Advertisement

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯ

02:01 AM Dec 02, 2021 | Team Udayavani |

ತಿರುಪತಿ: ವರುಣನ ಆರ್ಭಟದಿಂದ ನಲುಗಿದ್ದ ವೆಂಕಟೇಶ್ವರನ ಸನ್ನಿಧಿ ತಿರುಮಲ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ದರ್ಶನ “ಭಾಗ್ಯ’ಕ್ಕಾಗಿ ಕಾಯಬೇಕು. ದರ್ಶನ ಖಾತರಿ ಇಲ್ಲದೆ ಬೆಟ್ಟಕ್ಕಿಲ್ಲ ಪ್ರವೇಶ!

Advertisement

ಹೌದು, ತಿಮ್ಮಪ್ಪನ ನೋಡಲು ತಿರುಪತಿ ಯತ್ತ ಹೋಗುವ ಮುನ್ನ ದರ್ಶನದ ಖಾತರಿ ಮಾಡಿ ಕೊಂಡೇ ಹೋಗಬೇಕಾಗಿದೆ. ಕೋವಿಡ್‌ ಮತ್ತು ಇತ್ತೀಚೆಗಿನ ಮಳೆಯಿಂದ ತಿರುಮಲದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಎಲ್ಲವೂ ಸಂಪೂರ್ಣ ಆನ್‌ಲೈನ್‌ಮಯವಾಗಿದ್ದು, ದರ್ಶನದ ಟಿಕೆಟ್‌ ತೋರಿಸಿದ ಬಳಿ ಕವಷ್ಟೇ ತಿರುಮಲಕ್ಕೆ ಪ್ರವೇಶಾವಕಾಶ ಸಿಗುತ್ತದೆ.

ಶ್ರೀವಾರಿ ಮೆಟ್ಟು ಬಂದ್‌
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶ್ರೀವಾರಿ ಮೆಟ್ಟು ಮಾರ್ಗ ಬಂದ್‌ ಆಗಿದ್ದು, ಸದ್ಯಕ್ಕೆ ಕಾಲ್ನಡಿಗೆ ಯಲ್ಲಿ ತೆರಳಿ ದರ್ಶನ ಪಡೆಯುವ “ಭಾಗ್ಯ’ವೂ ಸಿಗದು. ಇದರಿಂದಾಗಿ ಆನ್‌ಲೈನ್‌ ಬುಕಿಂಗ್‌ ಇಲ್ಲದೆಯೂ ಕಾಲ್ನಡಿಗೆಯಲ್ಲಿ ಹೋಗುವವರಿಗೆ ದರ್ಶನ ಪಡೆಯಲು ಇದ್ದ ಅವಕಾಶ ಬಂದ್‌ ಆದಂತಾಗಿದೆ. ಅಲ್ಲದೆ ಈ ಮಾರ್ಗ ದುರಸ್ತಿಯಾಗ ಬೇಕಿದ್ದು, ಆ ಬಳಿಕವಷ್ಟೇ ಕಾಲ್ನಡಿಗೆಯಲ್ಲಿಹೋಗಬಹುದು.

ಇದನ್ನೂ ಓದಿ:ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಪ್ರಸ್ತುತ ಡಿಸೆಂಬರ್‌ ಅಂತ್ಯದವರೆಗೂ ಉಚಿತ ದರ್ಶನದ ಟಿಕೆಟ್‌ ಮತ್ತು 300 ರೂ. ವಿಶೇಷ ದರ್ಶನದ ಟಿಕೆಟ್‌ ಲಭ್ಯವಿಲ್ಲ. ನಿತ್ಯ 12ರಿಂದ 15 ಸಾವಿರ ಮಂದಿಗಷ್ಟೇ ಅವಕಾಶ ಕಲ್ಪಿಸಿರುವುದರಿಂದ ಆನ್‌ಲೈನ್‌ನಲ್ಲಿ ನೋಂದಣಿ
ಪ್ರಾರಂಭವಾದ ಕ್ಷಣಗಳಲ್ಲಿ ಭರ್ತಿಯಾಗುತ್ತಿದೆ.

Advertisement

ಭಕ್ತರ ಸುರಕ್ಷೆಗೆ ಒತ್ತು
ಸತತ ಎರಡು ವರ್ಷ ಕೊರೊನಾ, ಇತ್ತೀಚೆಗೆ ಮಳೆಯಿಂದ ಉಂಟಾದ ಅನಾಹುತ ಇದರ ಬೆನ್ನಲ್ಲೇ ಒಮಿಕ್ರಾನ್‌ ಆತಂಕದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷೆಗೆ ಟಿಟಿಡಿ ಹೆಚ್ಚು ಒತ್ತು ಕೊಟ್ಟಿದ್ದು, ಆದಷ್ಟು ಕಡಿಮೆ ಜನರಿಗೆ ದರ್ಶನ ಅವಕಾಶ ಮಾಡಿಕೊಡುತ್ತಿದೆ.

ಭೂ ಕುಸಿತ
ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ತಿರುಪತಿಯಿಂದ ತಿರುಮಲಕ್ಕೆ ತೆರಳುವ ಬಸ್‌ ಮಾರ್ಗದಲ್ಲೂ ಭೂ ಕುಸಿತ ಉಂಟಾಗಿದೆ. ಬಸ್‌ ಸಂಚರಿಸುತ್ತಿದ್ದಾಗಲೇ ಕುಸಿತ ಸಂಭವಿಸಿದ್ದು, ಚಾಲಕ ವೇಗ ಕಡಿಮೆ ಮಾಡಿದ್ದರಿಂದ ಅವಘಡ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next