Advertisement

ಸದನದಲ್ಲಿ ಪ್ರತಿಧ್ವನಿಸಿದ ಟಿಪ್ಪು ಜಯಂತಿ 

06:00 AM Dec 14, 2018 | Team Udayavani |

ವಿಧಾನಪರಿಷತ್‌: ಟಿಪ್ಪು ಜಯಂತಿ ಆಚರಣೆ ವಿಚಾರ ಗುರುವಾರ ವಿಧಾನಪರಿಷತ್‌ನಲ್ಲಿ ಬಿಸಿ, ಬಿಸಿ ಚರ್ಚೆಗೆ ಕಾರಣವಾಯಿತು. ನಾಲ್ಕು ಬಾರಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ, ನಾಲ್ಕು ಬಾರಿ ಕಲಾಪ ಮುಂದೂಡಿಕೆ ಹಾಗೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ, ಆರೋಪ ಮತ್ತು ಪ್ರತ್ಯಾರೋಪಕ್ಕೆ ಸದನ ಸಾಕ್ಷಿಯಾಯಿತು.

Advertisement

ಮಧ್ಯಾಹ್ನ 1.40ಕ್ಕೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬುಧವಾರ ಸುನೀಲ್‌ ಸುಬ್ರಮಣ್ಯ ಅವರು ಈ ವಿಷಯ ಪ್ರಸ್ತಾಪ ಮಾಡಿದ್ದರು. ಅದರಂತೆ ಇದು ಕಾರ್ಯಸೂಚಿಯಲ್ಲಿ ದಾಖಲಾಗಬೇಕಿತ್ತು. ಆದರೆ,
ಇದನ್ನು ಕಾರ್ಯಸೂಚಿ ಪಟ್ಟಿಯಿಂದ ಕೈಬಿಡಲಾಗಿದೆ. ಸರ್ಕಾರ ಈ ವಿಷಯದಲ್ಲಿ ಉತ್ತರ ನೀಡದೆ ಪಲಾಯನ ಮಾಡುತ್ತಿದೆ. ಟಿಪ್ಪು ಜಯಂತಿ ಆಚರಣೆಯಿಂದ ಕೊಡವರಿಗೆ ಬಹಳ ಆಘಾತವಾಗಿದೆ. ಇದರ ಬಗ್ಗೆ ಉತ್ತರ ನೀಡಬೇಕಾದ ಸರ್ಕಾರ ಅದರಿಂದ 
ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಸರಕಾರದ ಕ್ರಮ ಪ್ರಶ್ನಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಇದಕ್ಕೆ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ಟಿಪ್ಪು ವಿಚಾರದಲ್ಲಿ ಏನೂ ಬಂಡವಾಳ ಉಳಿದಿಲ್ಲ. ಅನಗತ್ಯವಾಗಿ ನೀವು ಇದನ್ನು ಎಳೆದು ತರುತ್ತಿದ್ದೀರಿ. ಸರಕಾರ ಪಲಾಯನ ಮಾಡುತ್ತಿಲ್ಲ. ನಾವು ಸೂಕ್ತ
ಉತ್ತರ ನೀಡುತ್ತೇವೆ. ಆದರೆ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಸದನದ ಸಮಯ ಹಾಳು ಮಾಡಬಾರದು. ಜನರ ಹೊಟ್ಟೆಪಾಡಿನ ವಿಚಾರ ನೋಡಿ. ಟಿಪ್ಪು ವಿಷಯ ನಿಮಗೆ ಹೊಟ್ಟೆ ತುಂಬಿಸುತ್ತದೆಯೇ ಎಂದು ಛೇಡಿಸಿದರು. ವಿರೋಧ
ಪಕ್ಷದ ಸದಸ್ಯರು ಮತ್ತೆ ಪ್ರತಿಭಟನೆ ನಡೆಸಲು ಆರಂಭಿಸಿದಾಗ ಸಭಾಪತಿಗಳು ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.

ಮಧ್ಯಾಹ್ನ ಭೋಜನ ವಿರಾಮದ ನಂತರ ಕಲಾಪ 3.35ಕ್ಕೆ ಆರಂಭವಾದಾಗ ಯಾವ ಸಚಿವರೂ ಸದನಕ್ಕೆ ಬಂದಿರಲಿಲ್ಲ. ಇದರಿಂದ ಸಭಾಪತಿಗಳು 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ
ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರ ಉತ್ತರ ಕೊಡದೆ ಪಲಾಯನ ಮಾಡಿದೆ. ಸಭಾಪತಿಗಳು ಸಚಿವರು ಇಲ್ಲದ ಕಾರಣ ಸದನ ಮುಂದೂಡಿದ್ದಾರೆ. ಇದು ಸಚಿವರಿಲ್ಲದ ಸದನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ 3.55ಕ್ಕೆ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಈ ಅಧಿವೇಶನ  ಮುಗಿಯುವುದರೊಳಗೆ ಈ ಬಗ್ಗೆ ಉತ್ತರ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದರಿಂದ ತೃಪ್ತರಾಗದ ಪ್ರತಿಪಕ್ಷದವರು ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ನಡೆದವು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿಗಳು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಯಾವಾಗ ಉತ್ತರ ಕೊಡಬೇಕು ಎಂಬುದನ್ನು ಸಚಿವರು ಹೇಳುತ್ತಾರೆ. ನಿಮಗೆ ಎರಡು ಗಂಟೆ ಕಾಯಲು ಆಗುವದಿಲ್ಲವೇ. ಸುಗಮ ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸಭಾಪತಿಗಳ ಮಾತಿಗೆ ಮನ್ನಣೆ ನೀಡಿದ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಕೈಬಿಟ್ಟು, ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಆಗ ಆಡಳಿತ ಪಕ್ಷದ ರಿಜ್ವಾನ್‌, ಶ್ರೀನಿವಾಸ ಮಾನೆ, “ನಮಗೆ ಶೇಮ್‌, ಶೇಮ್‌ ಎಂದು ಕೂಗಿದ್ದಾರೆ’ ಎಂದು ಆರೋಪಿಸಿ ಪ್ರತಿಪಕ್ಷದ ಸದಸ್ಯರು ಮತ್ತೆ ಬಾವಿಗೆ ಇಳಿದು ಪ್ರತಿಭಟನೆ ನಡೆಸಲಾರಂಭಿಸಿದರು. ತಮ್ಮ ವಿರುದಟಛಿ ಕೂಗಿದ ಸದಸ್ಯರ ವಿರುದಟಛಿ ಧಿಕ್ಕಾರ ಹಾಕಿದರು.

Advertisement

ಗಲಾಟೆ ಜೋರಾದಾಗ ಸಭಾಪತಿಗಳು ಪುನ: ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಕ್ರಮದ ಪರಿಶೀಲನೆ: ಸಭಾಪತಿ ಪ್ರತಾಪ್‌ಚಂದ್ರಶೆಟ್ಟಿ ಮಾತನಾಡಿ, ಸದನದಲ್ಲಿ ಶೇಮ್‌, ಶೇಮ್‌ ಎಂದು ಹೇಳಿದ್ದು ತಪ್ಪು. ಯಾರು ಈ ರೀತಿ ಹೇಳಿದ್ದಾರೆ
ಎಂಬುದನ್ನು ಪರಿಶೀಲಿಸಿ ಅವರ ವಿರುದಟಛಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನಂತರ ಮಾತನಾಡಿದ  ಸಭಾನಾಯಕಿ ಜಯಮಾಲಾ, ನಾವು ಪ್ರತಿಪಕ್ಷ ಸದಸ್ಯರಿಗೆ ಶೇಮ್‌, ಶೇಮ್‌ ಎಂದು ಹೇಳಿಲ್ಲ. ಒಂದು ವೇಳೆ ಹೇಳಿದ್ದರೆ ಅದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.

ಮಾಣಿಪ್ಪಾಡಿ ವರದಿ ಜಾರಿಗೆ ಬಿಜೆಪಿ ಆಗ್ರಹ 
ವಿಧಾನಪರಿಷತ್ತು: ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಲು ಅನುಮತಿ ನೀಡುವಂತೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿ, ರಾಜ್ಯದಲ್ಲಿ 2 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ 56 ಸಾವಿರ ಎಕರೆಗೂ ಅಧಿಕ ವಕ್ಫ್ ಆಸ್ತಿ ಕಬಳಿಕೆಯಾಗಿ ದೆ. ಇದೊಂದು ದೊಡ್ಡ ಹಗರಣವಾಗಿದ್ದು, ಕೂಡಲೇ ಸರ್ಕಾರ ಮಾಣಿಪ್ಪಾಡಿ ವರದಿ ಅನುಷ್ಠಾನಗೊಳಿಸಬೇಕು.
ಈ ಕುರಿತು ಸದನದಲ್ಲಿ ಚರ್ಚಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಆದರೆ ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ಸಭಾಪತಿಗಳು ಮೊದಲು ಪ್ರಶ್ನೋತ್ತರ, ಶೂನ್ಯವೇಳೆ ಕಲಾಪ ಮುಗಿಸಿ ನಂತರ ನೋಡೋಣ ಎಂದು ಸದಸ್ಯರನ್ನು ಸಮಾಧಾನಗೊಳಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next