Advertisement
ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (YSRCP) ಸರಕಾರ ತಿರುಪತಿ ಲಡ್ದು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ಬೆನ್ನಲ್ಲೇ ಲ್ಯಾಬ್ ವರದಿ ದೃಢಪಟ್ಟಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಪಕ್ಷ ಆರೋಪವನ್ನು ನಿರಾಕರಿಸಿದೆ.
Related Articles
Advertisement
ಕಠಿನ ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಒತ್ತಾಯಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬುದು ಗಂಭೀರ ವಿಷಯವಾಗಿದ್ದು ಭಾಗಿಯಾಗಿರುವವರ ವಿರುದ್ಧ ಕಠಿನ ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ. ಆಂಧ್ರಪ್ರದೇಶದ ಹಿಂದಿನ ವೈಎಸ್‌ಆರ್ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು ಬಗ್ಗೆ ಎಲ್ಲರಿಗೂ ತಿಳಿದಿದೆ ಆದರೆ ಅದು ಈ ಮಟ್ಟಕ್ಕೆ ಕುಸಿಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲ್ಯಾಬ್ ವರದಿ ಧೃಡವಾಗುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿರುದ್ಧ ಜನರು ಕಿಡಿ ಕಾರುತ್ತಿದ್ದಾರೆ. ವರದಿಯಲ್ಲೇನಿದೆ?
ಜಾನುವಾರು, ಆಹಾರ ವಿಶ್ಲೇಷಣೆ ಮತ್ತು ಕಲಿಕಾ ಕೇಂದ್ರ(ಕಾಫ್) ದಿಂದ ಲಡ್ಡುವಿಗೆ ಬಳಸುವ ತುಪ್ಪದ ಮಾದರಿ ಪರೀಕ್ಷೆ
ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸದಿಂದ ತೆಗೆದ ಕೊಬ್ಬು ಪತ್ತೆ
ಹಂದಿಯ ಮಾಂಸದ ಪದರದಿಂದ ತೆಗೆದ ಘನ ಬಿಳಿ ಕೊಬ್ಬು ಸಹ ಪತ್ತೆ
ಜುಲೈ 9ರಂದು ಸಂಗ್ರಹವಾದ ಮಾದರಿ, ಜುಲೈ 16ರಂದು ವರದಿ ಪ್ರಕಟ
ವರದಿ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ