನ್ನು ಅನುಸರಿಸಬೇಕಾಗಿದೆ ಎಂದು ದಾರೇಕರ್‌ ಹೇಳಿದರು.

ಆಚಾರ್ಯ ಅತ್ರೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ, ಕಲ್ಯಾಣ್‌ ಮತ್ತು ಡೊಂಬಿವಲಿ ಪ್ರದೇಶಗಳಲ್ಲಿನ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಕೈಗೊಂಡ ಕ್ರಮಗಳು ಕುರಿತು ಚರ್ಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next