Advertisement

ತೆಪ್ಪೋತ್ಸವ ಬದಲು ದೇವಿಗೆ ತೀರ್ಥ ಸ್ನಾನ

12:23 PM Oct 22, 2021 | Team Udayavani |

ಮೈಸೂರು: ಕೋವಿಡ್‌ 19 ಹಿನ್ನೆಲೆ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ ಬದಲಿಗೆ ತೀರ್ಥಸ್ನಾನವನ್ನು ಸರಳವಾಗಿ ನೆರವೇರಿಸಲಾಯಿತು. ಪ್ರತಿವರ್ಷ ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗುತ್ತಿದ್ದ ದೇವಿಯ ತೆಪ್ಪೋತ್ಸವ ಈ ಬಾರಿಯೂ ಕೊರೊನಾ ಹಿನ್ನೆಲೆ ಕಳೆದ ವರ್ಷದಂತೆ ತೀರ್ಥಸ್ನಾನ ಮಾಡಿಸಲಾಯಿತು.

Advertisement

ಬೆಳಗ್ಗೆ ಚಿನ್ನಾಭರಣಗಳಿಂದ ಅಲಂಕೃತಗೊಂಡ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನ ಆವರಣದಿಂದ ದೇವಿಕೆರೆ ವರೆಗೆ ಮೆರವಣಿಗೆ ಮೂಲಕ ತರಲಾಯಿತು.

ಇದನ್ನೂ ಓದಿ:- ಅಕ್ಕಮಹಾದೇವಿ ವಿವಿಗೆ ನಿರಾಸಕ್ತಿಯ ಬರೆ

ಅಲ್ಲಿ ಪ್ರಧಾನ ಆಗಮಿಕ ಶಶಿಶೇಖರ್‌ ದೀಕ್ಷಿತರ ನೇತೃತ್ವದಲ್ಲಿ ದೇವಿಗೆ ಪೂಜೆ ನೆರವೇರಿಸಿ, ತೀರ್ಥ ಸ್ನಾನ ನೆರವೇರಿಸಲಾಯಿ. ಈ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿತ್ತು. ಜಿಲ್ಲಾಡಳಿತ ಪರವಾಗಿ ಅಪರ ಜಿಲ್ಲಾಧಿಕಾರಿ ಎಸ್‌. ಮಂಜುನಾಥ್‌, ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ಯತಿರಾಜು ಸಂಪತ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next