ನವದೆಹಲಿ: ದಿನಂಪ್ರತಿ ವಾಟ್ಸಾಪ್ ಮೂಲಕ ಸಾವಿರಾರು ಸಂದೇಶಗಳು ಹರಿದುಬರುತ್ತವೆ. ಇದರಲ್ಲಿ ಫೋಟೋ, ವಿಡಿಯೋ, ಜಿಫ್ ಫೈಲ್ಸ್, ಡಾಕ್ಯುಮೆಂಟ್ಸ್, ಫಾರ್ವರ್ಡ್ ಮೆಸೇಜ್ ಮುಂತಾದವೆಲ್ಲವೂ ಸೇರಿರುತ್ತದೆ. ಪರಿಣಾಮವೆಂಬಂತೆ ಫೋನ್ ಮೆಮೋರಿ ಅಥವಾ ಡಿವೈಸ್ ಸ್ಟೋರೇಜ್ ಭರ್ತಿಯಾಗುತ್ತಾ ಬರುತ್ತದೆ. ಇದರಿಂದ ಹಲವು ವಾಟ್ಸಾಪ್ ಬಳಕೆದಾರರು ಬೇಸತ್ತಿರುತ್ತಾರೆ. ಇದಕ್ಕೇನು ಪರಿಹಾರ ? ಮುಂದೆ ಓದಿ….
ಇಂಟರ್ ನೆಟ್ ಆನ್ ಮಾಡಿದಾಕ್ಷಣ ‘ಗುಡ್ ಮಾರ್ನಿಂಗ್’ ‘ಗುಡ್ ನೈಟ್’ ಗೆ ಸಂಬಂಧಿಸಿದ ಫೋಟೋಗಳು, ರಾಶಿಯಾಗಿ ನಮ್ಮ ವಾಟ್ಸಾಪ್ ಗೆ ಬಂದು ಬೀಳುತ್ತವೆ. ಮಾತ್ರವಲ್ಲದೆ ಜೀವನ ಮೌಲ್ಯವನ್ನು ತಿಳಿಸುವ ವಿಡಿಯೋಗಳು, ಟ್ರೋಲ್ ಇಮೇಜ್ ಗಳು, ಕೋವಿಡ್ ನಿಂದ ಹೇಗೆ ಪಾರಾಗಬಹುದು ಎಂದು ಮುಂತಾದ ಫಾರ್ವರ್ಡ್ ಸಂದೇಶಗಳನ್ನು ಕಾಣಬಹುದು. ಆದರೇ ಇವುಗಳಿಂದ ನಮ್ಮ ಮೊಬೈಲ್ ಸ್ಟೋರೇಜ್ ಭರ್ತಿಯಾಗುವುದು ಮಾತ್ರವಲ್ಲದೆ, ಅನಗತ್ಯ ಜಂಕ್ ಫೈಲ್ ಗಳು ಶೇಖರಣೆಯಾಗುತ್ತಾ ಬರುತ್ತದೆ. ಇವುಗಳಿಂದ ಪಾರಾಗಲು ವಾಟ್ಸಾಪ್ ನಲ್ಲಿರುವ ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದು ಒಳಿತು.
ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದರಿಂದ ಫೋಟೋ, ಆಡಿಯೋ, ವಿಡಿಯೋ, ಡಾಕ್ಯುಮೆಂಟ್ಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು. ಯಾರಾದರೂ ಪೋಟೋ, ವಿಡಿಯೋ ಇತರ ಫೈಲ್ಸ್ ಕಳುಹಿಸಿದಾಗ ಅಗತ್ಯವಿದ್ದರೇ ಮಾತ್ರ ಟ್ಯಾಪ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಥವಾ ಸೆಟ್ಟಿಂಗ್ಸ್ ನಲ್ಲಿರುವ Media visibility ಆಯ್ಕೆಯನ್ನು ರದ್ದು ಪಡಿಸಿದರೆ ಯಾವುದೇ ಫೈಲ್ ಗಳು ಕೂಡ ನಮ್ಮ ಮೊಬೈಲ್ ಸ್ಟೋರೇಜ್ ಗೆ ಡೌನ್ ಲೋಡ್ ಆಗುವುದಿಲ್ಲ.
ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದು ಹೇಗೆ ?
ಆ್ಯಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ಸ್ ನಲ್ಲಿರುವ ಡೇಟಾ ಮತ್ತು ಸ್ಟೋರೇಜ್ ಆಯ್ಕೆಯನ್ನು ಕ್ಲಿಕ್ ಮಾಡಿ
ಬಳಿಕ ಮೀಡಿಯಾ ಅಟೋ ಡೌನ್ ಲೋಡ್ ಎಂಬಲ್ಲಿ when using mobile data, when connected on WiFi and when on roaming ಈ ಮೂರು ಅಯ್ಕೆಯನ್ನು ಕೂಡ ನಿಷ್ಕ್ರೀಯಗೊಳಿಸಿ.