Advertisement
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಟಿಪ್ಪು ಜಯಂತಿಯನ್ನು ರದು ್ದಮಾಡಿ ರಾಜ್ಯ ಸರ್ಕಾರ ಅಪಚಾರವೆಸಗಿದೆ. ಸರ್ಕಾರ ತನ್ನ ಸಣ್ಣ ತನ ತೋರದೆ ತಕ್ಷಣ ತನ್ನ ಆದೇಶವನ್ನು ಹಿಂಪಡೆಯಬೇಕು. ಸರ್ಕಾರದಿಂದಲೇ ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂದರು.
Related Articles
Advertisement
ತಮಗಿಷ್ಟ ಬಂದಹಾಗೆ ಆಡಳಿತ: 5 ವರ್ಷ ಆಡಳಿತ ಕೊಡುವ ಮುಖ್ಯಮಂತ್ರಿಗಳು ಅಧಿಕಾರ ಹಿಡಿಯಬೇಕು. ಆದರೆ, ಈಗ 3 ತಿಂಗಳಿಗೊಮ್ಮೆ ಹೊಸ ಮುಖ್ಯಮಂತ್ರಿ ಬರುವಂತಾಗಿದೆ. ಪ್ರತಿಭಾರಿ ಮುಖ್ಯಮಂತ್ರಿಗಳು ಬದಲಾದರೆ ಹಿಂದಿನ ಸಿಎಂ ಆದೇಶಗಳನ್ನೆಲ್ಲ ಬದಲಾಯಿಸಲಾಗುತ್ತಿದೆ. ಟಿಪು ಜಯಂತಿ ವಿಚಾರದಲ್ಲಿ ಆಗಿದ್ದು ಇದೆ. ಪ್ರತಿ ಮುಖ್ಯಮಂತ್ರಿಯೂ ತನಗಿಷ್ಟ ಬಂದಹಾಗೆ ಆಡಳಿತ ನಡೆಸುತ್ತಿದ್ದಾರೆ. ಜಯಂತಿ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ಸು ಪಡೆದು ಆತನ ಜಯಂತಿಯನ್ನು ವೈಭವವಾಗಿ ಆಚರಿಸದಿದ್ದರೆ, ತಮ್ಮ ಸಂಘಟನೆಯವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಇದೇ ಭಾನುವಾರ ಟಿಪ್ಪು ಸುಲ್ತಾನನ ಸಮಾಧಿಯ ಬಳಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ತಮಿಳುನಾಡಿಗೆ ನೀರು ಕೊಡಬೇಡಿ: ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರು, ರಾಮನಗರ, ಚಾಮರಾಜನಗರ ಹೀಗೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರದಾಟ ಇದೆ. 20 ದಿನಗಳಿಗೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಇದೆ. ಕಾವೇರಿ ಕಣಿವೆಯಲ್ಲಿ ಕೆರೆ, ಕಟ್ಟೆಗಳು ಒಣಗಿವೆ. ಕೃಷಿಗೆ ನಿರಿಲ್ಲದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು. ರಾಜ್ಯ ಸರ್ಕಾರ ಇಲ್ಲಿನ ಗಂಭೀರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಲ ಸಚಿವರು ಸಹ ಮೇಕೆದಾಟು ಯೋಜನೆ ವಿಚಾರವನ್ನು ಮರೆತರು. ರಾಜ್ಯ ಸರ್ಕಾರದ ಗಮನ ಸೆಳೆಯಲು ತಾವು ಮುಂದಿನ ವಾರ ಮೇಕೆದಾಟಿನಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರೆವೇರಿಸುವುದಾಗಿ ತಿಳಿಸಿದರು.