Advertisement

ಶಿಕ್ಷಕರು ಮಗುವಿನ ಒಳ್ಳೆಯ ಗುಣ ಪ್ರಶಂಸಿಸಿ: ಡಾ|ಪಿ.ವಿ. ಭಂಡಾರಿ 

06:05 AM Sep 09, 2018 | Team Udayavani |

ಉಡುಪಿ: ಪ್ರತಿಯೊಂದು ಮಗು ವಿಗೂ ತನ್ನದೇ ಆದ ಸಮಸ್ಯೆಗಳಿರುತ್ತವೆ. ಅದನ್ನು ಶಿಕ್ಷಕರು ಅರಿತು  ಪರಸ್ಪರ ಮಕ್ಕಳನ್ನು ಹೋಲಿಸದೆ ವ್ಯಕ್ತಿಗತವಾಗಿ, ಬಹಿರಂಗವಾಗಿ ಅವರ ಒಳ್ಳೆಯ ಗುಣಗಳನ್ನು ಪ್ರಶಂಸೆೆ ಮಾಡಿ, ತಪ್ಪುಗಳನ್ನು ಮರೆಯಲ್ಲಿ ತಿದ್ದಲು ಪ್ರಯತ್ನಿಸಿದಾಗ ಒಂದು ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಇದು ಶಿಕ್ಷಕರ ಗುರುತರ ಹೊಣೆಗಾರಿಕೆ ಎಂದು ದೊಡ್ಡಣಗುಡ್ಡೆ ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಅಭಿಪ್ರಾಯಪಟ್ಟರು.

Advertisement

ಡಾ| ಟಿಎಂಎ ಪೈ ಪ್ರತಿಷ್ಠಾನ, ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ ಡಾ| ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲೇಜಿನ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್‌ ಮಾತನಾಡಿ, ಚಿಂತಕ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ದೇಶೀಯ ಪರಂಪರೆಯ ಓರ್ವ ಸಮನ್ವಯ ಕಾರರಾಗಿದ್ದರು. ಅಂತಹ ಶ್ರೇಷ್ಠ ವ್ಯಕ್ತಿಯ ಆದರ್ಶಗಳಾದ ಪ್ರಾಮಾಣಿಕ ಸೇವೆ, ಚಿಂತನೆ ಭವಿಷ್ಯದ ಶಿಕ್ಷಕರಾಗಲಿರುವ ಕಾಲೇಜಿನ ವಿದ್ಯಾರ್ಥಿ ಶಿಕ್ಷಕರಿಗೆ ಮುನ್ನುಡಿಯಾಗಲಿ ಎಂದರು.

ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಉದ್ದೇಶ, ದಿ| ಪುಂಡಲೀಕ ಶೆಣೈ ಅವರ ಆದರ್ಶಗಳನ್ನು ಟ್ರಸ್ಟ್‌ನ ಸಂಚಾಲಕ ಹರೀಶ್‌ ಶೆಣೈ ಸ್ಮರಿಸಿದರು. ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾಗಿದ್ದು ಶಾಲಾ ಶಿಕ್ಷಕರಾಗಿ ನಿವೃತ್ತರಾದ ಕೆ. ಉಷಾದೇವಿ, ಎ. ನಾಗಭೂಷಣ ಭಟ್ಟ ಅವರನ್ನು ಸಮ್ಮಾನಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳಿಂದ ಕುವೆಂಪು ರಚಿತ ಕವನಗಳ ಸಮೂಹ ಗಾನ, ರಾಧಾಕೃಷ್ಣನ್‌ರ ಬದುಕು-ಸಾಧನೆ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಬಂಧ ಮಂಡನೆ ಜರಗಿತು. ಉಪನ್ಯಾಸಕಿ ಪ್ರೀತಿ ಎಸ್‌. ರಾವ್‌ ಸ್ವಾಗತಿಸಿದರು. ಉಷಾ ಎಚ್‌. ಸಮ್ಮಾನಿತರನ್ನು ಪರಿಚಯಿಸಿದರು. ರೂಪಾ ಕೆ. ನಿರೂಪಿಸಿ, ಧನಲಕ್ಷಿ ¾à ವಂದಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next