Advertisement

ಸದಾ ಟಿಪ್ಪುವಿನ ಧ್ಯಾನ: ಪ್ರತಾಪ್ ಸಿಂಹ ವಿರುದ್ಧ ಮಹದೇವಪ್ಪ ಕಿಡಿ

06:00 PM Feb 13, 2022 | Team Udayavani |

ಮೈಸೂರು: ತಮ್ಮ ಸಾರ್ವಜನಿಕ ಜೀವನದಲ್ಲಿ ಹಣಕಾಸು ಸಚಿವರಾಗಿ 13 ಬಾರಿ ಬಜೆಟ್ ಮಂಡಿಸಿ ನೂರಾರು ಜನಪರ ಯೋಜನೆಗಳನ್ನು ನೀಡಿ ಸಾರ್ವಜನಿಕರ ತೆರಿಗೆ ಹಣವನ್ನು ಕಾಪಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೇಶಕಂಡ ನಿಜವಾದ ಚೌಕೀದಾರ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ.ಎಚ್ .ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

Advertisement

40% ಕಮೀಷನ್ ಪಡೆಯುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ನಿಮ್ಮ ಬಿಜೆಪಿ ಸರ್ಕಾರಕ್ಕಾಗಲೀ ನಿಮಗಾಗಲೀ ಈ ಸಂಗತಿಯು ಏಳೇಳು ಜನ್ಮಕ್ಕೂ ಅರ್ಥವಾಗುವುದಿಲ್ಲ. ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಜನರ ಅನುಕೂಲಕ್ಕೆ ರೂಪಿಸಲಾದ 164 ಕ್ಕೂ ಹೆಚ್ಚಿನ ಯೋಜನೆಗಳು ಸಿದ್ದರಾಮಯ್ಯ ಅವರೊಳಗಿನ ಸಮರ್ಥ ಅರ್ಥವ್ಯವಸ್ಥೆಯ ತಿಳಿವಳಿಕೆಗೆ ರೂಪಕ ಎನ್ನಬಹುದು ಎಂದು ಕಿಡಿ ಕಾರಿದ್ದಾರೆ.

ಮಾನ್ಯ ಸಂಸದರೇ, ನಿಮ್ಮ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ನೀವು ಯಾವ ಜನಪರ ಯೋಜನೆಗಳನ್ನಂತೂ ರೂಪಿಸದ್ದನ್ನು ನಾವು ಕಂಡಿಲ್ಲ. ಕೋಮುವಾದ ಹಬ್ಬಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದೊಂದೇ ನೀವು ಮಾಡಿದ ಕೆಲಸ. ಹಾಗಿದ್ದರೆ ಕೇವಲ ಕೋಮುವಾದ ಹಬ್ಬಿಸಿದ್ದಕ್ಕೆ ರಾಜ್ಯದ ಸಾಲ ಇಷ್ಟೊಂದು ಹೆಚ್ಚಾಯಿತೇ? ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ್ದಾರೆ.

ಸದಾ ಟಿಪ್ಪುವಿನ ಧ್ಯಾನ ಮಾಡುತ್ತಾ ಕೂರುವ ನೀವು ಕರ್ನಾಟಕಕ್ಕೆ ಕೊಡಬೇಕಾದ ಜಿ ಎಸ್ ಟಿ ತೆರಿಗೆ ಪಾಲನ್ನು ಕೇಳಿ ತರುವ ಧೈರ್ಯವನ್ನು ಎಂದಾದರೂ ತೋರಿದ್ದೀರಾ? ಎಂದಾದರೂ ಬೆಲೆ ಏರಿಕೆ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಿದ್ದೀರಾ? ಭಾರತದ ಅರ್ಥ ವ್ಯವಸ್ಥೆ ಕುಸಿದು, ಜನ ಜೀವನ ಮೂಲೆ ಸೇರುವಂತಾಗಿದೆ. ಈ ಬಗ್ಗೆ ನಿಮ್ಮ ಅರ್ಥ ಸಚಿವೆಯನ್ನು ಪ್ರಶ್ನಿಸುವ ಧೈರ್ಯ ತೋರಿದ್ದೀರಾ? ಎಂದು ಪ್ರಶ್ನೆಗಳ ಸುರಿ ಮಳೆ ಗೈದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next