Advertisement

ಟಿ.ಎಂ. ವಿಜಯಭಾಸ್ಕರ್‌ ಮುಖ್ಯ ಕಾರ್ಯದರ್ಶಿ?

06:25 AM Jun 30, 2018 | |

ಬೆಂಗಳೂರು: ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಅಧಿಕಾರಾವಧಿ ಶನಿವಾರ
ಮುಕ್ತಾಯವಾಗಲಿದ್ದು, ನೂತನ ಮುಖ್ಯ ಕಾರ್ಯದರ್ಶಿಯಾಗಿ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇಮಕವಾಗುವ ಸಾಧ್ಯತೆ ಇದೆ.

Advertisement

ಸೇವಾ ಹಿರಿತನದಲ್ಲಿ 1982ರ ಬ್ಯಾಚ್‌ನ ಅಧಿಕಾರಿಗಳಾದ ಕೇಂದ್ರ ಸೇವೆಯಲ್ಲಿರುವ ಲತಾ ಕೃಷ್ಣರಾವ್‌ ಹಾಗೂ ಎಸ್‌.
ಕೆ.ಪಟ್ನಾಯಕ್‌ ಅವರ ಅವಧಿ ಸೆಪ್ಟೆಂಬರ್‌ ಅಂತ್ಯಕ್ಕೆ ಮುಕ್ತಾಯವಾಗಲಿರುವುದರಿಂದ, 1983ರ ಬ್ಯಾಚ್‌ನ ಹಿರಿಯ ಅಧಿಕಾರಿಯಾಗಿರುವ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಅದೇ ಬ್ಯಾಚ್‌ನ ಇನ್ನೊಬ್ಬ ಹಿರಿಯ ಅಧಿಕಾರಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಡಿ.ವಿ.ಪ್ರಸಾದ್‌ ಅವರ ಹೆಸರೂ ಕೂಡ ಸಿಎಸ್‌ ರೇಸ್‌ನಲ್ಲಿ ಕೇಳಿ ಬಂದಿತ್ತು. ಆದರೆ, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ನೇಮಕ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಗೆ ವಹಿಸಿದ್ದರಿಂದ ಅವರು ಟಿ.ಎಂ. ವಿಜಯಭಾಸ್ಕರ್‌ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 2020ರ ವರೆಗೂ ವಿಜಯಭಾಸ್ಕರ್‌ ಅವರ ಸೇವಾವಧಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next