ಕೊಲಂಬೊ : ಆಲ್‌ರೌಂಡರ್ ತಿಸರ ಪೆರೆರ ಓವರಿಗೆ 6 ಸಿಕ್ಸರ್ ಬಾರಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿ ಕೆಗೆ ಪಾತ್ರರಾಗಿದ್ದಾರೆ. 41 ಓವರ್‌ಗಳ ಲಿಸ್ಟ್ ಎ ಪಂದ್ಯವೊಂದರಲ್ಲಿ ಅವರು ಈ ಸಾಧನೆಗೈದರು.
ಶ್ರೀಲಂಕಾ ಆರ್ಮಿ ತಂಡದ ನಾಯಕನೂ ಆಗಿರುವ ತಿಸರ ಪೆರೆರ “ಬ್ಲೂಮ್‌ಫೀಲ್ಡ್ ಕ್ರಿಕೆಟ್ ಆ್ಯಂಡ್ ಆ್ಯತ್ಲೆಟಿಕ್ ಕ್ಲಬ್’ ತಂಡದ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದರು. ದಂಡಿಸಲ್ಪಟ್ಟ ಬೌಲರ್ ದಿಲ್ಹನ್ ಕೂರೆ.
5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ತಿಸರ ಪೆರೆರ ಕೇವಲ 13 ಎಸೆತಗಳಿಂದ 52 ರನ್ ಬಾರಿಸಿದರು. ಇದರಲ್ಲಿ 8 ಸಿಕ್ಸರ್ ಒಳಗೊಂಡಿತ್ತು.
ಪೆರೆರ ಓವರಿನ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ರವಾನಿಸಿದ ವಿಶ್ವದ 9ನೇ ಕ್ರಿಕೆಟಿಗ. ಉಳಿದವ ರೆಂದರೆ ಗ್ಯಾರಿ ಸೋಬರ್, ರವಿಶಾಸ್ತ್ರಿ, ಹರ್ಶಲ್ ಗಿಬ್ಸ್, ಯುವರಾಜ್ ಸಿಂಗ್, ರೋಸ್ ವೈಟಿ, ಹಜ್ರತುಲ್ಲ ಜಜಾಯ್, ಲಿಯೋ ಕಾರ್ಟರ್ ಮತ್ತು ಕೈರನ್ ಪೊಲಾರ್ಡ್.
ಇದನ್ನೂ ಓದಿ :ಕಾಶ್ಮೀರದಲ್ಲಿ ಉಗ್ರರ ಹಿಂಸಾಕೃತ್ಯ ಶೇ. 25ರಷ್ಟು ಇಳಿಕೆ : ಕೇಂದ್ರದ ಭದ್ರತಾ ಪಡೆ