Advertisement

ಕಾರು ಕೊಳ್ಳಲು ಇಲ್ಲಿವೆ ಟಿಪ್ಸ್‌ …

08:56 PM Jan 05, 2020 | mahesh |

ಕಾರು ಖರೀದಿ ಎಂದರೆ ಹುಡುಗಾಟ ಅಲ್ಲ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವೂ ಅಲ್ಲ, ನಿಧಾನಗತಿಯಲ್ಲಿ ಯೋಚಿಸಬೇಕು ಅಂತಲೂ ಅಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಇದರಲ್ಲಿ ಬುದ್ಧಿವಂತಿಕೆಯ ಜತೆಗೆ, ಕೆಲ ಸಂಗತಿಗಳನ್ನು ಅರಿತುಕೊಳ್ಳುವುದು ಮುಖ್ಯ.

Advertisement

ತುಂಬಾ ಜನ ಕಾರು ಖರೀದಿ ಮಾಡಬೇಕೆಂದು ಮನಸ್ಸು ಮಾಡುವುದೇನೋ ಸತ್ಯ. ಆದರೆ ಯಾವ ಕಾರು ಖರೀದಿ ಮಾಡಬೇಕು ಎಂದು ನಿರ್ಧರಿಸಿರುವುದೇ ಇಲ್ಲ. ಅಂದರೆ, ಕಾರುಗಳಲ್ಲಿ ಸಣ್ಣ ಕಾರುಗಳಿಂದ ಹಿಡಿದು ದೊಡ್ಡ ಎಸ್‌.ಯು.ವಿ. ತನಕ ವಿವಿಧ ಮಾದರಿಗಳು ಸಿಗುತ್ತವೆ. ಆದರೆ ಈ ಎಲ್ಲ ಕಾರುಗಳು ನಮ್ಮ ಇಷ್ಟ-ಕಷ್ಟಗಳಿಗೆ ಆಗಬೇಕು ಅಂತೇನಿಲ್ಲ. ಹೀಗಾಗಿ, ಮೊದಲಿಗೆ ನಾವು ಯೋಚನೆ ಮಾಡಬೇಕಾಗಿರುವುದು ಯಾವ ಕಾರು ಬೇಕು ಎಂಬುದರ ಬಗ್ಗೆ.

ಮನೆಯಲ್ಲಿ ನೀವು, ನಿಮ್ಮ ಸಂಗಾತಿ ಮತ್ತು ಇಬ್ಬರು ಮಕ್ಕಳು ಇದ್ದರೆ, ನಿಮಗೆ ಎಸ್‌. ಯು.ವಿ.ಯಾಗಲಿ ಅಥವಾ ಸೆಡಾನ್‌ ಕಾರಾಗಲಿ ಬೇಕಾಗಿಯೇ ಇಲ್ಲ. ಹ್ಯಾಚ್‌ಬ್ಯಾಕ್‌ ಕಾರು ಸಾಕಾಗುತ್ತದೆ.

ಯಾಕಾಗಿ ಬೇಕು?
ನಿಮ್ಮ ಮನೆಯ ಸದಸ್ಯರ ಸಂಖ್ಯೆಯ ಲೆಕ್ಕಾಚಾರದಲ್ಲಿ ನೀವು ಒಂದು ಹ್ಯಾಚ್‌ಬ್ಯಾಕ್‌ ಮನಸ್ಸು ಮಾಡಿದ್ದೀರಿ ಅಂತಿಟ್ಟುಕೊಳ್ಳಿ. ಅದು ನಿಮ್ಮ ಲೆಕ್ಕಾಚಾರದಲ್ಲಿ ಉಲ್ಟಾ ಆಗಬಹುದು. ನಿಮ್ಮ ಸಂಗಾತಿ ಮತ್ತು ನಿಮ್ಮ ಮಕ್ಕಳ ಬಗ್ಗೆಯಷ್ಟೇ ಯೋಚನೆ ಮಾಡಿದ್ದೀರಿ. ನಿಮ್ಮ ತಂದೆ- ತಾಯಿಯೋ ಅಥವಾ ನಿಮ್ಮ ಜತೆಯಲ್ಲೇ ವಾಸಿಸುತ್ತಿರುವವರ ಬಗ್ಗೆ ಯೋಚನೆ ಮಾಡಿಯೇ ಇಲ್ಲ. ನಿಮ್ಮ ಜತೆ ತಂದೆ- ತಾಯಿ ಇದ್ದಾರೆಂದುಕೊಂಡರೆ, ಹ್ಯಾಚ್‌ಬ್ಯಾಕ್‌ ಜೀವನ ಕಷ್ಟಕರ. ಆಗ ಮಿನಿ ಎಸ್‌. ಯು.ವಿ.ಯಂಥ ಕಾರಿನತ್ತ ಮನಸ್ಸು ಮಾಡಬಹುದು.

ಎಲ್ಲಿಗಾಗಿ ಬೇಕು?
ಇದು ಅರಿತಿರಲೇಬೇಕಾದ ಸಂಗತಿ. ಮನೆಯಲ್ಲಿನ ಸದಸ್ಯರ ಸಂಖ್ಯೆಯನ್ನೂ ಇರಿಸಿ ಕೊಂಡು ದೊಡ್ಡ ಕಾರು ಖರೀದಿಸಲು ಪ್ಲಾನ್‌ ಮಾಡಿಕೊಂಡರೆ ಮುಗಿಯಲಿಲ್ಲ. ಇದರ ಜತೆಗೆ ಕಾರು ಖರೀದಿಯ ಉದ್ದೇಶವನ್ನೇ ಅರ್ಥ ಮಾಡಿ ಕೊಂಡಂತಾಗುವುದಿಲ್ಲ. ಏಕೆಂದರೆ, ಕಾರು ಎಂದರೆ, ಕಚೇರಿಗೆ ಹೋಗಿ ಬರಲಿಕ್ಕೋ ಅಥವಾ ಅಪರೂಪಕ್ಕೆ ಪ್ರವಾಸಕ್ಕೋ ಅಥವಾ ನಿಮ್ಮ ಹಳ್ಳಿಗೋ, ಮದುವೆ ಮುಂಜಿಗೆ ಹೋಗುವುದಕ್ಕೆಂದು ಖರೀದಿಸುತ್ತೀರೋ ಎಂಬ ಬಗ್ಗೆಯೂ ಯೋಚಿಸಬೇಕು. ದಿನವೂ ಕಚೇರಿಗೆ ಕಾರಲ್ಲೇ ಓಡಾಡುತ್ತೀರಿ ಎನ್ನುವುದಾದರೆ, ನಗರಗಳಿಗೆ ಹ್ಯಾಚ್‌ಬ್ಯಾಕ್‌ ಕಾರು ಸಾಕು. ಇವು ಪುಟ್ಟದಾಗಿದ್ದು, ಟ್ರಾಫಿಕ್‌ನಲ್ಲಿ ಸುಲಭವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತವೆ. ಪಾರ್ಕಿಂಗ್‌ ಇದೆಯೇ?

Advertisement

ಮನೆಯ ಬಳಿ ಅಥವಾ ಕಚೇರಿ ಬಳಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಹೋದರೆ, ಕಾರು ಖರೀದಿಯೇ ಕಷ್ಟವಾಗಬಹುದು. ಏಕೆಂದರೆ, ನೀವು ಕಾರು ಖರೀದಿ ಮಾಡುತ್ತೀರಿ, ನಿಜ, ಆದರೆ, ನಿಲ್ಲಿಸಲು ಜಾಗವೇ ಇಲ್ಲದೇ ಹೋದರೆ ಏನು ಮಾಡುತ್ತೀರಿ? ಈ ಬಗ್ಗೆಯೂ ಯೋಚಿಸಿ ಮುಂದುವರಿಯುವುದು ಉತ್ತಮ. ನೀವು ಸ್ವಂತ ಮನೆ, ಅಪಾರ್ಟ್ಮೆಂಟ್‌ ಅಥವಾ ಫ್ಲಾಟ್ಳಲ್ಲಿ ವಾಸ ಮಾಡುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯವಾಗಿ ಅಲ್ಲೇಲ್ಲಾ ಪಾರ್ಕಿಂಗ್‌ ವ್ಯವಸ್ಥೆ ಇದ್ದೇ ಇರುತ್ತದೆ. ಹಾಗಾಗಿ ಚಿಂತಿಸದೆ ಕಾರು ಖರೀದಿ ಮಾಡಬಹುದು.

ಆಟೋಮ್ಯಾಟಿಕ್‌ ಅಥವಾ ಮ್ಯಾನ್ಯುವಲ್‌
ನಗರಗಳಲ್ಲಿ ಭಾರೀ ಟ್ರಾಫಿಕ್‌ನಿಂದಾಗಿ ಕಂಗೆಟ್ಟಿರುವ ಜನ “ಆಟೋಮ್ಯಾಟಿಕ್‌’ ಗೆ ಶಿಫ್ಟ್ ಆಗುತ್ತಿದ್ದಾರೆ. ಪದೇಪದೆ ಗೇರ್‌ ಬದಲಾವಣೆ ಮಾಡುವುದು ನಗರವಾಸಿಗಳಿಗೆ ಕಿರಿಕಿರಿ ಎನಿಸ ತೊಡಗಿದೆ. ಹೀಗಾಗಿಯೇ ಆಟೋ ಮ್ಯಾಟಿಕ್‌ ಕಾರುಗಳ ಮೊರೆ ಹೋಗುತ್ತಿರುವುದು.

ಪೆಟ್ರೋಲ್- ಡೀಸೆಲ್- ಸಿಎನ್‌ಜಿ
ಪೆಟ್ರೋಲ್- ಡೀಸೆಲ್- ಸಿಎನ್‌ಜಿ- ಎಲೆಕ್ಟ್ರಿಕಲ್‌ ಕಾರುಗಳ ಬೆಲೆ ಅಜಗಜಾಂತರವಿರುತ್ತದೆ. ಇವುಗಳಲ್ಲಿ ಪೆಟ್ರೋಲ್‌ ಕಾರುಗಳ ದರವೇ ಕಡಿಮೆ. ಅದಕ್ಕಿಂತ ಮಿಗಿಲಾಗಿ ಪರ್ವ ಕೂಡಾ ಹೆಚ್ಚು. ಡೀಸೆಲ್‌ ಕಾರಿಗೆ ಹೋಲಿಸಿದರೆ, ನಿರ್ವಹಣಾ ವೆಚ್ಚವೂ ಕಡಿಮೆ. ಡೀಸೆಲ್‌ ಕಾರಿನ ಬೆಲೆ ಪೆಟ್ರೋಲ್‌ ಕಾರಿಗಿಂತ ತುಸು ಹೆಚ್ಚು. ಆದರೆ ಪೆಟ್ರೋಲ್‌ಂತ ಡೀಸೆಲ್‌ ರೇಟ್‌ ಕಡಿಮೆಯಿರುವುದರಿಂದ ಆ ಲೆಕ್ಕಾಚಾರ ಅಲ್ಲಿಗಲ್ಲಿಗೆ ಸರಿ ಹೋಗುತ್ತದೆ ಎಂಬ ವಿಚಾರ ಕೆಲವರದು. ಇನ್ನು ಸಿಎನ್‌ಜಿಮತ್ತು ಎಲೆಕ್ಟ್ರಿಕ್‌ ಕಾರು ಖರೀದಿ ಮಾಡುವ ಮುನ್ನ, ನೀವು ವಾಸವಿರುವ ಪ್ರದೇಶದಲ್ಲಿ ಸಿಎನ್‌ಜಿ ಸ್ಟೇಷನ್‌ ಮತ್ತು ಎಲೆಕ್ಟ್ರಿಕ್‌ ಕಾರುಗಳ ಚಾರ್ಜಿಂಗ್‌ ಸ್ಟೇಷನ್‌ ಇವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು.

ಬಜೆಟ್‌- ಫೈನಾನ್ಸ್‌
ನಿಮ್ಮ ಕಾರಿಗೆ ಯಾವ ಶೋರೂಂಗಳಲ್ಲಿ ಹಣಕಾಸಿನ ನೆರವನ್ನು ನೀಡುತ್ತಾರೆ ಎಂಬ ಬಗ್ಗೆಯೂ ಪರಿಶೀಲಿಸಿ. ಕೆಲವು ಬ್ಯಾಂಕಿನವರು ಕಡಿಮೆ ಬಡ್ಡಿದರಕ್ಕೆ ಸಾಲ ಕೊಡುತ್ತಾರೆ. ಇನ್ನೂ ಕೆಲವರು ಪ್ರೊಸೆಸ್ಸಿಂಗ್‌ ಚಾರ್ಜ್ ಅನ್ನು ಬಿಡುತ್ತಾರೆ. ಇಂಥ ಆಫ‌ರ್‌ಗಳನ್ನು ನೋಡಿಕೊಂಡು ಕಾರು ಖರೀದಿ ಮಾಡಬೇಕು.

ಇವಿಷ್ಟು ತಿಳಿದುಕೊಳ್ಳಿ
  ನೋಂದಣಿ, ತಯಾರಾದ ವರ್ಷ ಮತ್ತು ಮಾಡೆಲ್‌
  ವಿಐಎನ್‌- ಇದು ಕಾರಿನಲ್ಲೇ ಇರುವ ಆ ಕಾರಿನ ಎಲ್ಲ ಮಾಹಿತಿ ಹೊತ್ತ ಆಧಾರ್‌ ಮಾದರಿಯ ಸಂಖ್ಯೆ. ಇದು 17 ಸಂಖ್ಯೆಗಳನ್ನು ಹೊಂದಿರುತ್ತದೆ.
  ಸರ್ವೀಸ್‌ ವೇಳಾಪಟ್ಟಿ- ನಿಮ್ಮ ಕಾರು ಚೆನ್ನಾಗಿರಬೇಕಾದರೆ, ಕಾಲಕಾಲಕ್ಕೆ ಮಾಡಿಸಬೇಕಾದ ಸರ್ವೀಸ್‌ನ ವೇಳಾಪಟ್ಟಿ ಮತ್ತು ಉಚಿತ ಸರ್ವೀಸ್‌ ಕುರಿತ ವಿವರ
  ಎಂಜಿನ್‌ ಲೈಟ್‌- ಇತ್ತೀಚಿನ ಕಾರುಗಳು ಎಂಜಿನ್‌ಗೆ ಅಟ್ಯಾಚ್‌ ಮಾಡಿರುವ ಸಾಫ್ಟವೇರ್‌ ಆಧರಿಸಿ ಕೆಲಸ ಮಾಡುತ್ತವೆ. ನಿಮ್ಮ ಕಾರಿಗೆ ಯಾವುದೇ ರೀತಿಯ ತೊಂದರೆ ಬಂದರೂ, ಈ ಸಾಫ್ಟವೇರ್‌ ಅದರ ಮಾಹಿತಿ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next