Advertisement

ಅಂಗಾಂಶ ಕಸಿಯಲ್ಲೂ ಬಂತು ಚಿತ್ರಮೂಲ ಸಸಿ

12:49 PM Jul 20, 2019 | Suhan S |

ಶಿರಸಿ: ದೇಶದಲ್ಲೇ ಪ್ರಥಮ ಬಾರಿಗೆ ಕೆಂಪು ದತ್ತಕ ಪಟ್ಟಿಯಲ್ಲಿರುವ ಅಪರೂಪದ ವನಸ್ಪತಿ ಗಿಡ ಚಿತ್ರಮೂಲವನ್ನು ಶಿರಸಿ ದಂಪತಿ ಅಂಗಾಂಶಕಸಿ ಮೂಲಕ ಅಭಿವೃದ್ಧಿಗೊಳಿಸಿ ಗಮನ ಸೆಳೆದಿದ್ದಾರೆ.

Advertisement

ನೋವು ನಿವಾರಕ ಔಷಧಗಳಲ್ಲಿ ಬಳಸುವ, ಪಶ್ಚಿಮ ಘಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಚಿತ್ರಮೂಲವನ್ನು ಅಂಗಾಂಶ ಕಸಿ ಮೂಲಕ ಅಭಿವೃದ್ಧಿಗೊಳಿಸಲಾಗಿದ್ದು, ವರ್ಷಗಳ ನಿರಂತರ ಶ್ರಮ ಫಲ ಕೊಟ್ಟಿದೆ. ಶಿರಸಿ ಬಂಡಿಮನೆ ಲೈಫ್‌ ಸೈನ್ಸ್‌ ರಿಸರ್ಚ್‌ ಫೌಂಡೇಶನ್‌ನ ಮುಖ್ಯಸ್ಥ ವಿನಯ ಹೆಗಡೆ, ವಿಂದ್ಯಾ ಹೆಗಡೆ ಈ ಸಾಹಸ ಮಾಡಿದ್ದಾರೆ.

ಸಸ್ಯ ವಿಜ್ಞಾನಿ ಡಾ| ಕೇಶವ ಹೆಗಡೆ ಕೊರ್ಸೆ ಮಾರ್ಗದರ್ಶನದಲ್ಲಿ ಅಂಗಾಂಶ ಕೃಷಿ, ಸಸ್ಯ ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರದ ಪ್ರಯೋಗಾಲಯದ ಮೂಲಕ ಇನ್ನೂ ಅನೇಕ ವನಸ್ಪತಿ, ಸಾಂಬಾರ ಸಸ್ಯಗಳ ಬಗ್ಗೆ ಸಂಶೋಧನೆ ಮಾಡಲು ಮುಂದಾಗಿದ್ದಾರೆ.

ಇದೇ ಪ್ರಥಮ ಬಾರಿಗೆ ಚಿತ್ರಮೂಲ ವೃಕ್ಷದ ಸಂಶೋಧನೆ ಯಶಸ್ಸಾಗಿದ್ದು, ಸಾಗರದ ಪ್ರಕಾಶರಾವ್‌ ಕೂಡ ಪ್ರಯೋಗ ನಡೆಸಿದ್ದಾರೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ಸಂಶೋಧನೆ ಮಾಡಿದ ವಿನಯ ಹೆಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ 15ಕ್ಕೂ ಹೆಚ್ಚು ಪ್ರಬಂಧ ಬರೆದು ಗಮನ ಸೆಳೆದಿದ್ದಾರೆ. ಜೀವ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರ ಪತ್ನಿ ಜೊತೆಗೆ ಆಧುನಿಕ ಸೌಲಭ್ಯಗಳ ಜೊತೆ ಲ್ಯಾಬ್‌ ನಡೆಸುತ್ತಿದ್ದಾರೆ.

Advertisement

ಈಗಾಗಲೇ ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳೂ ವಿಶೇಷ ತರಬೇತಿ ಪಡೆಯಲು ಆರಂಭಿಸಿದ್ದು ವಿಶೇಷವಾಗಿದೆ. ಇಲ್ಲಿ ಇಪ್ಪತ್ತಕ್ಕೂ ಅಧಿಕ ಸಸ್ಯ ಪ್ರಭೇದಗಳ ಸಂಶೋಧನೆ ನಡೆಯುತ್ತಿದೆ. ಚಿತ್ರಮೂಲ ಅಂಗಾಂಶ ಕಸಿ ಗಿಡಗಳು ಬೆಟ್ಟದಲ್ಲಿ ಬೆಳೆಸಲು ಯೋಗ್ಯವಾಗಿದ್ದು, ಸಹಜ ಕೃಷಿಯಲ್ಲಿ ಅಧಿಕ ಇಳುವರಿ ಸಾಧ್ಯವಿದೆ. 150ರೂ. ನಿಂದ 450 ರೂ. ತನಕ ಗುಣಮಟ್ಟದ ಮೇಲೆ ಬೇರಿಗೆ ಬೇಡಿಕೆ ಇದೆ ಎಂದೂ ಇದೇ ವೇಳೆ ತಿಳಿಸಿದರು.

ಫೌಂಡೇಶನ್‌ ಮುಖ್ಯಸ್ಥ ಗಜಾನನ ಹೆಗಡೆ ಭಂಡಿಮನೆ, 15 ರೂ.ಗೆ ಒಂದು ಸಸಿ ಕೊಡಲು ತೀರ್ಮಾನಿಸಿದ್ದೇವೆ. ಖಾಲಿ ಜಾಗ ಸದ್ಭಳಕೆ ಮಾಡಿಕೊಳ್ಳಲು ರೈತರು ಇದನ್ನು ಬಳಸಬಹುದು. ಯಾವುದೇ ಒತ್ತಾಯ ಇಲ್ಲ, ಸಂಶೋಧನೆ ನಮ್ಮ ಪ್ರಮುಖ ಆಶಯ ಎಂದರು. ವಿಜ್ಞಾನಿ ಕೇಶವ ಹೆಗಡೆ ಕೊರ್ಸೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next