ಕೋಲಾರ/ಬಂಗಾರಪೇಟೆ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕೋಟಿಲಿಂಗೇಶ್ವರ ದೇವಾಲಯ ಮೇಲ್ವಿಚಾರಣೆಯನ್ನು ಡಿ.ಸಿ. ನೇತೃತ್ವದ ಸಮಿತಿಗೆ ನೀಡಿರುವುದಕ್ಕೆ 30 ದಿನಗಳ ಕಾಲಾವಕಾಶ ನೀಡುವಂತೆ ಡಾ. ಶಿವಪ್ರಸಾದ್ ನ್ಯಾಯಾಲಯವನ್ನು ಕೋರಿದ್ದರೆ, ಈ ತೀರ್ಪಿಗೆ ತಡೆಯಾಜ್ಞೆ ನೀಡದಂತೆ ಹೈಕೋರ್ಟ್‌ನಲ್ಲಿ ಕುಮಾರಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಕೋಟಿಲಿಂಗೇಶ್ವರ ದೇವಾಲಯ ಮೇಲ್ವಿಚಾರಣೆ ಮತ್ತು ಆಸ್ತಿ ಹಂಚಿಕೆ ವಿಚಾರದಲ್ಲಿ ಡಾ.ಶಿವಪ್ರಸಾದ್ ಮತ್ತು ಕುಮಾರಿ ನಡುವೆ ಕೆಜಿಎಫ್ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಹಿಂದೆಯೂ ದೇವಾಲಯ ಆಸ್ತಿ ನಿರ್ವಹಣೆ ತಗಾದೆ ಮೇರೆ ಮೀರಿದಾಗ ಭಕ್ತರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ದೇವಾಲಯವನ್ನು ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದವು. ಆದರೆ, ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಇದಕ್ಕೆ ಅಡ್ಡಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಯತ್ನವನ್ನು ಕೈಚೆಲ್ಲಬೇಕಾಯಿತು.
ತೀರ್ಪು ಸ್ವಾಗತಿಸಿದ ಸಾರ್ವಜನಿಕರು: ಇದೀಗ ಕೆಜಿಎಫ್ ನ್ಯಾಯಾಲಯ ಡೀಸಿ ನೇತೃತ್ವದ ಸಮಿತಿಗೆ ದೇವಾಲಯ ನಿರ್ವಹಣೆ ಯನ್ನು ಒಪ್ಪಿಸಿದೆ. ಡಾ.ಶಿವಪ್ರಸಾದ್ ಮತ್ತು ಕುಮಾರಿ ನಡುವಿನ ವ್ಯಾಜ್ಯ ಇತ್ಯರ್ಥವಾಗುವವರೆಗೂ ಡೀಸಿ ನೇತೃತ್ವದ ಸಮಿತಿ ದೇವಾಲಯವನ್ನು ನಿರ್ವಹಣೆ ಮಾಡುವಂತೆ ಕೆಜಿಎಫ್ ಮೂರನೇ ಹೆಚ್ಚುವರಿ ಸೆಷನ್ಸ್ ಜಿಲ್ಲಾ ನ್ಯಾಯಾಲಯ ಮೂರು ದಿನಗಳ ಹಿಂದೆ ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪನ್ನು ಸಾರ್ವಜನಿಕರು ಸ್ವಾಗತಿಸಿದ್ದರು.
30 ದಿನ ಅವಕಾಶ ಕೊಡಿ: ಆದರೆ, ಡಾ. ಶಿವಪ್ರಸಾದ್ ಈ ತೀರ್ಪನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಿ, ತಾವು ಸದರಿ ತೀರ್ಪಿಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರಬೇಕಾಗಿರುವು ದರಿಂದ ತಮಗೆ 30 ದಿನಗಳ ಕಾಲಾವಕಾಶ ಬೇಕೆಂದು ಕೋರಿದ್ದಾರೆ. ಅಲ್ಲಿಯವರೆಗೂ ಡೀಸಿ ನೇತೃತ್ವದ ಸಮಿತಿಗೆ ಕೋಟಿಲಿಂಗೇಶ್ವರ ದೇವಾಲಯ ನಿರ್ವಹಣೆ ಜವಾಬ್ದಾರಿ ನೀಡಬಾರದೆಂದು ಮನವಿ ಮಾಡಿದ್ದಾರೆ.
ವಿಚಾರಣೆ ಇಂದಿಗೆ ಮುಂದೂಡಿಕೆ: ಈ ಅರ್ಜಿ ಕುರಿತಂತೆ ಕೆಜಿಎಫ್ ಹೆಚ್ಚುವರಿ ಸೆಷನ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಮತ್ತು ಶುಕ್ರವಾರ ಅರ್ಜಿ ಪರ ಮತ್ತು ವಿರುದ್ಧ ವಕೀಲರ ನಡುವೆ ಸುದೀರ್ಘವಾದ ನಡೆದಿದೆ. ಎರಡೂ ಕಡೆ ವಾದ ಆಲಿಸಿರುವ ನ್ಯಾಯಾಲಯವು ಈ ಪ್ರಕರಣವನ್ನು ಶನಿವಾರಕ್ಕೆ ಮುಂದೂಡಿದೆ. ಭಕ್ತರಲ್ಲಿ ಕುತೂಹಲ: ಇದೇ ಅವಧಿಯಲ್ಲಿ ಕೆಜಿಎಫ್ ನ್ಯಾಯಾಲಯ ನೀಡಿರುವ ತೀರ್ಪನ್ನು ಒಪ್ಪಿಕೊಂಡಿರುವ ಕುಮಾರಿ ಈ ತೀರ್ಪಿಗೆ ಡಾ.ಶಿವಪ್ರಸಾದ್ ತಡೆಯಾಜ್ಞೆ ಪಡೆಯಲು ಸಾಧ್ಯವಾಗದಂತೆ ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಕೆಜಿಎಫ್ ನ್ಯಾಯಾಲಯ ನೀಡುವ ತೀರ್ಪಿನ ಬಗ್ಗೆ ಭಕ್ತರು ಮತ್ತು ಸಾರ್ವಜನಿ ಕರಲ್ಲಿ ಕುತೂಹಲ ಉಂಟಾಗಿದೆ.ಕೋಟಿಲಿಂಗೇಶ್ವರ ನಿರ್ವಹಣೆಯನ್ನು ನ್ಯಾಯಾಲಯ ಡೀಸಿ ನೇತೃತ್ವದ ಸಮಿತಿಗೆ ಉಳಿಸುತ್ತದೋ ಅಥವಾ ಡಾ.ಶಿವಪ್ರಸಾದ್ ಕೋರಿದಂತೆ 30 ದಿನಗಳ ಕಾಲಾವಕಾಶ
ನೀಡುತ್ತದೋ, ಕುಮಾರಿ ಬಣದ ಕೇವಿಯಟ್ ಅರ್ಜಿಗೆ ಹೈಕೋರ್ಟ್‌ನಲ್ಲಿ ಪುರಸ್ಕಾರ ಸಿಗುತ್ತದೋ ಎನ್ನುವುದು ಕಾದು ನೋಡಬೇಕಾಗಿ¨