Advertisement

Tipper lorry ಬ್ಯಾಟರಿ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

08:10 PM Aug 07, 2024 | Team Udayavani |

ಯಲ್ಲಾಪುರ: ಟಿಪ್ಪರ್ ಲಾರಿಯ ಬ್ಯಾಟರಿಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬುಧವಾರ (ಆ.07) ರಂದು ಬಂಧಿಸಿದ್ದಾರೆ.

Advertisement

ಹಳಿಯಾಳ ತಾಲೂಕಿನ ಭಗವತಿಯ ಸುಬಾನಿ ಹಸನ್ ಸಾಬ್ ಜಂಗ್ಲೆ ಹಾಗೂ ಮಂಚಿಕೇರಿ ಹಳ್ಳಿಗದ್ದೆಯ ಅಬ್ದುಲ್ ಹಮೀದ್ ಮಜೀದ್ ಸಾಬ್ ಮುಜಾವರ ಬಂಧಿತರು.

ಇವರು ಪಟ್ಟಣದ ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟ ನಾಲ್ಕು ಟಿಪ್ಪರ್ ಲಾರಿಗಳ ಸುಮಾರು 40 ಸಾವಿರ ರೂ ಮೌಲ್ಯದ ನಾಲ್ಕು ಬ್ಯಾಟರಿಗಳನ್ನು ಕದ್ದೊಯ್ದಿದ್ದರು.

ಈ ಕುರಿತು ಲಾರಿಯ ಮಾಲೀಕರಾದ ಸಂಕೇತ ಹಾಗೂ ಚೇತನ ಭಟ್ಟ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಬಂಧಿಸಿ, ಕದ್ದ ಬ್ಯಾಟರಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮಹೇಂದ್ರ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಎಸ್.ಪಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಹನಾಪುರ, ಪಿಎಸ್ಐಗಳಾದ ನಿರಂಜನ ಹೆಗಡೆ, ಸಿದ್ದಪ್ಪ ಗುಡಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಉಮೇಶ ತುಂಬರಗಿ, ಮಹಾವೀರ ಡಿ.ಎಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next