Advertisement
ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ಗೆ ತಮ್ಮ ಶೂವಿನ ಮೊಳೆ ಚುಚ್ಚಿ, ಮತ್ತೆ ಆ ಪಾದ ಬಳಸುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿತ್ತು. ದ.ಆಫ್ರಿಕಾದ ವಿಶ್ವವಿಖ್ಯಾತ ವೈದ್ಯರು ತೆಂಡುಲ್ಕರ್ ಪಾದವನ್ನು ಪರಿಶೀಲಿಸಿ, ಇನ್ನು ಆಡಿದರೇ ಪಾದವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದರು. ಹತಾಶೆಗೊಂಡಿದ್ದ ಸಚಿನ್, ಮುಂಬೈನಲ್ಲಿ ಇನ್ನೊಬ್ಬ ವೈದ್ಯರನ್ನು ಸಂಪರ್ಕಿಸಿ ಹೇಗೋ ಮತ್ತೆ ಪಾದದ ಸ್ಥಿತಿಯನ್ನು ಸುಧಾರಿಸುವ ಯತ್ನ ನಡೆಸಿದರು. ಕಡೆಗೆ ಯಶಸ್ವಿಯಾಗಿ ಕ್ರಿಕೆಟ್‌ಗೆ ಮರಳಿದರು. 2003ರ ವಿಶ್ವಕಪ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು. ಇದು ಅವರ ಆತ್ಮಕಥನ ಪ್ಲೇಯಿಂಗ್ ಇಟ್ ಮೈ ವೇನಲ್ಲಿ ಬಂದಿದೆ.
ಕೇರಳದ ಇರಿಟ್ಟಿ ತಾಲೂಕಿನ ವಲಥೋಡ್ ಎಂಬ ಹಳ್ಳಿ ಹುಡುಗಿ ಲೂಕಾ ಹುಟ್ಟಿದ್ದು 1989ರಲ್ಲಿ. ಇನ್ನೂ 29 ವರ್ಷ. ಆಕೆಯ ಓಡುವ ಪ್ರತಿಭೆಯನ್ನು ನೋಡಿದ ಭಾರತದ ಓಟದ ದಂತಕಥೆ ಪಿ.ಟಿ.ಉಷಾ, ಕೇರಳದ ಬಲುಶೆರಿಯಲ್ಲಿರುವ ತಮ್ಮ ಓಟದ ಅಕಾಡೆಮಿಗೆ ಸೇರಿಸಿಕೊಂಡರು. ಇದು ಸರಿಯಾಗಿ ಫಲಕೊಟ್ಟಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿಂಟು ಅದ್ಭುತ ಸಾಧನೆ ಮಾಡಿದ್ದರಿಂದ ಉಷಾ ಅಕಾಡೆಮಿಗೂ ಖ್ಯಾತ ಬಂತು. ಈ ಅಕಾಡೆಮಿಗೆ ಅಧಿಕೃತ ರಾಷ್ಟ್ರೀಯ ಅಥ್ಲೀಟ್‌ಗಳ ಶಿಬಿರ ಎಂಬ ಮಾನ್ಯತೆ ಸಿಕ್ಕಿದೆ.
Related Articles
Advertisement
ಸಾಧನೆಯ ಹೊಸ್ತಿಲಲ್ಲಿ ಸವಾಲುಹೀಗೆ ಟಿಂಟು ಅಸಾಧ್ಯ ವೇಗದಿಂದ ಸಾಧನೆಯ ಪಥದಲ್ಲಿ ಓಡುತ್ತಿದ್ದಾಗಲೇ, ನಿಂತು ಹೋಗಿದ್ದಾರೆ. ಇನ್ನೊಂದು ಹೆಜ್ಜೆ ಇಡಲೂ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ್ದಾರೆ. ಕೇರಳದ ಬಲುಶೆರಿಯಲ್ಲಿ ಉಷಾ ಆಶ್ರಯದಲ್ಲಿದ್ದವರು, ಈಗ ತಮಿಳುನಾಡಿನ ಸೇಲಂ ಸೇರಿಕೊಂಡಿದ್ದಾರೆ. ಅಥ್ಲೀಟ್‌ಗಳಿಗೆ ಕ್ರೀಡೆಯೇ ಜೀವನ. ಅಂತಹವರಿಗೆ ಕ್ರೀಡೆ ಇನ್ನು ಸಾಧ್ಯವಿಲ್ಲ ಎಂಬ ಸ್ಥಿತಿ ಬಂದರೆ, ಜೀವನದಲ್ಲಿ ಎಲ್ಲವೂ ಮುಗಿಯಿತೇ ಎಂಬ ಅನುಮಾನ ಮೂಡುತ್ತದೆ. ಸದ್ಯ ಟಿಂಟು ಈಗ ಅನಿವಾರ್ಯವಾಗಿ ಉಷಾ ಅಕಾಡೆಮಿಯನ್ನು ಬಿಟ್ಟು, ವೃತ್ತಿಗೇ ಸೇರಿಕೊಂಡಿದ್ದಾರೆ. ಹಿಂದೆಯೂ ಅವರು ರೈಲ್ವೇಸ್‌ನಲ್ಲೇ ವೃತ್ತಿ ಮಾಡುತ್ತಿದ್ದರು. ಆಗವರು ಹೆಸರಿಗೆ ಮಾತ್ರ ವಿಭಾಗೀಯ ವ್ಯವಸ್ಥಾಪಕಿಯಾಗಿದ್ದರೂ, ವರ್ಷವಿಡೀ ರಜೆ ತೆಗೆದುಕೊಂಡು ಅಭ್ಯಾಸ ಮಾಡುವ ಅವಕಾಶವಿತ್ತು. ಈಗ ಬೆಳಗ್ಗೆ 9.30ಕ್ಕೆ ಕಚೇರಿಗೆ ಕಾಲಿಟ್ಟರೆ, ಸಂಜೆ 5.30ರವರೆಗೆ ಕೆಲಸ ಮಾಡಲೇಬೇಕು. ಇಲ್ಲಿ ಯಾವುದೇ ವಿನಾಯ್ತಿ ಇಲ್ಲ. ಇದುವರೆಗೆ ಓಡುವುದೊಂದು ಬಿಟ್ಟು, ಬೇರಾವುದೇ ರೀತಿ ಹೊರಜಗತ್ತಿನ ಸಂಪರ್ಕವಿಲ್ಲದೇ ಇದ್ದ ಟಿಂಟುಗೆ ಇದು ದೊಡ್ಡ ಸವಾಲು. ಈ ಸವಾಲನ್ನು ಗೆಲ್ಲುವುದರ ಜೊತೆಗೆ ಏಷ್ಯಾಡ್‌ನಲ್ಲಿ 800 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಇನ್ನೊಂದು ಸವಾಲು ಇದೆ. ಅವರ ಪ್ರಕಾರ, ಇದನ್ನು ಗೆಲ್ಲುವುದರಲ್ಲೇ ಅವರ ಬದುಕಿನ ಸಾರ್ಥಕ್ಯವಿರುವುದು. ಎರಡನ್ನೂ ಗೆದ್ದು ಟಿಂಟು ದಿಗ್ಗಜರ ಸಾಲಿಗೆ ಸೇರಲಿ ಎನ್ನುವುದು ಹಾರೈಕೆ. ಏನಿದು ಪ್ಲಾಂಟರ್ ಫ್ಯಾಸಿಟಿಸ್?
ಅಂಗಾಲಿನ ಬೆರಳುಗಳಿಂದ ಹಿಡಿದು ಹಿಮ್ಮಡಿ ಮೂಳೆಗಳವರೆಗೆ ನೇರ ಮಾಂಸದ ಪದರವೊಂದಿರುತ್ತದೆ. ಈ ಪದರ ಚುಚ್ಚಿದಂತೆ ಅನುಭವವಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ, ಚುಚ್ಚಿದ ಅನುಭವ ಬರುತ್ತದೆ. ನಡೆದಾಡುತ್ತಿದ್ದಾಗ, ಚಟುವಟಿಕೆಯಲ್ಲಿದ್ದಾಗ ನೋವಿನ ಅನುಭವ ಆಗುವುದಿಲ್ಲ. ಒಮ್ಮೆ ವಿಶ್ರಾಂತಿ ತೆಗೆದುಕೊಂಡು ಮತ್ತೆ ಎದ್ದರೆ, ನಿಂತುಕೊಂಡರೆ ಉರಿ ಶುರುವಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆ ಓಟಗಾರರಿಗೆ ಬರುತ್ತದೆ. ಬಹಳ ಭಾರವಿರುವರಿಗೂ ಇದು ಬರುತ್ತದೆ. ಸರಿಯಾದ ಶೂಗಳನ್ನು ಧರಿಸದವರಿಗೂ ಇದು ಬರುವ ಸಾಧ್ಯತೆಯಿರುತ್ತದೆ.