Advertisement
ಇದನ್ನೂ ಓದಿ:
Related Articles
Advertisement
ಸುಲ್ತಾನ್ ಬತ್ತೇರಿ ಕಥೆ ಶ್ರೀಮಂತ ಮತ್ತು ಸಂಕೀರ್ಣವಾಗಿದೆ. ನವಶಿಲಾಯುಗದ ಬೇರುಗಳನ್ನು ಹೊಂದಿರುವ ಈ ಪಟ್ಟಣವು ಬುಡಕಟ್ಟು ಜನಾಂಗ, ಆಕ್ರಮಣಕಾರರು ಮತ್ತು ವಸಾಹತುಶಾಹಿ ಆಡಳಿತಗಾರರ ವೈವಿಧ್ಯತೆಯ ಸಂಸ್ಕೃತಿಯನ್ನು ಕಂಡಿತ್ತು.
ಸುಲ್ತಾನ್ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಡೆದಿದೆ. ಕುತೂಹಲದ ಸಂಗತಿ ಅಂದರೆ ಮಲಬಾರ್ ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಈ ಪಟ್ಟಣ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್ ಯಾರ್ಡ್ ಆಗಿತ್ತಂತೆ!
ಒಂದು ಕಾಲದಲ್ಲಿ ಜೈನ ದೇವಾಲಯವಿದ್ದ ಈ ಪಟ್ಟಣದ ಮೇಲೆ ಫಿರಂಗಿ ದಾಳಿ ನಡೆದಿತ್ತು. ಈ ಪಟ್ಟಣದ ಮೂಲ ಹೆಸರು “ಗಣಪತಿವಟ್ಟಂ” ಎಂದಾಗಿತ್ತು. ಸುಲ್ತಾನ್ ಬತ್ತೇರಿ ಮುನ್ಸಿಪಲ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ, ಹಿಂದೆ ಗಣಪತಿ ದೇವಾಲಯ ಇದ್ದ ಹಿನ್ನೆಲೆಯಲ್ಲಿ ಗಣಪತಿವಟ್ಟಂ ಎಂಬ ಹೆಸರಿನಿಂದ ಪಟ್ಟಣವನ್ನು ಗುರುತಿಸುತ್ತಿದ್ದರು.
17ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಮಲಬಾರ್ ಪ್ರದೇಶದ ಮೇಲೆ ದಂಡೆತ್ತಿ ಬಂದಿದ್ದ. ಬಳಿಕ ಟಿಪ್ಪು ಸೇನೆ ಗಣಪತಿವಟ್ಟಂ ಪಟ್ಟಣವನ್ನು ಬ್ಯಾಟರಿ ಶೇಖರಿಸಿ ಇಡುವ ಸ್ಥಳವನ್ನಾಗಿ ಬಳಸಿಕೊಂಡಿದ್ದು…ಹೀಗೆ ಈ ಪಟ್ಟಣ ಸುಲ್ತಾನ್ ನ ಬ್ಯಾಟರಿ ಪ್ರದೇಶ ಎಂದೇ ಪ್ರಸಿದ್ಧವಾಯಿತು. ಇಲ್ಲಿ ಟಿಪ್ಪು ಸುಲ್ತಾನ್ ಕೋಟೆಯೊಂದನ್ನು ಕಟ್ಟಿಸಿದ್ದ, ಆದರೆ ಅದು ಈಗ ಪಾಳುಬಿದ್ದಿದೆ.
ಈ ಪ್ರದೇಶದಲ್ಲಿ ಟಿಪ್ಪು ಸೇನೆ ಬ್ಯಾಟರಿಯನ್ನು ತಯಾರಿಸುತ್ತಿತ್ತು. ಇದರಿಂದಾಗಿ ಪಟ್ಟಣಕ್ಕೆ ಸುಲ್ತಾನ್ ಬತ್ತೇರಿ ಎಂದೇ ಹೆಸರಾಯಿತು. ಈ ಹೆಸರು ಅಧಿಕೃವಾಗಿದ್ದು, ಇದೀಗ ಭಾರತೀಯ ಜನತಾ ಪಕ್ಷ ಹೆಸರನ್ನು ಬದಲಾಯಿಸಿ ಗಣಪತಿವಟ್ಟಂ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದೆ. ವಿಜಯನಗರ ಆಡಳಿತದ ಸಂದರ್ಭದಲ್ಲಿ 13ನೇ ಶತಮಾನದಲ್ಲಿ ಈ ಪಟ್ಟಣದಲ್ಲಿ ಜೈನ ಸಮುದಾಯ ವಾಸವಾಗಿತ್ತು. ಅಂದು ಕಟ್ಟಿಸಿದ್ದ ಜೈನ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ಸ್ಮಾರಕವನ್ನಾಗಿ ಮಾಡಿ ರಕ್ಷಿಸುತ್ತಿದೆ.