Advertisement

ತಿರುಮಲ ವೆಂಕಟೇಶ್ವರ ದೇವಾಲಯದ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ?: ವರದಿ

11:46 AM Dec 26, 2022 | Team Udayavani |

ಆಂಧ್ರಪ್ರದೇಶ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯದ ಮುಖ್ಯ ಗರ್ಭಗುಡಿ 2023ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆ ಇದ್ದಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಭದ್ರತಾ ಸಿಬ್ಬಂದಿಯಾಗಿ ಪ್ರಯಾಣಿಕರಿಂದ ಚಿನ್ನ ಸುಲಿಗೆ;‌ ಇಬ್ಬರು ಹೆಡ್‌ ಕಾನ್ಸ್‌ ಟೇಬಲ್‌ ಗಳು ಅರೆಸ್ಟ್

“ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ(ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಟಿ) ನಿರ್ಧರಿಸಿದೆ” ಎಂದು ವರದಿ ವಿವರಿಸಿದೆ.

ನೂತನ ಚಿನ್ನದ ಲೇಪನ ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರುವರಿಯಲ್ಲಿ ಕೆಲಸ ಆರಂಭಗೊಳ್ಳಲಿದ್ದು, ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳು ಬೇಕಾಗಬಹುದು ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next