ಹೈದರಾಬಾದ್: ತಿರುಪತಿ ತಿಮ್ಮಪ್ಪ ದೇಗುಲ ಹೇಗೆ ಪ್ರಸಿದ್ಧಿಯೋ, ಅಲ್ಲಿನ ಲಡ್ಡೂ ಅಷ್ಟೇ ಜನಪ್ರಿಯ.
ಲಾಕ್‌ಡೌನ್ ಆದಾಗಿನಿಂದ ಭಕ್ತಾದಿಗಳಿಗೆ ತಿಮ್ಮಪ್ಪನ ದರ್ಶನ ಭಾಗ್ಯ ದೊರಕದ ಕಾರಣ, ತಿರುಪತಿ ತಿರುಮಲ ದೇವಸ್ಥಾನಂ ಶೇ.50ರ ರಿಯಾಯಿತಿಯಲ್ಲಿ ಲಡ್ಡು ಮಾರಾಟ ಮಾಡಲು ತೀರ್ಮಾನಿಸಿದೆ.
‘ಬೆಂಗಳೂರು ಸೇರಿದಂತೆ, ಚೆನ್ನೈ, ಹೈದರಾಬಾದ್ ಸುತ್ತಮುತ್ತಲಿನ ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಲಡ್ಡುಗಳು ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ. ಸುಬ್ಟಾರೆಡ್ಡಿ ಹೇಳಿದ್ದಾರೆ.
ಎಷ್ಟು ದರ? 175 ಗ್ರಾಂ ಲಡ್ಡನ್ನು 50 ರೂ. ಬದಲು 25 ರೂ.ಗೆ ನೀಡಲಾಗುತ್ತದೆ. ಅಚ್ಚರಿಯೆಂದರೆ, ಲಾಕ್‌ಡೌನ್ ಇದ್ದರೂ ಏಪ್ರಿಲ್ ತಿಂಗಳಿ ನಲ್ಲಿ ತಿಮ್ಮಪ್ಪನ ಇ- ಹುಂಡಿಗೆ ಬರೋಬ್ಬರಿ 1.97 ಕೋಟಿ ರೂ. ಕಾಣಿಕೆ ಬಂದಿದೆ.
ಕಳೆದ ವರ್ಷದ ಎಪ್ರಿಲ್‌ಗೆ ಹೋಲಿಸಿದರೆ, ಈ ಬಾರಿ 18 ಲಕ್ಷ ರೂ. ಅಧಿಕ. ಈ ಕಾರಣಕ್ಕಾಗಿ, ಶೇ.50ರ ರಿಯಾಯಿತಿಯಲ್ಲಿ ಲಡ್ಡು ಮಾರಲು ತೀರ್ಮಾನಿಸಲಾಗಿದೆ.
ಬೃಹತ್ ಪ್ರಮಾಣದಲ್ಲಿ ಲಡ್ಡು ಬಯಸುವವರು 9849575952, 9701092777 ನಂಬರನ್ನು ಸಂಪರ್ಕಿಸಿ.