Advertisement
ಹೊಸನಗರ ತಾಲೂಕಿನ ತೋಟವೊಂದರಲ್ಲಿ ಬಾವಿಯ ಮಣ್ಣು ತೆಗೆಯುತ್ತಿದ್ದಾಗ ಈ ರಾಕೆಟ್ ಪತ್ತೆಯಾಗಿತ್ತು. ನಂತರ ಉತVನನ ನಡೆಸಿದಾಗ 1700 ರಾಕೆಟ್‌ಗಳು ದೊರಕಿದ್ದವು. 34 ಸೆಂಮೀ ಉದ್ದ, 5 ಸೆಂ.ಮೀ. ಅಗಲವಿರುವ ಈ ರಾಕೆಟ್ ಈವರೆಗೆ ಪತ್ತೆಯಾಗಿರುವ ರಾಕೆಟ್‌ಗಳಲ್ಲೇ ದೊಡ್ಡ ಗಾತ್ರದ್ದಾಗಿದೆ. ಈ ಪ್ರದೇಶದಲ್ಲಿ ರಾಕೆಟ್ ಹಾಗೂ ಆಯುಧಗಳ ಹಿಡಿಕೆ ದೊರೆತಿದ್ದರಿಂದ ಟಿಪ್ಪು ಆಳ್ವಿಕೆಯ ಕಾಲದಲ್ಲಿ ಇಲ್ಲಿ ಆಯುಧ ಶಾಲೆ, ಅಥವಾ ಆಯುಧ ಉಗ್ರಾಣ ಇದ್ದಿರಬಹುದೆನ್ನಲಾಗಿದೆ. ಇಲ್ಲಿ ದೊರೆತಿರುವ ರಾಕೆಟ್‌ಗಳನ್ನು ಶಿವಪ್ಪ ನಾಯಕ ಅರಮನೆ ಸರಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿತ್ತು. ಈ ರಾಕೆಟ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
Related Articles
ಈಗಿನ ಬಿದನೂರು (ನಗರ) ಹೈದರಾಲಿ ಅವರ ಅಳ್ವಿಕೆಯ ಕಾಲದಲ್ಲಿ ಹೈದರ್ ನಗರವಾಗಿತ್ತು. ಕ್ರಿ.ಶ. 1768ರಲ್ಲಿ ಮಂಗಳೂರು ಕೋಟೆಯು ಬ್ರಿಟಿಷರ ವಶದಲ್ಲಿದ್ದಾಗ ಹೈದರಾಲಿ ಬಿದನೂರಿಂದ ಇಪ್ಪತ್ತು ಸಾವಿರ ಸೈನಿಕರೊಡಗೂಡಿ ರಾಕೆಟ್ ಪ್ರಯೋಗ ಮಾಡಿದ್ದ ಎಂಬ ಉಲ್ಲೇಖವಿದೆ. ಬಳಿಕ ಟಿಪ್ಪುವಿನ ಮರಣಾ ನಂತರ ಬ್ರಿಟೀಷರು ಶ್ರೀರಂಗಪಟ್ಟಣದಲ್ಲಿರುವ ರಾಕೆಟ್‌ಗಳನ್ನು ಕ್ರಿ.ಶ. 1800ರಲ್ಲಿ ಇಂಗ್ಲೆಂಡ್‌ನ ವುಲ್‌ವಿಚ್ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ವಿಲಿಯಮ್ ಕಾಂಗ್ರಿವ್ ಮೊದಲ ಬಾರಿಗೆ 1804ರಲ್ಲಿ ರಾಕೆಟ್‌ಗಳನ್ನು ಉತ್ಪಾದಿಸಿ 1805ರಲ್ಲಿ ಫ್ರಾನ್ಸ್‌ನ ಬೊಲೊನೆಯ ಬಂದರಿನಲ್ಲಿ ಉಡಾಯಿಸಲು ಬಳಸಿದರು. ಈ ತಂತ್ರಜ್ಞಾನದಿಂದ ಇಂಗ್ಲೆಂಡ್ ಫ್ರಾನ್ಸ್‌ನು° ಸುಲಭವಾಗಿ ಸೋಲಿಸಿತ್ತು. ನಂತರ ರಾಕೆಟ್ ಬಳಕೆ ಹೆಚ್ಚಾಯಿತು ಎನ್ನಲಾಗಿದೆ.
Advertisement
ಈ ರಾಕೆಟ್‌ಗಳಿಗೆ ಬಳಸುವ ಕಬ್ಬಿಣ ಮೃದುವಾಗಿರುವುದರಿಂದ ಇಲ್ಲಿನ ಕಂಬಾರರು ರಾಕೆಟ್‌ಗಳ ತಯಾರಿಕೆಯಲ್ಲಿ ನಿಪುಣರಾಗಿದ್ದರು ಎಂಬುದು ತಿಳಿಯಲಿದೆ. ಶಿವಪ್ಪ ನಾಯಕ ಅರಮನೆಯಲ್ಲಿ ಮುಂದಿನ ದಿನಗಳಲ್ಲಿ ಬಿದನೂರಿನ ರಾಕೆಟ್‌ಗಳ ಗ್ಯಾಲರಿಯನ್ನು ತುರ್ತಾಗಿ ಆರಂಭಿಸಲಾಗುವುದು, ಅನ್ವೇಷಣೆ ಕೈಗೊಳ್ಳಲಾಗುವುದು.– ಟಿ. ವೆಂಕಟೇಶ್, ಆಯುಕ್ತರು, ಪುರಾತತ್ವ ಇಲಾಖೆ – ಶರತ್ ಭದ್ರಾವತಿ