Advertisement
ಜೀವನದಲ್ಲಿ ಅತಿ ಕಷ್ಟದ ಕೆಲಸ ಎಂದರೆ ಮನೆ ಕಟ್ಟುವುದು, ಮದುವೆ ಮಾಡುವುದು. ಆದರೆ ಯಾರೂ ಕೂಡ ಕಷ್ಟ ಎಂದು ಮದುವೆ ಮಾಡುವುದನ್ನಾಗಲಿ, ಮನೆ ಕಟ್ಟುವುದನ್ನಾಗಲಿ ಬಿಡುವುದಿಲ್ಲ. ಹೀಗಾಗಿ, ಮನೆ ಕಟ್ಟುವಾಗ ಏನೆಲ್ಲ ಮುಂಜಾಗರೂಕತೆ ವಹಿಸಬೇಕು. ಹೀಗೆ ಮಾಡಿದರೆ ಎದುರಾಗುವ ತಲೆನೋವುಗಳನ್ನು, ಅನಗತ್ಯ ಕಿರಿಕಿರಿ ಹಾಗೂ ಹೆಚ್ಚು ಕಷ್ಟಪಡದೆ ನಿಭಾಯಿಸಬಹುದು.
ಎಷ್ಟೋ ಸಲ “ನಮ್ಮ ಮನೆ ಹೀಗಿರಲಿ’ ಎಂದು ನಿರ್ಧರಿಸದೆ, ಆಮೇಲೆ ಯೋಚಿಸಿದ್ರಾಯ್ತು, ಈಗ ಕೆಲ್ಸ ಶುರು ಮಾಡೋಣ ಎಂದು ಕೊಂಡು ಕಟ್ಟುವ ಕೆಲಸ ಶುರುಮಾಡಿಬಿಡುತ್ತೇವೆ. ಗೋಡೆ ಕಟ್ಟುವ ವೇಳೆ, ಹೀಗಿದ್ದರೆ ಚೆನ್ನಾಗಿತ್ತು, ಆ ಗೋಡೆ ಸ್ವಲ್ಪ ಮುಂದೆ ಇದ್ದರೆ ದೊಡ್ಡ ಕೋಣೆ ಸಿಗುತ್ತಿತ್ತು ಎಂದೆಲ್ಲ ಬದಲಾವಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಹೀಗೆ ಬದಲಾವಣೆ ಮಾಡುವುದರಿಂದಲೇ ಮನೆ ಕಟ್ಟುವಾಗಿನ ಬಹುತೇಕ ತಲೆನೋವುಗಳು ಉಂಟಾಗುವುದು ಎಂಬುದು ಅನೇಕರ ಅನುಭವ. ಹಾಗಾಗಿ, ಮನೆ ಕಟ್ಟುವ ಮೊದಲು ಎಲ್ಲಿ ಏನು ಬೇಕು, ಎಷ್ಟು ಅಳತೆಯ ಕೊಠಡಿ ಇರಬೇಕು ಎಂಬುದರ ಬಗ್ಗೆ ಖಚಿತತೆ ಬಹುಮುಖ್ಯ. ಮನೆಯ ಪ್ಲಾನ್ ಬರೆಸುವಾಗ ನುರಿತ ಆರ್ಕಿಟೆಕ್ಟ್ಇಂ ಜಿನಿಯರ್‌ಗಳ, ಸಹಾಯ ಪಡೆದರೆ ಒಳ್ಳೆಯದು. ಅವರು ಒಂದು ನಿವೇಶನದ ನಾಲ್ಕಾರು ಬಗೆಯ ವಿನ್ಯಾಸಗಳನ್ನು ತಯಾರು ಮಾಡಿ ಕೊಡುವುದರಿಂದ, ನಾವು ಮುಂದೆ ಮಾಡಬಹುದಾದ ಬದಲಾವಣೆಗಳು ಹಾಗೂ ಅದರಿಂದ ಆಗುವ ಲಾಭ-ನಷ್ಟಗಳು ಮೊದಲೇ ಗೊತ್ತಾಗುತ್ತದೆ.
Related Articles
ಪ್ರಾಣಿ ಪಕ್ಷಿಗಳು ಗೂಡುಕಟ್ಟಿಕೊಳ್ಳುವಷ್ಟೇ, ಮನೆ ಕಟ್ಟುವುದು ಮನುಷ್ಯರಾದ ನಮಗೂ ಅನಿವಾರ್ಯ. ಕೆಲ ಇಂಚುಗಳಷ್ಟೇ ದಪ್ಪವಿರುವ ಗೀಜಗನ ಹಕ್ಕಿ ಹರಸಾಹಸ ಪಟ್ಟು ಸುಂದರ ಮನೆ ನಿರ್ಮಿಸಿಕೊಳ್ಳುವಾಗಲೂ, ಈ ಮೊದಲು ಕಟ್ಟಿರುವ ಗೂಡುಗಳ ನೋಡಿ ಪಾಠ ಕಲಿತೇ ಮುಂದುವರೆಯುವುದು. ನಾವೂ ಕೂಡ ಮನೆ ಕಟ್ಟಿದವರನ್ನು ನೋಡಿ, ಅದರಿಂದ ಒಂದಷ್ಟು ವಿಚಾರ ಕಲಿತರೆ ಹೆಚ್ಚು ತಲೆನೋವು ಇರುವುದಿಲ್ಲ.
Advertisement
ಒಂದು ಮನೆ ಕಟ್ಟಿ “ಸಾಕಪ್ಪ ಸಾಕು’ ಎಂದು ಸುಸ್ತಾದವರು ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತಾರೆ. ಅಪರೂಪಕ್ಕೆ ಕೆಲ ಕಾಯಕ ಜೀವಿಗಳು “ಜೀವನದ ಅತಿ ಮುಖ್ಯ ಕಾರ್ಯಗಳಲ್ಲಿ’ ಒಂದಾದ ಸಂಗತಿಯ ಬಗ್ಗೆ ಅತಿ ಉತ್ಸುಕರಾಗಿ, ತಮ್ಮ ಮನೆ ಕಟ್ಟಿಕೊಳ್ಳುತ್ತಾರೆ. ಜೊತೆಗೆ, ಬಂಧುಮಿತ್ರರಿಗೆ ಮನೆ ಕಟ್ಟುವಾಗ ಪಾಯದಿಂದ ಹಿಡಿದು ಮನೆಗೆ ಬಣ್ಣ ಬಳಿಯುವವರೆಗೆ ಜೊತೆಗೇ ಇದ್ದು, ಇದರಲ್ಲೇ ಸಂತೋಷ ಪಡುವವರೂ ಇರುತ್ತಾರೆ. ಮನೆ ಕಟ್ಟಲು ಎಲ್ಲಕ್ಕಿಂತ ಮುಖ್ಯ ಒಳ್ಳೆಯ ಗಾರೆಯವರು. ಹಾಗಾಗಿ ಯಾರ ಬಳಿ ಒಳ್ಳೆಯ ಕೆಲಸಗಾರರಿದ್ದಾರೋ ಅವರನ್ನೇ ನೇಮಿಸಿಕೊಳ್ಳಿ.
ಒಳ್ಳೆಯ ಕೆಲಸಗಾರರಿದ್ದರೆ, ಒಳ್ಳೆ ಮನೆ ಕಟ್ಟುವುದು ಹೆಚ್ಚು ಕಷ್ಟವಾಗಲಾರದು. ಮನೆ ಕಟ್ಟಿದವರಿಗೆ ದುಃಸ್ವಪ್ನವಾಗಿ ಕಾಡುವುದು ಕಳಪೆ ಕಾಮಗಾರಿ, ನುರಿತ ಕಾರ್ಮಿಕರಿದ್ದರೆ ಅರ್ಧ ತಲೆನೋವು ಕಡಿಮೆಯಾಗುತ್ತದೆ. ನಾಲ್ಕಾರು ವರ್ಷದ ಅನುಭವವಿರುವ ಕಾರ್ಮಿಕರಿಗೂ ಹತ್ತಾರು ವರ್ಷ ಪಳಗಿದ ಕೈಗಳಿಗೂ, ಕೂಲಿಯಲ್ಲಿ ಅಂಥ ವ್ಯತ್ಯಾಸ ಇರುವುದಿಲ್ಲವಾದರೂ ಕಾಮಗಾರಿಯಲ್ಲಿ ವಿಪರೀತ ವ್ಯತ್ಯಾಸಗಳು ಇರುತ್ತವೆ. ಕುಶಲಕರ್ಮಿಗಳಿಗೆ ಸ್ವಲ್ಪ ಹೆಚ್ಚು ಕೂಲಿ ಕೊಟ್ಟರೂ ಪರವಾಗಿಲ್ಲ. ಜೀವನ ಪೂರ್ತಿ ಕೊರಗುವುದು ತಪ್ಪುತ್ತದೆ.
ಸಲಹೆ ತಗೊಳ್ಳಿಮನೆ ಕಟ್ಟುವುದಕ್ಕೆ ಮೊದಲು, ಮನೆ ಕಟ್ಟಬೇಕು ಅಂತ ಕನಸು ಕಾಣುವ ಮೊದಲು- ನಮ್ಮ ಆದಾಯದ ಒಟ್ಟು ಮೊತ್ತ ಎಷ್ಟು ಎನ್ನುವುದನ್ನು ಲೆಕ್ಕ ಹಾಕಿ ಇದರಲ್ಲಿ ಸುಮಾರು ಕಾಲುಭಾಗದಷ್ಟು ಹಣವನ್ನು ಮನೆಗೆ ಬಾಡಿಗೆ ರೂಪದಲ್ಲೋ ಇಲ್ಲವೇ ಮನೆ ಕಟ್ಟಲು- ಸೈಟು ಕೊಳ್ಳಲು ವ್ಯಯಿಸಿರುತ್ತೇವೆ. ಈ ಸತ್ಯ, ಲೆಕ್ಕ ಹಾಕಿದಾಗಲೇ ತಿಳಿಯವುದು. ಒಂದು ಪಕ್ಷ ತಿಂಗಳಿಗೆ 10-15 ಸಾವಿರ ಬಾಡಿಗೆ ಕಟ್ಟುತ್ತಿದ್ದರೆ, ಆ ಮೊತ್ತಕ್ಕೆ 10ರಿಂದ 12 ಲಕ್ಷ ಸಾಲ ಸಿಗುತ್ತದೆ. ಅಂದರೆ, ಸಾಲ ಮಾಡಿ ಸ್ವಂತ ಮನೆ ಕಟ್ಟಿದರೂ ಇಷ್ಟೇ ಹಣವನ್ನು ಇಎಂಐ ಕಟ್ಟಬಹುದು. ಮನೆ ಕಟ್ಟುವ ಮೊದಲು ಬೇರೆಯವರು ಮನೆ ಹೇಗೆ ಕಟ್ಟಿದ್ದಾರೆ, ಅವರ ಪಟ್ಟ ಕಷ್ಟದ ಬಗ್ಗೆ ತಿಳಿದುಕೊಳ್ಳಿ. ಮನೆ ಕಟ್ಟಿನೋಡಿದವರಿಂದ ಸ್ವಲ್ಪ ತಾಂತ್ರಿಕ ಹಾಗೂ ಸಾಮಾನ್ಯ ಜ್ಞಾನದಿಂದ ಕಲಿಯಬಹುದಾದ ಸಾಕಷ್ಟು ಮಾಹಿತಿ ಇರುತ್ತವೆ. ಇದರ ಲಾಭ ಪಡೆದರೆ ಮನೆ ಕಟ್ಟುವುದು ಹೆಚ್ಚು ಕಷ್ಟ ಎಂದು ಖಂಡಿತ ಅನಿಸುವುದಿಲ್ಲ. ಮನೆ ಕಟ್ಟುವ ಮನೆ ಹೇಗೆ ರೂಪುಗೊಳ್ಳುತ್ತದೆ ಎಂದು ಮುಕ್ಕಾಲು ಪಾಲು ಮನೆ ಕಟ್ಟುವವರೆಗೆ ತಿಳಿಯುವುದಿಲ್ಲ. ಈಗ ಆಧುನಿಕ ತಂತ್ರಜ್ಞಾನದ ಸಹಾಯದಿಂದ ತಯಾರಿಸಿದ ನಕ್ಷೆಗಳು ಸಾಕಷ್ಟು ಸಹಾಯಕಾರಿಯಾದರೂ ಮನೆ ಕಟ್ಟುವವರೆಗೆ ಅದು ಖಚಿತವಾಗಿ ಹೀಗೆಯೇ ಕಾಣುತ್ತದೆಂದು ಮುಗಿಯುವವರೆಗೂ ಗೊತ್ತಾಗುವುದಿಲ್ಲ. ಮನೆ ಕಟ್ಟುವವರು ಈ ಕಾರಣದಿಂದ ತಾವು ವಾಸವಿರುವ ಮನೆಯನ್ನು ಅಳೆದು ನೋಡಿ ಬೆಡ್ ರೂಮ್ ಸ್ವಲ್ಪ ದೊಡ್ಡದು ಬೇಕೆ ಇಲ್ಲಾ ಇರುವುದೇ ಸಾಕಾ, ಹತ್ತು ಅಡಿಗೆ ಹನ್ನೆರಡು ಅಡಿ ಅಳತೆ ಎಂದರೆ ಎಷ್ಟು ದೊಡ್ಡದಿರುತ್ತದೆ? ಎಂದೆಲ್ಲ ಚಿಂತಿಸಿ ನಿರ್ಧರಿಸಿದರೆ, ಅವರ ಅನುಕೂಲಕ್ಕೆ ತಕ್ಕಂತೆ ಮನೆ ಮೂಡಿಬರುತ್ತದೆ. ಹಳೆ ಮನೆಯನ್ನು ಕೊಳ್ಳುವವರಿಗೆ ಈ ರಿಸ್ಕ್ ಇಲ್ಲ. ಕಣ್ಣ ಮುಂದೆ ಇರುವುದರಿಂದ ಅಳತೆ ಪ್ರಾಕ್ಟಿಕಲ್ಲಾಗಿ ತಿಳಿಯುತ್ತದೆ.
ಹೆಚ್ಚಿನ ಮಾಹಿತಿಗೆ – 98441 32826. ಆಯ್ಕೆಯಲ್ಲಿ ಎಚ್ಚರವಿರಲಿ
ಮನೆ ಕಟ್ಟುವವರು ಕಲಿಯಬೇಕಾದ ಪಾಠಗಳಲ್ಲಿ ಮೊದಲನೆಯದು, ತಮ್ಮ ನಿವೇಶನಕ್ಕೆ ನುರಿತ ಕಾರ್ಮಿಕರನ್ನು ಹಿಡಿದುಕೊಂಡು ಬರುವುದು. ಈ ದಿನಗಳಲ್ಲಿ ಕಟ್ಟಡದ ಕೆಲಸ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಕುಶಲಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಂದು ಹೊಸದಾಗಿ ಬಂದು ಕೂಲಿ ಕೆಲಸದಲ್ಲಿ ತೊಡಗಿಕೊಂಡವರೂ ಕೂಡ ನಾಲ್ಕಾರು ತಿಂಗಳಲ್ಲೇ ಒಂದು ಕರಣೆ ಖರೀದಿಸಿ, ಹೆಚ್ಚು ಹಣ ಪಡೆಯಲು ಗಾರೆಯವನು ಎಂದು ಹೇಳಿಕೊಂಡು ಅಮಾಯಕರನ್ನು ವಂಚಿಸುವುದೂ ಉಂಟು. ಕೆಲವೊಂದು ಸಂಗತಿಗಳು ಸಾಮಾನ್ಯ ಜ್ಞಾನದಿಂದಲೇ ಅರಿವಿಗೆ ಬರುತ್ತದೆ. ಕೆಲಸ ಬಾರದ ಕಾರ್ಮಿಕರು ಗೋಡೆ ಕಟ್ಟಿದರೆ ಅದು ಸ್ವಲ್ಪ ವಾಲಿದಂತೆಯೋ ಇಲ್ಲವೇ ಸೊಟ್ಟಗೋ ಕಂಡುಬರುವ ಸಾಧ್ಯತೆ ಹೆಚ್ಚು. ಹಾಗಾಗಿ, ಮನೆ ಕಟ್ಟುವವರು ಮೈಯೆಲ್ಲ ಕಣ್ಣಾಗಿ ದಿನದಿಂದ ದಿನಕ್ಕೆ ಎಲ್ಲ ಕೆಲಸಗಳನ್ನೂ ನೋಡಿದರೆ ಕಳಪೆ ಕಾಮಗಾರಿ ಸುಲಭದಲ್ಲಿ ಕಣ್ಣಿಗೆ ಬೀಳುತ್ತದೆ. — ಆರ್ಕಿಟೆಕ್ಟ್ ಕೆ. ಜಯರಾಮ್