Advertisement

ಬೆಳವಣಿಗೆ ಜತೆ ಕಾಲದ ಹೆಜ್ಜೆಗಾರಿಕೆ ದಾಖಲಿಸುವ ಮ್ಯಾಗಸಿನ್‌

01:00 AM Mar 11, 2019 | Harsha Rao |

ವಿದ್ಯಾನಗರ: ಮಾಯಿಂಡಡಿ ಎಂಬುದು ಗಡಿನಾಡು ಕಾಸರಗೋಡಿನ ವಿದ್ಯಾನಗರ ಎಂಬ ಪ್ರದೇಶದ ಮೂಲನಾಮ.ಇಲ್ಲಿ ಸರಕಾರಿ ಕಾಲೇಜು ಎಂಬ ಮಹತ್ವದ ವಿದ್ಯಾಸಂಸ್ಥೆ ಸ್ಥಾಪನೆಗೊಳ್ಳುವ ಮುನ್ನ ಮಾವಿನಮರಗಳೇ ಅಧಿಕವಾಗಿದ್ದ ಪ್ರದೇಶಕ್ಕೆ ಈ ಹೆಸರಿತ್ತು. ಇಂದಿಗೂ ಇಲ್ಲಿ ಅಧಿಕವಾಗಿ ಕಂಡುಬರುವ ಫಲಭರಿತ ಮಾವಿನ ಮರಗಳು ಇದಕ್ಕೆ ಸಾಕ್ಷಿನುಡಿಯುತ್ತವೆ.

Advertisement

ವಿದ್ಯಾನಗರದ ಸರಕಾರಿ ಅಂಧರ ವಿದ್ಯಾಲಯ 69 ವರ್ಷ ದಾಟುತ್ತಿರುವ ಸಂದರ್ಭದಲ್ಲಿ ಶಾಲೆಯ         ಇತಿಹಾಸವನ್ನು ತಿಳಿಸುವ ಸಂದರ್ಭದಲ್ಲಿ ಸಾಗಿ ಬಂದಿರುವ ಕಾಲದ ಹೆಜ್ಜೆ ಗುರುತುಗಳನ್ನೂ ದಾಖಲಿಸುವ ಪ್ರಯತ್ನವನ್ನು “ಅಂತರ್‌ ದೃಷ್ಟಿ’ ಯೊಂದಿಗೆ ಕಾಲದ ಗತಿಯನ್ನು ಗಮನಿಸುವವರ ಶಾಲೆಯ ಶಿಕ್ಷಕರೊಬ್ಬರು (ಇವರಿಗೆ ದೃಷ್ಟಿ ಬಲವಿದೆ(ಇವರು ಅಂಧರಲ್ಲ) ನಡೆಸಿರುವುದು ಸ್ತುತ್ಯರ್ಹವಾಗಿದೆ.ಶಾಲೆಯ ಆರಂಭ ಹಂತದ ಚಟುವಟಿಕೆಗಳು, ಹಿರಿಯ ಶಿಕ್ಷಕರೊಂದಿಗೆ ನಡೆಸಲಾದ ಸಂವಾದಗಳು, ಅಂಗವಿಕಲರಿಗಿರುವ ಕಾನೂನು ರೀತ್ಯಾ ಸಂರಕ್ಷಣೆಗಳು, ಶಿಕ್ಷಣ ವಲಯದಲ್ಲಿ ಇವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ವಿದ್ಯಾರ್ಥಿಗಳ ಸಾಹಿತ್ಯ ರಚನೆಗಳು ಇತ್ಯಾದಿಗಳು ಈ ಮ್ಯಾಗಸಿನ್‌ನ ಪ್ರಧಾನ ಭೂಮಿಕೆಗಳಾಗಿವೆ.ವಿದ್ಯಾರ್ಥಿಗಳೂ, ಶಿಕ್ಷಕರೂ ಸೇರಿ 7 ಮಂದಿಯ ಸಂಪಾದಕೀಯ ಮಂಡಳಿ ಈ ಮ್ಯಾಗಸಿನ್‌ಗಾಗಿ ದುಡಿಮೆ ನಡೆಸಿದೆ. 1950ರಲ್ಲಿ ಕಾಸರಗೋಡು ರೈಲು ನಿಲ್ದಾಣ ಬಳಿಯ ಬಾಡಿಗೆ ಕಟ್ಟಡದಲ್ಲಿ ಸರಕಾರಿ ಅಂಧರ ಶಾಲೆ ಚಟುವಟಿಕೆ ಆರಂಭಿಸಿತ್ತು. 1964ರಲ್ಲಿ ವಿದ್ಯಾನಗರದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. 

ರಾಜ್ಯದಲ್ಲೇ ಎರಡನೇ ಅಂಧರ ಶಿಕ್ಷಣಾಲಯ ಎಂಬ ವಿಶೇಷತೆಗೂ ಈ ಸಂಸ್ಥೆ ಪಾತ್ರವಾಗಿದೆ. ಏಕಾಧ್ಯಾಪಕ ಶಾಲೆಯಾಗಿ ಆರಂಭಗೊಂಡಿದ್ದರೂ, ಈಗ 12 ಮಂದಿ ಶಿಕ್ಷಕರು ಇಲ್ಲಿ ಅಧ್ಯಾಪನ ನಡೆಸುತ್ತಾರೆ.  ಒಂದರಿಂದ 7 ನೇ ತರಗತಿ ವರೆಗೆ 14 ಮಂದಿ ಮಕ್ಕಳು ಇಲ್ಲಿ ಕಲಿಕೆಯಲ್ಲಿದ್ದಾರೆ. ಜೊತೆಗೆ ಶಿಕ್ಷಕರಾದ ಎಂ.ಪಿ.ಅಬೂಬಕ್ಕರ್‌, ನಾರಾಯಣನ್‌, ಉಮೇಶನ್‌ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದವರೇ.  ಈ ವರೆಗೆ 40 ಮಂದಿ ಇಲ್ಲಿ ಶಿಕ್ಷಣ ಪೂರೈಸಿ ತೆರಳಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸರಕಾರಿ ನೌಕರಿಯಲ್ಲಿದ್ದಾರೆ. 

ಎಂಡೋಸಲಾ #ನ್‌ ಸಂತ್ರಸ್ತರ ಹೋರಾಟಗಾರಮೂನೀಸಾ, ಕಲೋತ್ಸವಗಳಲ್ಲಿ ಮಿಂಚುತ್ತಿರುವ ಪ್ರತಿಭೆಗಳಾದ ಜೀವನ್‌ ರಾಜ್‌, ಕೃಷ್ಣ ಪ್ರಿಯ ಕೂಡ ಈ ಶಾಲೆಯ ವಿದ್ಯಾರ್ಥಿ ಗಳಾಗಿದ್ದವರೇ. ಪಾಲಾ^ಟ್‌ನ ಮೂಲ ನಿವಾಸಿ, ಈ ಶಾಲೆಯ ಶಿಕ್ಷಕ ಎಂ.ರಾಜೇಶ್‌ ಈ ಮ್ಯಾಗಸಿನ್‌ ಪ್ರಕಟಿಸಿದ್ದಾರೆ. ಈ ಕೃತಿ ಪ್ರಕಟಿಸುವ ಮುನ್ನವೇ ವಿಭಿನ್ನವಾದ ಹೆಸರು ಇರಿಸಬೇಕು ಎಂಬ ಉತ್ಕಟ ಆಕಾಂಕ್ಷೆ ತಿಂಗಳುಗಟ್ಟಲೆ ತಲೆಕೆಡಿಸುವಂತೆ ಮಾಡಿತ್ತು ಎಂದು ರಾಜೇಶ್‌ ಮಾಸ್ಟರ್‌ ತಿಳಿಸಿದ್ದಾ ಈ ಮಂಥನದಲ್ಲಿ ಉದಿಸಿ ಬಂದ ಹೆಸರೇ “ಚುಂಡಪ್ಪ್’. ಮಾ.29ರಂದು ಈ ಮ್ಯಾಗಸಿನ್‌ ಬಿಡುಗಡೆಯಾಗಲಿದೆ.

ರಾಜ್ಯ ಮಟ್ಟದ ಅಂಗವಿಕಲರ ಕಲೋತ್ಸವಗಳಲ್ಲಿ ಸತತ 4 ಬಾರಿ ಸವಾಂìಗೀಣ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಈ ವಿದ್ಯಾಲಯದ್ದು. ಶಿಕ್ಷಣಾಲಯಗಳಲ್ಲಿ ಸಂಗೀತ, ಕ್ರಾಫ್ಟ್‌, ವಾದನ ಉಪಕರಣ ಇತ್ಯಾದಿ ತರಬೇತಿಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next