Advertisement

ತೀರ್ಥಹಳ್ಳಿ ಹೊಸ ಫ್ಲೈ ಓವರ್: ಭಾರತಿಪುರ ಕ್ರಾಸ್ ನಿಂದ ಪಟ್ಟಣಕ್ಕೆ ಸಂಪರ್ಕ

04:17 PM Jul 03, 2023 | Vishnudas Patil |

ತೀರ್ಥಹಳ್ಳಿ : ಭಾರತಿಪುರ ಕ್ರಾಸ್ ಬಳಿ ಸುಮಾರು 56 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಭಾರತಿಪುರದಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಸಂಪರ್ಕಿಸುವ ಈ ಫ್ಲೈ ಓವರ್ ಕಾಮಗಾರಿ ಡಿಸೆಂಬರ್ ನಲ್ಲಿ ಶುರುವಾಗಿದ್ದು 2024 ಜೂನ್ ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

Advertisement

ಮಳೆಗಾಲದ ಸಮಯದಲ್ಲಿ ಗುಡ್ಡ ಕುಸಿತ, ನೀರಿನ ತೊಂದರೆಗಳ ಜೊತೆ ಭಾರತಿಪುರ ಕ್ರಾಸ್ ನಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಇದೀಗ ಅಪಘಾತ ತಪ್ಪಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ.

ತೀರ್ಥಹಳ್ಳಿ ಅಭಿವೃದ್ಧಿಯಲ್ಲಿ ಹೆಚ್ಚು ಕೊಡುಗೆ ನೀಡಿರುವ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಈ ಫ್ಲೈ ಓವರ್ ಮಂಜೂರು ಮಾಡಿಸಿದ್ದರು.

ಭಾರತಿಪುರ ತಿರುವಿನಲ್ಲಿ ನೆಡೆದ ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದ ಆರಗ ಜ್ಞಾನೇಂದ್ರ ತಮಗಾದ ನಷ್ಟ ಮತ್ತೊಬ್ಬರಿಗೆ ಆಗಬಾರದು ಎಂಬ ಕಾರಣಕ್ಕೆ ಈ ಫ್ಲೈ ಓವರ್ ತಂದಿದ್ದಾರೆ. ತೀರ್ಥಹಳ್ಳಿಗೆ ಇದೊಂದು ಹೊಸ ಕಳೆ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next