Advertisement

ಸಮಯಪಾಲನೆ ಯಶಸ್ವೀ ಜೀವನದ ಗುಟ್ಟು

11:32 PM Feb 09, 2020 | Sriram |

ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದಂತ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆೆ. ಯಾರು ಬೇಜವಾಬ್ದಾರಿಯಿಂದ ಕಾಲಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವನದುದ್ದಕ್ಕೂ ಸಮಯದ ಹಿಂದೆಯೇ ಇರುತ್ತಾರೆ.
ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತು ಬದ್ದ ಜೀವನದ ಜತೆಗೆ ಸಮಯಕ್ಕೆ ಮಹತ್ವವನ್ನು ನೀಡಿದ್ದಾನೆ. ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ. ಈಗ ಕಳೆದ ಸಮಯ ಮತ್ತೆ ಎಂದೂ ಹಿಂದಿರುಗಿ ಬರುವುದಿಲ್ಲ. ಇದಕ್ಕಾಗಿ ಸಿಕ್ಕಂತಹ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಬಾಚಿಕೊಳ್ಳುತ್ತಾ ಹೋಗಬೇಕು.

Advertisement

ಕಳೆದು ಹೋದ ಸಮಯವನ್ನು ತೆಗಳುತ್ತಾ ಕುಳಿತರೆ
ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ, ಎಲ್ಲರಿಗೂ ಸಮಯ ಒಂದೆ ರೀತಿಯದ್ದಾಗಿರುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಚಿಂತಕ-ಸಾಧಕನಿಗೆ ಇರುವ ಸಮಯ ಹಾಗೂ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ಸಿಗುವಂತಹ ಸಮಯ ಒಂದೇ ಆಗಿದೆ. ಇಲ್ಲಿ ಅವಗಳನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ನಿರ್ಧರಿತವಾಗಿದೆ. ಆದ್ದರಿಂದ ಸಮಯ ಯಾರಿಗೂ ಕಾಯದೆ ನಿರಂತರ ಚಲಿಸುತ್ತಲೇ ಇರುತ್ತದೆ.

ಸಾಧನೆಯ ಗರಿ ಬೆನ್ನು ಹತ್ತಿ ಬರುತ್ತದೆ
ಸಮಯಕ್ಕೆ ತನ್ನದೆ ಆದ ಮಹತ್ವ ಇದೆ. ಸಿಕ್ಕ ಅವಕಾಶಗಳನ್ನು ಆಯಾ ಸಮಯದಲ್ಲಿ ಸರಿಯಾಗಿ ಬಳಸಿಕೊಳ್ಳುತ್ತಾ ಹೋದರೆ ಶಿಸ್ತಿನ ಜತೆಯಲ್ಲಿ ಸಾಧನೆಯ ಗರಿಯೂ ನಮ್ಮನ್ನು ಬೆನ್ನು ಹತ್ತಿ ಬರುತ್ತದೆ. ಸಮಯದ ಬಗ್ಗೆ ನಮಗೆ ಎಲ್ಲವೂ ಗೊತ್ತು. ಆದರೆ, ಬಳಸಿಕೊಳ್ಳುವ ವಿಧಾನ ಮಾತ್ರ ಬದಲಾಗಬೇಕಿದೆ.

- ವಿಜಿತಾ ಅಮಿನ್‌

Advertisement

Udayavani is now on Telegram. Click here to join our channel and stay updated with the latest news.

Next