ಎಚ್.ಡಿ.ಕೋಟೆ: ಚಿಲ್ಲರೆ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಎಚ್.ಡಿ.ಕೋಟೆ ಅಬಕಾರಿ ಇಲಾಖೆ ಅಧಿಕಾರಿಗಳು ರವಿ(44) ಎಂಬಾತನನ್ನು ಬಂಧಿಸಿ ಶನಿವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವುದಾಗಿ ಹೇಳಿ ಕಚೇರಿಯಲ್ಲಿಯೇ ಬಂಧನದಲ್ಲಿಟ್ಟಿದ್ದ ವೇಳೆ ಮನನೊಂದ ವ್ಯಕ್ತಿ ರೈತ ರವಿ ಅಲ್ಲೇ ಇಡಲಾಗಿದ್ದ ಟಿನ್ನರ್ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಾನೆ. ಇದೀಗ ಚಿಂತಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿಯನ್ನು ಬೇಗ ಬಂಧಿಸಿ ತಂದರೂ ಪ್ರಕರಣ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೇ ಕಾಲಹರಣ ಮಾಡಿರುವ ಇಲ್ಲಿನ ಅಬಕಾರಿಗಳು ವಿಚಾರಣೆ ವೇಳೆ ಇಲ್ಲ ಸಲ್ಲದ ಚುಚ್ಚು ಮಾತುಗಳನ್ನು ಅಡಿದ್ದನ್ನು ರವಿ ನೋಡಲು ಬಂದ ಸಂಬಂಧಿಕರೊಂದಿಗೆ ನೋವಿನಿಂದ ಹೇಳಿಕೊಂಡಿದ್ದ. ಆತನಿಗೆ ಏನೇ ಅದರೂ ಅಬಕಾರಿ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಆರೋಪಿ ರವಿ ಕಡೆಯವರು ತಿಳಿಸಿದ್ದಾರೆ.
ಆರೋಪಿ ರವಿ ಸ್ವ-ಗ್ರಾಮ ಬಿ.ಮಟಕೆರೆ ಗ್ರಾಮದ ಸರ್ಕಲ್‌ನಲ್ಲಿ ನಡೆಸುತ್ತಿರುವ ಚಿಲ್ಲರೆ ಅಂಗಡಿಯಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದರು. ಅಬಕಾರಿ ಅಧಿಕಾರಿಗಳು ತಪಾಸಣೆ ವೇಳೆ ಸುಮಾರು 7089 ರೂ.ಮೌಲ್ಯದ 22.680 ಲೀಟರ್ ಮದ್ಯವನ್ನು ವಶಪಡಿಕೊಂಡು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ಗ್ರಾಮದ ಜನರ ಮುಂದೆ ಹೇಳಿ ನ್ಯಾಯಂಗ ಬಂಧನಕ್ಕೆ ಒಳಪಡಿಸದೆ ಕಚೇರಿಯಲ್ಲಿ ಕೂಡಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.
ಇಲ್ಲಿನ ಅಧಿಕಾರಿಗಳ ವರ್ತನೆಗೆ ಬೆಸತ್ತ ರೈತ ರವಿ ಕಚೇರಿಯಲ್ಲಿದ್ದ ಟಿನ್ನರ್ ಕುಡಿದು ಅಸ್ವಸ್ಥನಾಗಿರುವುದನ್ನು ಕಂಡ ಸಿಬ್ಬಂದಿ ಕೂಡಲೇ ಮೈಸೂರಿನ ಕೆ.ಆರ್.ಅಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಚಾರ ತಿಳಿದ ಗ್ರಾಮದ ಮುಖಂಡರು ತಪ್ಪಿತಸ್ಥ ಅಬಕಾರಿ ಇಲಾಖೆ ಅಧಿಕಾರಿ ಕ್ರಮಕೈಗೊಂಡು ರವಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.