Advertisement
ನಿದ್ರೆ ಕೊರತೆಯಿಂದಾಗಿ ಡಾರ್ಕ್ ಸರ್ಕಲ್ಸ್ ಕಾಣಿಸಿಕೊಳ್ಳುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಕಣ್ಣಿನ ಕೆಳವಲಯದಲ್ಲಿ ಮುಖದ ಬಣ್ಣಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಪ್ಪಗಾಗುವ ಭಾಗಕ್ಕೆ ಡಾರ್ಕ್ ಸರ್ಕಲ್ಸ್ ಎನ್ನುತ್ತಾರೆ. ನಿದ್ರಾಹೀನತೆಯೂ ಇದಕ್ಕೆ ಒಂದು ಕಾರಣ ಆಗಿರಬಹುದು. ಅದರೊಂದಿಗೆ ಅತಿಯಾದ ಒತ್ತಡ ಅತಿಯಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದು, ವಿಟಮಿನ್ ಕೊರತೆ, ಅನುವಂಶೀಯತೆ ಈ ಎಲ್ಲಾ ಕಾರಣಗಳಿಂದ ಕಣ್ಣಿನ ಕೆಳಗೆ ಕಪ್ಪಾಗಬಹುದು. ಚರ್ಮದಲ್ಲಿ ಮೆಲನಿನ್ ಅಂಶ ಕಡಿಮೆ ಇರುವವರು ಬೇರೆಯವರಿಗಿಂತ ಹೆಚ್ಚು ಈ ಸಮಸ್ಯೆ ಎದುರಿಸುತ್ತಾರೆ.
Related Articles
Advertisement
ಹತ್ತಿ ಉಂಡೆಯನ್ನು ಸಾಮಾನ್ಯ ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿಟ್ಟು ಹತ್ತಿಯನ್ನು ಡಾರ್ಕ್ ಸರ್ಕಲ್‌ಗಳ ಮೇಲೆ ಇಟ್ಟುಕೊಳ್ಳಿ. ಕನಿಷ್ಠ 10 ನಿಮಿಷಗಳ ಕಾಲ ಅವುಗಳನ್ನು ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ರೋಸ್ ವಾಟರ್:
ರೋಸ್ ವಾಟರ್‌ನಲ್ಲಿ ಚರ್ಮವನ್ನು ಪುರ್ನಚೈತನ್ಯಗೊಳಿಸುವ ಗುಣವಿದೆ. ಹತ್ತಿ ಉಂಡೆಯನ್ನು ರೋಸ್ ವಾಟರ್‌ನಲ್ಲಿ ನೆನೆಸಿ. ಇದನ್ನು ಕಣ್ಣಿನ ಸುತ್ತ ಹಚ್ಚಿ ಮತ್ತು ಕನಿಷ್ಠ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ರೋಸ್ ವಾಟರ್ ಕಣ್ಣಿಗೆ ಮುದ ನೀಡುತ್ತದೆ.
ಗ್ರೀನ್ ಟೀ ಬ್ಯಾಗ್‌ಗಳು:
ಗ್ರೀನ್ ಟೀ ಬ್ಯಾಗ್‌ಗಳನ್ನು ನೀರಿನಲ್ಲಿ ಅದ್ದಿ 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ. ನಿಮ್ಮ ಕಣ್ಣುಗಳ ಮೇಲೆ ಟೀ ಬ್ಯಾಗ್‌ಗಳನ್ನು ಇರಿಸಿ ಮತ್ತು ಅವುಗಳನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ.
ಬಾದಾಮಿ ಎಣ್ಣೆ:
ಒಂದು ಚಮಚ ಬಾದಾಮಿ ಎಣ್ಣೆಯನ್ನು ರಾತ್ರಿ ಮಲಗುವ ಮೊದಲು ಕಣ್ಣುಗಳ ಸುತ್ತಲೂ ಹಚ್ಚಿ. ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ಮುಖ ತೊಳೆಯಿರಿ.
ಜೇನುತುಪ್ಪ:
ಜೇನುತುಪ್ಪವನ್ನು ಹತ್ತಿ ಉಣ್ಣೆಯಲ್ಲಿ ನೆನೆಸಿ. ಬಳಿಕ ಅದನ್ನು ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಿ. ನಂತರ ಕೈಗಳಿಂದ ಮಸಾಜ್ ಮಾಡಿರಿ. 20 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಉತ್ತಮ ನಿದ್ದೆ:
ಕನಿಷ್ಠ 8 ಗಂಟೆ ನಿದ್ದೆ ಅಗತ್ಯ. ಸಾಕಷ್ಟು ನಿದ್ದೆಯಿಂದ ಕಣ್ಣುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಡಾರ್ಕ್ ಸರ್ಕಲ್ ಗಳು ಕೂಡ ಕಡಿಮೆಯಾಗಿ ಕಾಣುವಂತೆ ಮಾಡುತ್ತದೆ.
ಆಹಾರ:
ವಿಟಮಿನ್ ಸಿ ಸಮೃದ್ಧ ಆಹಾರವನ್ನು ಹೆಚ್ಚಾಗಿ ಬಳಸಿ. ತರಕಾರಿಗಳಾದ ಪಪ್ಪಾಯಿ, ಕ್ಯಾರೆಟ್, ದಾಳಿಂಬೆ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ಆಂತಿಗಳಿದ್ಟಿದು, ಇದು ಆರೋಗ್ಯಕರ ಮತ್ತು ಕಾಂತಿಯುತ ಚರ್ಮಕ್ಕೆ ಅಗತ್ಯ.
ರಾತ್ರಿ ಮಲಗುವ ಮುನ್ನ ಮುಖ ತೊಳೆದು ಮೇಕಪ್ ಸ್ವಚ್ಛಗೊಳಿಸಬೇಕು. ಮೇಕಪ್ ಉತ್ಪನ್ನಗಳಿಂದ ಅಲರ್ಜಿ ಮತ್ತು ಕಣ್ಣಿನ ಕೆಳಭಾಗದ ಕಪ್ಪಗಾಗುವ ಸಾಧ್ಯತೆಗಳಿಗೆ. ವಾರಕ್ಕೆರಡು ಬಾರಿ ಇವುಗಳನ್ನು ಬಳಸಿ ಉತ್ತಮ ಫಲಿತಾಂಶ ಪಡೆಯಿರಿ.
*ಕಾವ್ಯಶ್ರೀ