Advertisement
ಅದರಂತೆ, ವಾರಾಣಸಿ ವಿಮಾನನಿಲ್ದಾಣದೊಂದಿಗೆ ಖುಶಿ ನಗರ ಮತ್ತು ಗಯಾ ಏರ್‌ಪೋರ್ಟ್, ಅಮೃತಸರದೊಂದಿಗೆ ಕಾಂಗ್ರಾ, ಭುವನೇಶ್ವರದೊಂದಿಗೆ ತಿರುಪತಿ, ರಾಯ್ಪುರದೊಂದಿಗೆ ಔರಂಗಾಬಾದ್, ಇಂದೋರ್‌ನೊಂದಿಗೆ ಜಬಲ್ಪುರ ಮತ್ತು ತಿರುಚ್ಚಿಯೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ವಿಲೀನಗೊಳಿಸಲಾಗುತ್ತದೆ.
ಇದೇ ವೇಳೆ, ಮುಂದಿನ ವರ್ಷದ ಮಾರ್ಚ್ ವೇಳೆಗೆ ದೇಶದ 13 ವಿಮಾನನಿಲ್ದಾಣಗಳ ಖಾಸಗೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಬಿಡ್ಡಿಂಗ್ ಮಾಡಲು 13 ಏರ್‌ಪೋರ್ಟ್‌ಗಳ ಪಟ್ಟಿಯನ್ನು ಈಗಾಗಲೇ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲೇ ಬಿಡ್ಡಿಂಗ್ ಪೂರ್ಣಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯಸ್ಥ ಸಂಜೀವ್ ಕುಮಾರ್ ತಿಳಿಸಿದ್ದಾರೆ ಎಂದು “ದ ಇಕನಾಮಿಕ್ ಟೈಮ್ಸ್’ವರದಿ ಮಾಡಿದೆ.
Related Articles
Advertisement
ಪ್ರಯಾಣಿಕನಿಂದ ಬರುವ ತಲಾ ಆದಾಯದ ಮಾದರಿಯನ್ನು ಬಿಡ್ಡಿಂಗ್‌ಗೆ ಅನುಸರಿಸಲಾಗುತ್ತದೆ. ಈ ಮಾದರಿಯನ್ನು ಈ ಹಿಂದೆಯೂ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಜೇವಾರ್ ಏರ್‌ಪೋರ್ಟ್(ಗ್ರೇಟರ್ ನೋಯ್ಡಾ)ನ ಬಿಡ್ಡಿಂಗ್ ಪ್ರಕ್ರಿಯೆಯೂ ಇದೇ ಮಾದರಿಯಲ್ಲಿ ನಡೆದಿತ್ತು.
ಯಾವ ಏರ್‌ಪೋರ್ಟ್‌ನಲ್ಲಿ ಯಾವುದು ವಿಲೀನ?1. ತಿರುಚ್ಚಿ ವಿಮಾನ ನಿಲ್ದಾಣದೊಂದಿಗೆ ಹುಬ್ಬಳ್ಳಿ
2. ವಾರಾಣಸಿಯೊಂದಿಗೆ ಕುಶಿನಗರ ಮತ್ತು ಗಯಾ
3. ಭುವನೇಶ್ವರದೊಂದಿಗೆ ತಿರುಪತಿ
4. ರಾಯ್ಪುರದೊಂದಿಗೆ ಔರಂಗಾಬಾದ್
5. ಇಂದೋರ್‌ನೊಂದಿಗೆ ಜಬಲ್ಪುರ
6. ಅಮೃತಸರದೊಂದಿಗೆ ಕಾಂಗ್ರಾ