Advertisement
-ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆ, ತಮ್ಮ ನೌಕರರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದ್ದರೆ, ತಕ್ಷಣ ಅದರ ಸದುಪಯೋಗ ಪಡೆದುಕೊಳ್ಳಿ.
Related Articles
Advertisement
-ಗೃಹಸಾಲ ಪಡೆಯುವಾಗ ಬಹಳಷ್ಟು ಹಣಕಾಸು ಸಂಸ್ಥೆಗಳು ನಿರ್ವಹಣಾ ವೆಚ್ಚ(ಪ್ರೊಸೆಸಿಂಗ್ ಚಾರ್ಜಸ್) ಹಾಗೂ ನಿಗೂಢ (ಹಿಡನ್ ಚಾರ್ಜಸ್) ಖರ್ಚುಗಳನ್ನು ವಿಧಿಸುತ್ತವೆ. ಇಂಥ ಖರ್ಚು ಹಾಗೂ ಬಡ್ಡಿ ದರ ಅತೀ ಕಡಿಮೆ ಇರುವಲ್ಲಿ ಗೃಹಸಾಲ ಪಡೆಯಿರಿ.
-ಗೃಹಸಾಲ ತೀರಿಸಲು ಬೇರೆ ಸಂಸ್ಥೆಯಿಂದ ಸಾಲ ಪಡೆಯುವಾಗ ದಂಡದ ಬಡ್ಡಿ(ಪೆನಾಲ್ಟಿ) ವಿಧಿಸುವ ಕ್ರಮ ಇದೆ. ಈ ವಿಚಾರವನ್ನು ಮೊದಲೇ ತಿಳಿದುಕೊಳ್ಳಿ.
– ಈಗ ಪ್ರಸ್ತುತ ಇರುವ ಆದಾಯ ತೆರಿಗೆ ಕಾನೂನಿನ ಅನ್ವಯ ಬಹಳಷ್ಟು ಆದಾಯ ತೆರಿಗೆ ಲಾಭವನ್ನು, ಗೃಹಸಾಲ ಪಡೆಯುವುದರಿಂದ ಪಡೆಯಬಹುದು. ಈಗಿನ ಆದಾಯ ತೆರಿಗೆ ಕಾನೂನಿನಂತೆ-ಎ. ಸೆಕ್ಷನ್ 24.ಬಿ ಪ್ರಕಾರ ಗೃಹಸಾಲ ಬಡ್ಡಿಯಲ್ಲಿ 2 ಲಕ್ಷ ರೂ.ಗಳ ತನಕ ಆದಾಯದಿಂದ ಕಡಿತ ಮಾಡಿ ಆದಾಯ ತೆರಿಗೆಯನ್ನು ಸಲ್ಲಿಸಬಹುದು.
ಬಿ. ಸೆಕ್ಷನ್ 80ಸಿ ಪ್ರಕಾರ ಗೃಹಸಾಲಕ್ಕೆ ಮರುಪಾವತಿ ಮಾಡಿದರೂ 1.5 ಲಕ್ಷದ ತನಕ ಆದಾಯದಿಂದ ಕಡಿತ ಆದಾಯ ತೆರಿಗೆಯನ್ನು ಸಲ್ಲಿಸಬಹುದು. -ಯು.ಪಿ.ಪುರಾಣಿಕ್