Advertisement

ತೊಗರಿ ಮಾರಾಟ: ನೋಂದಣಿ ವಿಸ್ತರಣೆಗೆ ಒತ್ತಾಯ

07:03 AM Jan 15, 2019 | |

ಆಳಂದ: ಖರೀದಿ ಕೇಂದ್ರಗಳ ಮೂಲಕ ತೊಗರಿ ಮಾರಾಟಕ್ಕಾಗಿ ನೋಂದಣಿ ಅವಧಿ ವಿಸ್ತರಿಸುವಂತೆ ರೈತರು ಆಗ್ರಹಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಪ್ರಾರಂಭಿಸಿದ ಖರೀದಿ ಕೇಂದ್ರದಲ್ಲಿ ನೋಂದಣಿ ಕಾರ್ಯಕ್ಕೆ ಸೋಮವಾರ ಅಂತಿಮ ದಿನ. ಆದರೆ ಆನ್‌ಲೈನ್‌ ಮೂಲಕ ನಡೆದ ನೋಂದಣಿ ಕಾರ್ಯದಲ್ಲಿ ಪ‌ಣಿಯಲ್ಲಿನ ಹೆಸರು ವ್ಯತ್ಯಾಸ, ಬೆಳೆ ಅದಲು ಬದಲು ಹೀಗೆ ಹೊಂದಾಣಿಕೆ ಆಗದೆ ಇರುವ ರೈತರು ಹಾಗೂ ನೋಂದಾಯಿಸಲು ಇನ್ನೂ ಬಾಕಿ ಉಳಿದ ರೈತರು ಪರದಾಡುವಂತಾಗಿದೆ. ನೋಂದಣಿ ದಿನಾಂಕ ವಿಸ್ತರಿಸಬೇಕು ಹಾಗೂ ಎಲ್ಲ ರೈತರ ತೊಗರಿ ಖರೀದಿಸಬೇಕು ಎಂದು ರೈತರ ಸಂಘಟನೆಗಳು ಆಗ್ರಹಿಸಿವೆ.

Advertisement

ಆರಂಭದಲ್ಲಿ ಹಲವಡೆ ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಲು ಏಕಕಾಲಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ರೈತರು ದೌಡಾಯಿಸಿದ್ದರಿಂದ ಜನ ಜಂಗುಳಿ ಉಂಟಾಗಿ ಕೆಲವೆಡೆ ನುಕುನೂಗ್ಗಲಾಗಿ ಪೊಲೀಸರು ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಳಿಸಲಾಗಿದೆ. ತಾಲೂಕಿನ 21 ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಸೋಮವಾರ ಪೂರ್ಣಗೊಂಡಿವೆ.

ತಾಲೂಕಿನ ಕಡಗಂಚಿ, ನಿಂಬಾಳ, ಮುನ್ನಳಿ, ಕಮಲಾನಗರ, ಖಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ, ಸನಗುಂದ (ಬೆಳಮಗಿ), ಜಂಬಗಾ (ಜೆ), ಮಾದನಹಿಪ್ಪರಗಾ, ಪಡಸಾವಳಿ, ಆಳಂದ ಪ್ಯಾಕ್ಸ್‌ ಸಂಗೋಳಗಿ (ಬಿ), ಹಿರೋಳಿ, ಕೊರಳ್ಳಿ, ವಿ.ಕೆ.ಸಲಗರ, ನಿಂಬರಗಾ, ಸರಸಂಬಾ, ತಡಕಲ್‌, ನರೋಣಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಸವರಾಜ ಎಂ. ಬೆಣ್ಣೆಶಿರೂರ, ತಹಶೀೕಲ್ದಾರ್‌ ಆಳಂದ

ಖರೀದಿ ಕೇಂದ್ರಗಳಲ್ಲಿ ನೋಂದಾಯಿತರ ದಾಖಲೆಗಳು ವ್ಯತ್ಯಾಸವಾಗಿದ್ದರೆ ಸರಿಪಡಿಸಲಾಗುತ್ತಿದೆ. ಪಹಣಿಯಲ್ಲಿ ತೊಗರಿ ಬದಲು ಇನ್ನೊಂದು ಬೆಳೆ ತಪ್ಪಾಗಿದ್ದರೆ ತಹಶೀಲ್ದಾರ್‌ ಲ್ಯಾಗ್‌ನಿಂದ ಸರಿಪಡಸಲಾಗುವುದು. ಪಹಣಿಯಲ್ಲಿ ಹೆಸರು ತಪ್ಪಾಗಿ ಕಂಡರೆ ಖರೀದಿ ಕೇಂದ್ರದ ಏಜ್‌ನ್ಸಿಗಳು ಸರಿಪಡಿಸುತ್ತವೆ. ಈಗಾಗಲೇ ಕಚೇರಿಗೆ 188 ಅರ್ಜಿ ಬೆಳೆ ಮಿಸ್‌ ಮ್ಯಾಚ್ ಆಗಿ ಬಂದಿದ್ದರಲ್ಲಿ 130 ಅರ್ಜಿ ಇತ್ಯರ್ಥಪಡಿಸಲಾಗಿದೆ. ಇನ್ನುಳಿದ ಅರ್ಜಿ ಇತ್ಯರ್ಥ ಪಡಿಸಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ. ಅನೇಕ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಾಂತ್ರಿಕ ತೊಂದರೆ ನಿವಾರಣೆಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next