Advertisement
ಇದನ್ನೂ ಓದಿ:ಹೈದರಾಬಾದ್: ರಾಹುಲ್ ಗಾಂಧಿ ಕ್ಯಾಂಪಸ್ ಭೇಟಿಗೆ ಅನುಮತಿ ನಿರಾಕರಿಸಿದ ಉಸ್ಮಾನಿಯಾ ವಿವಿ
Related Articles
Advertisement
2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಜತೆ ಕೈಜೋಡಿಸಲು ಕಾಂಗ್ರೆಸ್ ಪಕ್ಷದ ಸಮಿತಿಯಲ್ಲಿ ಸೇರ್ಪಡೆಗೊಳ್ಳಬೇಕೆಂಬ ಆಹ್ವಾನವನ್ನು ಪ್ರಶಾಂತ್ ಕಿಶೋರ್ ತಿರಸ್ಕರಿಸಿದ ಒಂದು ವಾರದ ನಂತರ ಈ ದಿಢೀರ್ ಬೆಳವಣಿಗೆ ಟ್ವೀಟ್ ಸಂದೇಶ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿರುವುದಾಗಿ ವರದಿ ವಿಶ್ಲೇಷಿಸಿದೆ.
ಕಾಂಗ್ರೆಸ್ ಆಫರ್ ಅನ್ನು ತಿರಸ್ಕರಿಸಿದ ನಂತರ ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಪ್ರಶಾಂತ್ ಕಿಶೋರ್ ಜತೆ ಕಾರ್ಯನಿರ್ವಹಿಸಲು ಒಲವು ವ್ಯಕ್ತಪಡಿಸಿದ್ದವು. ಆದರೆ ತಮ್ಮದೇ ಸ್ವಂತ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲವಾಗಿತ್ತು. ಇದೀಗ ಟ್ವೀಟ್ ಸಂದೇಶದಿಂದ ತಾವು ಏಕಾಂಗಿಯಾಗಿ 2024ರ ಚುನಾವಣೆಯನ್ನು ಎದುರಿಸಲು ನಿರ್ಧರಿಸಿರುವ ಮುನ್ಸೂಚನೆ ನೀಡಿದಂತಾಗಿದೆ.
2014ರ ಸಾರ್ವತ್ರಿಕ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಪ್ರಧಾನಿ ನರೇಂದ್ರ ಮೋದಿ ಅವರ ಪಾಳಯದಲ್ಲಿ ಸೇರ್ಪಡೆಗೊಂಡು ಚುನಾವಣಾ ತಂತ್ರಗಾರ ಎಂದು ಗುರುತಿಸಿಕೊಂಡು, ಯಶಸ್ವಿಯಾಗಿದ್ದರು. ನಂತರ 2015ರಲ್ಲಿ ಬಿಹಾರ ಚುನಾವಣೆಯಲ್ಲಿ ಲಾಲುಪ್ರಸಾದ್ ಮತ್ತು ನಿತೀಶ್ ಮೈತ್ರಿಕೂಟ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಪ್ರಶಾಂತ್ ಕಿಶೋರ್ ಮಹತ್ತರ ಪಾತ್ರ ವಹಿಸಿದ್ದರು.
2017ರಲ್ಲಿ ಪಂಜಾಬ್ ನಲ್ಲಿಯೂ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ತಂತ್ರಗಾರನಾಗಿ ಕಾರ್ಯನಿರ್ವಹಿಸಿ ಕ್ಯಾ.ಅಮರೀಂದರ್ ಸಿಂಗ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. 2019ರಲ್ಲಿ ಆಂಧ್ರಪ್ರದೇಶದಲ್ಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿಗೂ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿ ಅವರ ಪಕ್ಷ ಜಯಭೇರಿ ಬಾರಿಸಲು ಕಾರಣಕರ್ತರಾಗಿದ್ದರು.
2020ರ ದೆಹಲಿ ಮರು ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್, 2021ರಲ್ಲಿ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ಹಾಗೂ ಕಳೆದ ವರ್ಷ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಜತೆ ಕಿಶೋರ್ ಚುನಾವಣಾ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿ ಗೆಲುವು ಕಂಡಿರುವುದಾಗಿ ವರದಿ ತಿಳಿಸಿದೆ.