Advertisement
ದುಬೈ ಮೂಲಕ ಹೊರಟು ಮೇ 30ರಂದು ಪ್ಯಾರಿಸ್ ತಲುಪಿ, ಅದಾಗಲೇ ಲಂಡನ್ ನೋಡಿಕೊಂಡು ಪ್ಯಾರಿಸ್‌ಗೆ ಬಂದಿದ್ದ ನಮ್ಮ ಪ್ರವಾಸಿ ತಂಡವನ್ನು ಸೇರಿಕೊಂಡೆವು. ಮರುದಿನದಿಂದ ಪ್ಯಾರಿಸ್, ಬೆಲ್ಜಿಯಮ್, ನೆದರ್‌ಲೆಂಡ್ ನೋಡಿಕೊಂಡು ಸ್ವಿಟ್ಜರ್‌ಲೆಂಡ್‌ಗೆ ಬಂದಿದ್ದು ಪ್ರವಾಸದ ಏಳನೆಯ ದಿನ. ಝೂರಿಚ್‌ನ ಹೋಟೆಲ್ನಿಂದ ಹೊರಟು ಲೂಝರ್ನ್ ಮೂಲಕ ಏಂಜೆಲ್ಬರ್ಗ್ ತಲುಪಿದೆವು.
Related Articles
Advertisement
ಅಬ್ಟಾ, ಸ್ವರ್ಗ ಎಂದರೆ ಇದೇ ಇರಬಹುದೇ ಎನ್ನುವ ಮಾಯಾಲೋಕದ ದರ್ಶನ ನಮಗಾಯಿತು. ಕಣ್ಣು ಹಾಯಿಸಿದಷ್ಟೂ ಎಲ್ಲೆಡೆ ಕಾಣುವ ಹಿಮದ ಹಾಸು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತು.
ಕ್ಲಿಫ್ ವಾಕ್!
ಅಲ್ಲಿಂದ ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು ತೂಗು ಸೇತುವೆ ಕ್ಲಿಫ್ ವಾಕ್‌ನ್ನು ಎರಡು ಶಿಖರಗಳ ನಡುವೆ ನಿರ್ಮಿಸಿದ್ದಾರೆ. ಕೆಳಗೆ ಪ್ರಪಾತ, ಆ ಕಡೆ ಈ ಕಡೆ ಹಿಮಾವೃತ್ತ ಬಂಡೆಗಲ್ಲುಗಳು. ಅದರ ಮೇಲೆ ನಡೆಯುತ್ತ ಹೋಗಿಬರುವುದೊಂದು ಅನನ್ಯ ಅನುಭವ. ಒಂದಷ್ಟು ಹೊತ್ತು ಆಟವಾಡಿ ಇನ್ನೂ ಮುಂದೆ ಹೋದಾಗ ಕಂಡಿದ್ದು ಮತ್ತೂಂದು ಟಿಕೆಟ್ ಕೌಂಟರ್. ಮೊದಲೇ ಕೊಂಡಿದ್ದರಿಂದ ಟಿಕೆಟ್ ತೋರಿಸಿ ಒಳಹೋದರೆ ಆರು ಜನ ಕೂರಬಹುದಾದ ಕೇಬಲ್ ಚೇರ್ ಕಾಣಬಂತು. ಇದರಲ್ಲಿ ಕುಳಿತು 500 ಮೀ.ಗಳಷ್ಟು ಕೆಳಗೆ ಇಳಿಯುವ ಅವಕಾಶವಿತ್ತು. ಅದು ಓಪನ್‌ಚೇರ್ ಆದುದರಿಂದ ಅದರಲ್ಲಿ ಕುಳಿತು ಕೆಳಗಿಳಿಯುವಾಗ ಭಯ ಮಿಶ್ರಿತ ಸಂಭ್ರಮ. ಆದರೆ ಸುತ್ತಲಿನ ನೋಟ ನಮ್ಮನ್ನು ಹಿಡಿದಿಟ್ಟುಕೊಳ್ಳುವುದರಿಂದ ಎಲ್ಲವನ್ನೂ ಮರೆತು ಅದರಲ್ಲಿ ತಲ್ಲೀನರಾಗಿಬಿಟ್ಟೆವು.
ಕೇಬಲ್ ಚೇರ್‌ನಿಂದ ಇಳಿದು ಒಂದಷ್ಟು ದೂರ ನಡೆದಾಗ ಕಂಡದ್ದು ಅಗಾಧವಾದ ಹಿಮದ ಹಾಸು, ಅಲ್ಲೊಂದಿಷ್ಟು ಜಾರುವುದಕ್ಕೋಸ್ಕರವಾಗಿ ಗುರುತಿಸಲಾದ ಸ್ಥಳ. ಅಲ್ಲಿರುವ ಪ್ಲಾಸ್ಟಿಕ್ ಮಣೆಗಳ ಮೇಲೆ ಕುಳಿತು ಇನ್ನೂರು ಅಡಿಗಳಷ್ಟು ಜಾರುವ ವಿಶಿಷ್ಟ ಅವಕಾಶದ ಸದುಪಯೋಗ ಮಾಡಿಕೊಳ್ಳದೆ ಇರಲಾಗಲಿಲ್ಲ. ಅದೊಂದು ರೋಮಾಂಚನಕಾರಿಯಾದ ಅನುಭವವೇ ಸರಿ. ಕೆಳಗೆ ಜಾರಿ ಇಳಿದವರು ಮೇಲೆ ಬರಲು ಎಸ್ಕಲೇಟರ್ ಸೌಲಭ್ಯವಿದೆ. ಅದರ ಮೇಲೆ ನಿಂತು ಮೊದಲಿನ ಸ್ಥಳಕ್ಕೆ ಬಂದು, ನಂತರ ಕೇಬಲ್ ಚೇರ್ ಮೂಲಕ ವಾಪಸಾದೆವು. ಮತ್ತೆ ಕೇಬಲ್ ಕಾರುಗಳ ಮೂಲಕ ಪರ್ವತದ ಬುಡಕ್ಕೆ ಬಂದಾಗ ಕನಸಿನ ಲೋಕದಿಂದ ಹೊರಬಂದಂತಹ ಪರಿಸ್ಥಿತಿ ನಮ್ಮದಾಗಿತ್ತು.
ಟಿಟ್ಲಿಸ್ ಪರ್ವತ1435ರ ದಾಖಲೆಗಳ ಪ್ರಕಾರ ಈ ಪರ್ವತಕ್ಕೆ ಟ್ಯುಟಿಲೋಸ್ ಎಂಬ ಸ್ಥಳೀಯ ರೈತನೊಬ್ಬನ ಹೆಸರಿನಿಂದ ಟಟಲ್ಸ್ ಬರ್ಗ್ (Tuttelsberg) ಅಂದರೆ ಟ್ಯುಟಿಲೋಸ್ ಪರ್ವತ (Tutilos mountain) ಎಂದು ಕರೆಯಲಾಗುತ್ತಿತ್ತು. ನಂತರ ಅದು ಟಿಟ್ಲಿಸ್‌ಬರ್ಗ್ (Titlisberg) ಎಂದಾಗಿ ಈಗ ಟಿಟ್ಲಿಸ್ ಎನ್ನುವ ಹೆಸರೇ ಪ್ರಚಲಿತದಲ್ಲಿದೆ. ಲೂಝರ್ನ್ ಸರೋವರದ ದಕ್ಷಿಣದಲ್ಲಿರುವ ಟಿಟ್ಲಿಸ್, ಯೂರೋಪಿಯನ್ ಆಲ್ಫ್ಸ್ ಪರ್ವತದ ಒಂದು ಶಿಖರ. ಸಮುದ್ರ ಮಟ್ಟದಿಂದ 3, 238 ಮೀ. ಗಳಷ್ಟು ಎತ್ತರವಿದೆ 10, 623 ಅಡಿ. ಇದು ಉತ್ತರ ಸ್ವಿಟ್ಜರ್‌ಲೆಂಡ್ ಪರ್ವತ ಶ್ರೇಣಿಯ ಅತಿ ಎತ್ತರದ ಶಿಖರ. ಉತ್ತರಭಾಗದಲ್ಲಿ ಟಿಟ್ಲಿಸ್ ಹಿಮನದಿ (Titlis Glacier) ಇದೆ. ಭೂ ತಾಪಮಾನದ ಏರಿಕೆಯಿಂದಾಗಿ ಇದೂ ಕೂಡ ಕರಗುತ್ತಿದ್ದು, ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಬಹುದೆಂಬ ಆತಂಕವಿದೆ. ತಲುಪುವ ಬಗೆ : ಹತ್ತಿರದ ವಿಮಾನ ನಿಲ್ದಾಣಗಳು ಬರ್ನ್ ಮತ್ತು ಝೂರಿಚ್. ಏಂಜೆಲ್ಬರ್ಗ್‌ನಿಂದ 157 ಕಿ. ಮೀ., ಮತ್ತು ಝೂರಿಚ್ನಿಂದ 101 ಕಿ. ಮೀ. ದೂರವಿದೆ. ರೈಲು ಮತ್ತು ರಸ್ತೆಯ ಮೂಲಕವೂ ಇಲ್ಲಿಗೆ ತಲುಪಬಹುದು.