Advertisement

10 ಟನ್ ಚಿನ್ನ,15,900 ಕೋಟಿ ರೂ. ನಗದು; ಆಸ್ತಿ ಘೋಷಿಸಿದ ತಿರುಪತಿ ದೇವಸ್ಥಾನದ ಟ್ರಸ್ಟ್

12:44 PM Nov 06, 2022 | Team Udayavani |

ತಿರುಪತಿ: ಶನಿವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರ ಬಿಡುಗಡೆ ಮಾಡಿದ್ದು, ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿ ಪಟ್ಟಿಯನ್ನು ಪ್ರಕಟಿಸಿದೆ.

Advertisement

ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿಯು ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ಟ್ರಸ್ಟ್ ನಿರಾಕರಿಸಿದೆ. ಹೆಚ್ಚುವರಿ ಮೊತ್ತವನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ.

“ಇಂತಹ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಭಕ್ತರಲ್ಲಿ ವಿನಂತಿಸಲಾಗಿದೆ. ಟಿಟಿಡಿ ವಿವಿಧ ಬ್ಯಾಂಕ್‌ ಗಳಲ್ಲಿ ಮಾಡಿದ ನಗದು ಮತ್ತು ಚಿನ್ನದ ಠೇವಣಿಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ.” ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ನಾಯಿಗೆ ಊಟ ತಡವಾಗಿ ಹಾಕಿದ್ದಕ್ಕೆ 21 ವರ್ಷದ ಯುವಕನನ್ನು ಬೆಲ್ಟ್‌ನಿಂದ ಹೊಡೆದು ಕೊಂದ ಸಂಬಂಧಿ!

ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ 5,300 ಕೋಟಿಗೂ ಹೆಚ್ಚು ಮೌಲ್ಯದ 10.3 ಟನ್‌ ಚಿನ್ನದ ಠೇವಣಿ ಇದೆ ಎಂದು ದೇವಸ್ಥಾನದ ಟ್ರಸ್ಟ್‌ ತಿಳಿಸಿದೆ. ಟ್ರಸ್ಟ್ 15,938 ಕೋಟಿ ನಗದು ಠೇವಣಿ ಹೊಂದಿದೆ. 2019ರಲ್ಲಿ 7.3 ಟನ್ ಚಿನ್ನದ ಠೇವಣಿಯಿತ್ತು. ಮೂರು ವರ್ಷಗಳಲ್ಲಿ 2.9 ಟನ್ ಗಳಷ್ಟು ಇದು ಹೆಚ್ಚಾಗಿದೆ ಎಂದು ತಿಳಿಸಿದೆ.

Advertisement

ದೇವಾಲಯದ ಆಸ್ತಿಗಳು ಭಾರತದಾದ್ಯಂತ 7,123 ಎಕರೆಗಳಲ್ಲಿ ಹರಡಿರುವ 960 ಆಸ್ತಿಗಳನ್ನು ಒಳಗೊಂಡಿವೆ ಎಂದು ವರದಿ ತಿಳಿಸಿದೆ.

ದೇವಸ್ಥಾನದ ಆದಾಯವು ಭಕ್ತರು, ವ್ಯಾಪಾರಗಳು ಮತ್ತು ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next