Advertisement

ಅರ್ಹ ಮಹಿಳೆ ಸಿಕ್ಕರೆ ಅವರೇ ಟಿಎಂಸಿ ಮುಖ್ಯಮಂತ್ರಿ ಅಭ್ಯರ್ಥಿ: ಮಹುವಾ ಮೋಯತ್ರಾ

03:21 PM Nov 18, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಸೂಕ್ತ ಮಹಿಳಾ ಅಭ್ಯರ್ಥಿಗಳು ಸಿಕ್ಕರೆ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನದ ಉಮೇದುವಾರರನ್ನಾಗಿ ಕಣಕ್ಕಿಳಿಸಲಾಗುವುದು. ನಮ್ಮ ಪಕ್ಷದಲ್ಲಿ ಮಹಿಳೆ ಮತ್ತು ಪುರುಷರಲ್ಲಿ ಬೇಧಭಾವ ಮಾಡಲಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಗೋವಾ ಪ್ರಭಾರಿ ಮಹುವಾ ಮೋಯತ್ರಾ ನುಡಿದರು.

Advertisement

ಪಣಜಿಯ ಟಿಎಂಸಿ ಪಕ್ಷದ ಪ್ರಧಾನ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾ ರಾಜ್ಯ ಪ್ರಭಾರಿಯಾಗಿ ಇದು ನನ್ನ ಮೊದಲ ದಿನವಾಗಿದೆ. ಬಂಗಾಲದಲ್ಲಿ ನಾವು ಮಹಿಳೆಯರಿಗೆ ಸರ್ವಾಧಿಕ ಸಮ್ಮಾನ ಪ್ರತಿಷ್ಠೆ ನೀಡಿದ್ದೇವೆ. ಅದರಂತೆಯೇ ಗೋವಾದಲ್ಲಿಯೂ ಟಿಎಂಸಿ ಅಧಿಕಾರಕ್ಕೆ ಬಂದರೆ ಸರ್ವಾಧಿಕ ಸಮ್ಮಾನ ಪ್ರತಿಷ್ಠೆ ನೀಡಲಿದ್ದೇವೆ. ಸೂಕ್ತ ಮಹಿಳಾ ಅಭ್ಯರ್ಥಿ ಸಿಕ್ಕರೆ ಅವರನ್ನು ಟಿಎಂಸಿ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು ಎಂದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಗೋವಾ ಕಾಂಗ್ರೆಸ್ ನಾಯಕ ಇಥೇಲ್ ಲೋಬೊ ಟಿಎಂಸಿ ಪಕ್ಷ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next