Advertisement

ಕೋವಿಡ್‌ 19 ನಿರ್ಮೂಲನೆಗೆ ವೃಕ್ಷಮಾತೆ ತಿಮ್ಮಕ್ಕ ಪ್ರಾರ್ಥನೆ

06:32 AM Jun 06, 2020 | Lakshmi GovindaRaj |

ಕುದೂರು: ಮಹಾಮಾರಿ ಕೋವಿಡ್‌ 19 ವಿಶ್ವದಿಂದ ನಿರ್ಮೂಲನೆಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಎಂದು ಹೇಳಿದರು. ಕುದೂರು ಹೋಬಳಿ ತಿಮ್ಮಸಂದ್ರ ಗ್ರಾಮದಲ್ಲಿ ನೇತ್ರಾ  ಕ್ರಾಫ್ಟ್ ಸೈನ್ಸ್‌ ಸಂಸ್ಥೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

Advertisement

ವಿಶ್ವವೇ ಕೋವಿಡ್‌ 19 ವೈರಸ್‌ ನಿಂದ ಮುಕ್ತವಾಗಲು ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದೆ. ಮತ್ತೂಂದು ಕಡೆ  ಜನರು ಕೋವಿಡ್‌ 19 ಸೋಂಕಿನಿಂದ ಬಳಲುತ್ತಿರುವುದನ್ನು ನೋಡಲಾಗುತ್ತಿಲ್ಲ. ಹೀಗಾಗಿ ಪ್ರತಿ ದಿನ ಭಗವಂತನಲ್ಲಿ ಕೋವಿಡ್‌ 19ದಿಂದ ಸಮಸ್ತ  ರನ್ನು ಪಾರು ಮಾಡಿ, ಉತ್ತಮ ಪರಿಸರ  ದಿಂದ ಜನ ಜೀವನ ಮೊದಲಿನಂತಾಗಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದರು.

ಹೋಬಳಿಯಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂಬ ಹಂಬಲವಿತ್ತು. ಅದರಂತೆ ನೇತ್ರಾ ಕ್ರಾಫ್ಟ್ಸೈನ್ಸ್‌ ರೈತ ಸಂಸ್ಥೆಯ ಆಹ್ವಾನ ಆಮಂತ್ರಣ ದಿಂದಾಗಿ ಬಂದಿದ್ದೇನೆ. ಈಗ  ಹೋಬಳಿಯಲ್ಲಿ ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇನೆ. ಇದು ಅತ್ಯಂತ ಸಂತಸ ತಂದಿದೆ ಎಂದರು.

ಮಣ್ಣಿಗೆ ನಮಸ್ಕಾರ: ಹೋಬಳಿಯ ತಿಮ್ಮಸಂದ್ರ ಗ್ರಾಮದ ಕಾರ್ಯಕ್ರಮಕ್ಕೆ ಬಂದ ವೃಕ್ಷಮಾತೆ ತಿಮ್ಮಕ್ಕ ಮೊದಲು ಮಣ್ಣಿಗೆ  ನಮಸ್ಕರಿಸಿದರು. ಅವರ ಸರಳತೆಗೆ ಸಂಸ್ಥೆ ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಬಳಿಕ ಹಲಸಿನ ಗಿಡ ನೆಟ್ಟು ನೀರುಣಿಸಿದರು. ದತ್ತುಪುತ್ರ ಉಮೇಶ್‌, ನೇತ್ರಾಕ್ರಾಫ್ಟ್ ಸೈನ್ಸ್‌ ಸಂಸ್ಥೆ ಸಂಸ್ಥಾಪಕ ಸೆಲ್ವರಾಜ್‌, ನಿರ್ದೇಶಕಿ ಎಸ್‌. ರಾಜೇಶ್ವರಿ,  ಪ್ರಮೋದ್‌, ಕೃಷಿ ವಿಜ್ಞಾನಿ ಗಳಾದ ಡಾ.ಸದಾಶಿವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next