Advertisement
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಟಿಪ್ಪು ಜಯಂತಿಆಚರಿಸಿ, ಟಿಪ್ಪುವಿನ ವೇಷಭೂಷಣ ಧರಿಸಿ ಹಾಡಿ ಹೊಗಳಲಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ
ಇದೆ. ಆದ್ದರಿಂದ ಟಿಪ್ಪು ಜಯಂತಿ ಬಗ್ಗೆ ಅಪಸ್ವರ ಎತ್ತುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡಿಸುವ ಜತೆಗೆ ಹಿಂದೂ-ಮುಸ್ಲಿಂ ಬೇಧ ಭಾವ ಹುಟ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ಟಿಪ್ಪು ವಿರುದ್ಧ ಅಪಸ್ವರ ಎತ್ತುತ್ತಿರುವಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ, ಶೋಭಾ ಕರಂದ್ಲಾಜೆ ಅವರು ಟಿಪ್ಪುವಿನ ವೇಷಭೂಷಣ ತೊಟ್ಟು ಹೊಗಳಿದ್ದು ಜಗಜ್ಜಾಹೀರವಾಗಿದ್ದರೂ, ಈಗ ಮತ ಬ್ಯಾಂಕ್‌ಗಾಗಿ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸೇರಿದ ಕೂಡಲೇ ಕತ್ತೆಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿ ತೋರಿಸ್ತಿವಿ ಎಂದು ಹೇಳುತ್ತಾರೆ. ಅಂದರೇ ಬಿಜೆಪಿಯಲ್ಲಿ ನಾಯಕರೇ ಇಲ್ವಾ.? ಕ್ಷೇತ್ರದ ಜನರು ಏನ್ ಕತ್ತೆಗೆ ಮತ ಹಾಕ್ಬೇಕಾ? ಚುನಾವಣೆ ಸಂದರ್ಭದಲ್ಲಿ ನಾನ್ ಯಾರ ಜೊತೆ ಫೈಟ್ ಮಾಡ್ಬೇಕು ಎನ್ನೋದೆ ತಿಳಿಯದ ಹಾಗಾಗಿದೆ. ನಾನು ಕುಸ್ತಿ ಆಡಲು ಸಿದ್ಧವಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಕತ್ತೆ ಆದ್ರೆ ನಾನು ಕತ್ತೆ ಜೊತೆ ಕುಸ್ತಿ ಆಡ್ಲಾ. ಮೊದಲು ಒಬ್ಬರು ಅಭ್ಯರ್ಥಿನ ಸಿದ್ಧ ಮಾಡ್ಕೊಳ್ಳಿ. ಆಮೇಲೆ ಯಾರು ಯಾರ ಜೊತೆ ಕುಸ್ತಿ ಆಡುತ್ತಾರೆ ಅಂತ ಗೊತ್ತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.