ಭಾಗಗಳೂ ದಪ್ಪವಾದರೆ, ನಮಗೇನಿಲ್ಲ. ನೋಡೋರಿಗೆ ವಿಕಾರ ವಾಗಿ ಕಾಣಬಹುದು. ತುಂಬಾ ದಪ್ಪಗಿದ್ದಾರೆ ಎಂಬ ಒಂದೇ ಕಾರಣಕ್ಕೆ, ಎಷ್ಟೋ ಜನಕ್ಕೆ ಮದುವೆ ಕೂಡ ಆಗಿಲ್ಲ
ಅನ್ನೋದು ಗುಟ್ಟಾದ ವಿಚಾರವೇನಲ್ಲ. ಈ ಕಾರಣದಿಂದಲೇ, ತೆಳ್ಳಗಾಗಲು ಎಲ್ಲರೂ ಕ್ಯೂ ನಿಲ್ಲೋದು. ಸಿಂಪಲ್ಲಾಗಿ ಹೊಟ್ಟೆ ಕರಗಿಸುವ ಒಂದಷ್ಟು ಮಾರ್ಗಗಳಿವೆ. ಹೊಟ್ಟೆ ಬರೋಕೆ ಕೇವಲ ಊಟ ಮಾತ್ರ ಕಾರಣವಲ್ಲ, ಜೀವನ ಶೈಲಿ, ಕೊಲೆಸ್ಟ್ರಾಲ್ ಪ್ರಮಾಣದ ಜೊತೆಗೆ, ಒತ್ತಡ ಹೆಚ್ಚಾದಂತೆ ಸೌಂದರ್ಯಘಾತುಕ ಹೊಟ್ಟೆ ಬರುತ್ತದೆ.
Advertisement
ಓಂಕಾಳಿನ ನೀರುಹೊಟ್ಟೆ ಇಳಿಸುವ ಆಶಯ ಇದ್ದರೆ, ಮೊದಲು ಅಜೀರ್ಣವನ್ನು ಕಡಿಮೆ ಮಾಡಿಕೊಳ್ಳಬೇಕು. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಹೊಟ್ಟೆ ಯಾವಾಗ ಬೇಕಾದರೂ ದಪ್ಪವಾಗಬಹುದು. ಹೀಗಾಗಿ, ಜೀರ್ಣಕ್ರಿಯೆ ಸರಿಮಾಡಿ ಕೊಳ್ಳಬೇಕು. ಅದಕ್ಕೆ ಓಂ ಕಾಳನ್ನು ಬಳಸಿ. ಇದನ್ನು ಹುರಿದು, ನೀರಲ್ಲಿ ನಾಲ್ಕೈದು ಗಂಟೆ ನೆನೆ ಹಾಕಿ ಬಳಸಬೇಕು. ಹೊಟ್ಟೆಯಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ.
ನಿಂಬೆಯಲ್ಲಿ ಸಿಟ್ರಿಕ್ ಅಂಶ ಇರುವುದರಿಂದ ಜೀರ್ಣ ಬೇಗ ಆಗುತ್ತದೆ. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಇದ್ದಾಗಲೇ, ನಿಂಬೆ ಹಿಂಡಿದ ನೀರನ್ನು ಕುಡಿದರೆ, ಹೊಟ್ಟೆಯೊಳಗಿನ ಕೊಬ್ಬು ಇಳಿಯುತ್ತಾ ಹೋಗುತ್ತದೆ. ನಿಂಬೆ ರಸದ ಜೊತೆಗೆ, ಜೇನುತುಪ್ಪ ಬೆರೆಸಿಕೊಳ್ಳ ಬಹುದು. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಆಂಟಿ ಆಕ್ಸಿಡೆಂಟ್ ಇದೆ. ಜೀರಿಗೆ ನೀರಿನ ಸೇವನೆಯಿಂದಲೂ ತೂಕ ಇಳಿಸಿಕೊಳ್ಳ ಬಹುದು. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಪಿತ್ತ ಸಂಬಂಧಿ ವಾಂತಿ, ತಲೆತಿರುಗುವಿಕೆ ಎಲ್ಲವೂ ಇದರಿಂದ ದೂರವಾಗುತ್ತದೆ. ಗ್ಯಾಸ್ಟ್ರಿಕ್ ಅನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ. ಗ್ರೀನ್ ಟೀ, ತೂಕ ಇಳಿಸಲು ಬಳಕೆಯಾಗುವ ಇನ್ನೊಂದು ಪೇಯ.