Advertisement

ಚಳಿಗಾಲದಲ್ಲಿ ಮುಖದ ಕಾಂತಿಗಾಗಿ ಹೀಗೆ ಮಾಡಿ

08:35 PM Feb 01, 2021 | Team Udayavani |

ನವದೆಹಲಿ: ಸಾಮಾನ್ಯವಾಗಿ ಎಲ್ಲರೂ ಕೂಡಾ ತಾವು ಅಂದವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ.  ಅದರಲ್ಲೂ ಹುಡುಗಿಯರಂತೂ  ತಮ್ಮ ಮುಖದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಆದರೆ ಚಳಿಗಾಲದಲ್ಲಿ ತಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಒಂದು ದೊಡ್ಡ ಸವಾಲೇ ಸರಿ.

Advertisement

ಚಳಿಗಾಲದಲ್ಲಿ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ  ಮುಖದ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ ಇಲ್ಲಿದೆ ಕೆಲವು ಮಾಹಿತಿ

ಹಾಲಿನ ಕೆನೆ ಬಳಸಿ

ಚಳಿಗಾಲದಲ್ಲಿ ಚರ್ಮ, ತೇವ ಕಳೆದುಕೊಂಡು ಚರ್ಮದಲ್ಲಿ ಒಡಕು ಕಂಡುಬರುತ್ತದೆ, ಹೀಗಾಗಿ ಒಣ ಚರ್ಮವಿರುವವರು ಪ್ರತಿನಿತ್ಯ ಹಾಲಿನ ಕೆನೆಯನ್ನು  ಮುಖಕ್ಕೆ ಹಚ್ಚುವುದರಿಂದ ಮುಖದ ಹೊಳಪನ್ನು ಉಳಿಸಿಕೊಳ್ಳಬಹುದಾಗಿದೆ.

ತೆಂಗಿನ ಎಣ್ಣೆ ಬಳಸಿ

Advertisement

ಪ್ರತಿ ನಿತ್ಯ ರಾತ್ರಿ ಮಲಗುವಾಗ ಚೆನ್ನಾಗಿ ಮುಖವನ್ನು ತೊಳೆದು ನೈಸರ್ಗಿಕವಾದ ತೆಂಗಿನ ಎಣ್ಣೆಯಿಂದ ಮೂಖಕ್ಕೆ ಮಸಾಜ್ ಮಾಡುವುದರಿಂದ ಚಳಿಗಾಲದಲ್ಲಿ ಮುಖ ಒಡೆಯುವುದನ್ನು ತಡೆಯಬಹುದಾಗಿದೆ ಮತ್ತು ಮುಖದ ಕಾಂತಿಯನ್ನೂ ಕೂಡಾ ಹೆಚ್ಚಿಸುತ್ತದೆ. ಇದು ಅಂಗಡಿಗಳಲ್ಲಿ ದೊರಕುವ ಬಾಡಿ ಲೋಷನ್ ನ ರೀತಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ:ಬಜೆಟ್ 2021: ಸೆನ್ಸೆಕ್ಸ್ ಸುಮಾರು 2,300 ಪಾಯಿಂಟ್, NSE ನಿಫ್ಟಿ 13,900 ಮಟ್ಟದಲ್ಲಿ ಏರಿಕೆ

ಸಾಕಷ್ಟು ನೀರು ಸೇವನೆ

ನೀರಿನ ಸೇವನೆ ದೇಹದ ಪ್ರತಿಯೊಂದು ಭಾಗದ ಆರೋಗ್ಯಕ್ಕೂ ಪೂರಕವಾಗಿದ್ದು, ಮುಖದ ಕಾಂತಿಗೂ ಇದು ಅತೀ ಮುಖ್ಯವಾದದ್ದು. ಚಳಿಗಾಲದಲ್ಲಿ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದರಿಂದ ಮುಖದ ಚರ್ಮ ಒಣಗದಂತೆ ನೋಡಿಕೊಳ್ಳಬಹುದಾಗಿದೆ.

ಆಹಾರ ಕ್ರಮ

ಚಳಿಗಾಲದಲ್ಲಿ ಆದಷ್ಟು ಸೊಪ್ಪು,ಹಸಿರು ತರಕಾರಿಗಳು ಮತ್ತು  ಮೀನನ್ನು ಸೇವಿಸುವುದು ಉತ್ತಮ. ಚಳಿಗಾಲದಲ್ಲಿ ನೈಸರ್ಗಿಕವಾಗಿ ದೊರಕುವ ಹಣ್ಣುಗಳ ಸೇವನೆಯೂ ಮೂಖದ ಕಾಂತಿ ಕಳೆಗುಂದದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿಬಜೆಟ್-21:ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಏರಿಕೆ

 

Advertisement

Udayavani is now on Telegram. Click here to join our channel and stay updated with the latest news.

Next