Advertisement

ಕಣ್ಮನ ಸೆಳೆಯಲಿದೆ “ಶ್ರೀನಿವಾಸ ಸೇತು’; ತಿರುಪತಿ, ತಿರುಮಲ ಸಂಪರ್ಕಿಸುವ ಫ್ಲೈ ಓವರ್‌

12:51 AM Feb 08, 2022 | Team Udayavani |

ತಿರುಪತಿ: ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರ ಸನ್ನಿಧಿಯಿರುವ ತಿರುಮಲ ಮತ್ತು ತಿರುಪತಿ ನಡುವಿನ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಶ್ರೀನಿವಾಸ ಸೇತು ಹೆಸರಿನ 7 ಕಿ.ಮೀ. ದೂರದ ಫ್ಲೈ ಓವರ್‌ ಸದ್ಯದಲ್ಲೇ ಉದ್ಘಾಟನೆಯಾಗಲಿದೆ.

Advertisement

ಹಾಗಾಗಿ, ಫ್ಲೈ ಓವರ್‌ನ ಎಲ್ಲಾ ಸ್ತಂಭಗಳ ಮೇಲೆ ಸಾಂಪ್ರದಾಯಿಕ “ಕಲಂಕಾರಿ’ ಮಾದರಿಯ ಪೌರಾಣಿಕ ಚಿತ್ರಗಳನ್ನು, ಹಕ್ಕಿ ಪಕ್ಷಿಗಳು, ನಿಸರ್ಗ ಸೌಂದರ್ಯದ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಇದೆಲ್ಲವೂ ಪೂರ್ಣಗೊಂಡ ಬಳಿಕ ಫ್ಲೈ ಓವರ್‌ ನೋಡುಗರನ್ನು ಆಕರ್ಷಿಸಲಿದೆ.

ಸ್ತಂಭಗಳ ಮೇಲೆ ಬಿಡಿಸಲಾಗುತ್ತಿರುವ ಚಿತ್ರಗಳು ಮುಖ್ಯವಾಗಿ ತಿರುಮಲದ ದೇಗುಲದ ಶ್ರೀನಿವಾಸನ ಮಹಾತ್ಮೆಯನ್ನು ಪ್ರಚುರಪಡಿಸುವ ಚಿತ್ರಗಳೇ ಆಗಿವೆ. ಜೊತೆಗೆ, ಶ್ರೀನಿವಾಸದ ಅದ್ವಿತೀಯ ಭಕ್ತನೆನಿಸಿ, ತಮ್ಮ 32 ಸಾವಿರ ಕೀರ್ತನೆಗಳ ಮೂಲಕ ನಾಡಿನಾದ್ಯಂತ ತಿಮ್ಮ ಪ್ಪನ ಕೀರ್ತಿಯನ್ನು ಹರಡಿದ ಹೆಗ್ಗಳಿಕೆ ಹೊಂದಿರುವ ಅನ್ನಮಯ್ಯನವರ ಚರಿತ್ರೆಯನ್ನು ಸಾರುವ ಚಿತ್ರಗಳನ್ನೂ ಬಿಡಿಸಲಾಗುತ್ತಿದೆ.

ಎಲ್ಲಿಂದ ಎಲ್ಲಿಯವರೆಗೆ?
ತಿರುಚಾನೂರ್‌ನ ತನಪಲ್ಲೆ ಕ್ರಾಸ್‌ನಿಂದ ಕಪಿಲ ತೀರ್ಥಂವರೆಗಿನ ರಸ್ತೆಯಲ್ಲಿ ಸಾಗುವುದೆಂದರೆ ವಾಹನ ಸವಾರರಿಗೆ ಅತಿಯಾದ ಟ್ರಾಫಿಕ್‌ ದಟ್ಟಣೆಯು ಸಂಭವಿಸಿ ಕಿರಿಕಿರಿ ಎನಿಸುತ್ತಿತ್ತು. ಅದನ್ನು ನಿವಾರಿಸಲೆಂದೇ ತಿರುಚಾನೂರ್‌ನ ತಾನಾಪಲ್ಲೆ ಕ್ರಾಸ್‌ನಿಂದ, ಕಪಿಲ ತೀರ್ಥಂನಲ್ಲಿರುವ ನಂದಿ ಸರ್ಕಲ್‌ವರೆಗೆ ಈ ಫ್ಲೈ ಓವರ್‌ ನಿರ್ಮಿಸಲಾಗಿದೆ. 2018ರಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ಶುರುವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next