Advertisement

ತಿಪಟೂರು: ಕುಡಿವ ನೀರಿಗೆ ಹಾಹಾಕಾರ

06:49 AM Jun 02, 2020 | Lakshmi GovindaRaj |

ತಿಪಟೂರು: ತಾಲೂಕಿನ ಕೆಲ ಭಾಗಗಳಲ್ಲಿ ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ನಗರ ಮತ್ತು ಹಳ್ಳಿಗಳ ಕುಡಿವ ನೀರಿನ ಸಮಸ್ಯೆ ಜೊತೆಗೆ, ಅಂತರ್ಜಲ ಪಾತಾಳ ಸೇರುವುದ ರಿಂದ ರೈತರ ಸ್ಥಿತಿ  ಶೋಚನೀಯವಾಗಿದೆ. ತಾಲೂಕಾದ್ಯಂತ ಜನರು ಹನಿ ನೀರಿಗೂ ಪರದಾಡು ವಂತಾಗಿದೆ.

Advertisement

ಹಳ್ಳಿಗಳಲ್ಲಿಯೂ ಇದೇ ಸ್ಥಿತಿ ನಿರ್ಮಾಣ ವಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಪ್ರತಿನಿತ್ಯ  ದೂರದ ತೋಟಗಳಿಗೆ ಹೋಗಿ ನೀರು ತರುವಂತಹ  ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಗ್ರಾಮಗಳಲ್ಲಿನ ಬೋರ್‌ವೆಲ್‌ಗ‌ಳು ನೀರಿಲ್ಲದೆ ಬತ್ತಿಹೋಗಿವೆ. ಹೊಸ ಬೋರ್‌ವೆಲ್‌ಗ‌ಳನ್ನು ಕೊರೆಸುವ ಬಗ್ಗೆ ತಾ.ಆಡಳಿತ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕು. ಗ್ರಾಮೀಣ ಹಾಗೂ  ನಗರದ ಕೆಲವು ಭಾಗಗಳಲ್ಲಿ ಸರ್ಕಾರದಿಂದ ಆರಂಭಿಸಿರುವ ಶುದ್ಧ ಕುಡಿವ ನೀರಿನ ಘಟಕಗಳು ಹಾಳಾಗಿವೆ.

ತಾಲೂಕು ಗ್ರಾಮೀಣ ಕುಡಿವ ನೀರು ಇಲಾಖೆ ಯಿಂದ ತಾಲೂಕಿನಲ್ಲಿ ಒಟ್ಟು 111 ಶುದ್ಧ ಕುಡಿವ ನೀರಿನ  ಘಟಕಗಳನ್ನು  ನಿರ್ಮಿಸಲಾಗಿದೆ. ಅದರಲ್ಲಿ 94 ಚಾಲ್ತಿ ಯಲ್ಲಿವೆ. 14 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ತಾಲೂಕಿನ ಕಿಬ್ಬನಹಳ್ಳಿ, ಪಟ್ರೇಹಳ್ಳಿ, ಸಾರ್ಥವಳ್ಳಿ, ಹಾಲ್ಕುರಿಕೆ, ಸಣ್ಣೇನಹಳ್ಳಿ, ಶಿವರ, ಹೊನ್ನವಳ್ಳಿ, ಈಚನೂರು, ರಂಗಾಪುರ, ನಾಗರಘಟ್ಟ  ಗ್ರಾಮಗಳಲ್ಲಿ ನೀರಿನ ಘಟಕಗಳು ಹಾಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಘಟಕಗಳನ್ನು ರಿಪೇರಿ ಮಾಡಿಸಿ ಉಪಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಯಾವ ಹೋಬಳಿಗಳಲ್ಲಿ ಹೆಚ್ಚು ನೀರಿನ ಅಭಾವವಿದೆಯೋ ಅಲ್ಲಿಗೆ ಹಣ ಕೊಟ್ಟು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
-ನಟರಾಜು, ಸಹಾಯಕ ಕಾರ್ಯಪಾಲಕ

Advertisement

Udayavani is now on Telegram. Click here to join our channel and stay updated with the latest news.

Next