ಎಚ್.ಡಿ.ಕೋಟೆ: ರಾಜನಾಗಿ, ದೇಶ ಪ್ರೇಮಿಯಾಗಿ ಸರ್ವಧರ್ಮದವರನ್ನು ಪ್ರೀತಿಯಿಂದ ಕಂಡ ಹಜರತ್ ಟಿಪ್ಪು ಸುಲ್ತಾನ್ ಕರ್ನಾಟಕದ ಭವ್ಯ ಪರಂಪರೆಯ ಹೆಮ್ಮೆ ಎಂದು ತಾಪಂ ಮಾಜಿ ಅಧ್ಯಕ್ಷ ಮಗ್ಗೆ ಇಬ್ರಾಹಿಂ ಹೇಳಿದರು.
ಆಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಹುಲಿಯೆಂದೇ ಖ್ಯಾತರಾದ ಹಜರತ್ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ನಂತರವೂ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿàಟಿಷರ ವಿರುದ್ಧ ಹೋರಾಡಿದವರು ಎಂದರು.
ಉಪನ್ಯಾಸಕ ನಟರಾಜ್ ಮಾತನಾಡಿ, ಕರ್ನಾಟಕದಲ್ಲಿ 12 ಮನೆತನಗಳು ಆಡಳಿತ ನಡೆಸಿವೆ. ಮೈಸೂರು ಸಂಸ್ಥಾನದ ಅರಸರು ಹೆಚ್ಚು ಕಾಲ ರಾಜ್ಯವಾಳಿದರು. ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕಾಲಘಟ್ಟದಲ್ಲಿ ಸಾಮ್ರಾಜ್ಯವನ್ನು ಹೆಚ್ಚು ವಿಸ್ತರಿಸಿದ ಟಿಪ್ಪು ಸುಲ್ತಾನ್ ದೂರದೃಷ್ಟಿವುಳ್ಳ ರಾಜನಾಗಿದ್ದರು. ದಲಿತರಿಗೆ ಭೂಮಿ ಕೊಟ್ಟು, ದಲಿತರನ್ನು ಸೈನ್ಯಕ್ಕೆ ಸೇರಿಸಿದರು, ದಲಿತರಿಗೆ ನೀರುಗಂಟಿ ಕೆಲಸ ನೀಡಿದ ಕೀರ್ತಿ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಮದ್ಯಪಾನ ನಿರ್ಮೂಲನೆ ಮಾಡುವ ಸಲುವಾಗಿಯೇ ಇದ್ದ ಈಚಲು ಮರಗಳನ್ನು ಕತ್ತರಿಸಿದ್ದರು. ಚೀನಾ ಮೂಲದ ರೇಷ್ಮೆ ಬೆಳೆಯನ್ನು ಪರಿಚಯಿಸಿದರು. ಕೇರಳ ರಾಜ್ಯದಲ್ಲಿ ವಸ್ತ್ರ ಸಂಹಿತೆ ಅಡಿಯಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ದೌರ್ಜನ್ಯ ತಪ್ಪಿಸಿ, ತಾನೆ ಹೊಸ ವಸ್ತ್ರ ಸಂಹಿತೆ ಜಾರಿಗೆ ತಂದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಕುಮಾರ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್, ಸದಸ್ಯ ವೆಂಕಟಸ್ವಾಮಿ, ಪುರಸಭೆ ಸದಸ್ಯರಾದ ನರಸಿಂಹಮೂರ್ತಿ, ಕುಲುಮೆ ರಾಜು, ವೆಂಕಟೇಶ್, ನಂಜಪ್ಪ, ಸರೋಜಮ್ಮ, ಚಿಕ್ಕವೀರನಾಯ್ಕ, ಮುದ್ದುಮಲ್ಲಯ್ಯ, ಮಲೆಲಿಂಗಯ್ಯ,
ಪರಶೀವಮೂರ್ತಿ, ಸಿಪಿಎಂ ಶಿವಣ್ಣ, ಆಕºರ್ ಪಾಷ, ಲಾಟರಿ ನಾಗರಾಜ್, ತಹಶೀಲ್ದಾರ್ ಆರ್.ಮಂಜುನಾಥ್, ಬಿಇಒ ಸುಂದರ್, ಇಒ ದರ್ಶನ್, ವೃತ್ತ ನಿರೀಕ್ಷಕ ಹರೀಶ್‌ಕುಮಾರ್, ಆರಕ್ಷಕ ಉಪನಿರೀಕ್ಷಕ ಅಶೋಕ್, ಬಿಆರ್‌ಪಿ ಮಹದೇವಯ್ಯ ಇನ್ನಿತರರಿದ್ದರು.