Advertisement
ಮಹಿಳೆಯರು ಅಲಂಕಾರ ಪ್ರಿಯರು. ಮಹಿಳೆಯರ ಅಲಂಕಾರದ ವಸ್ತುಗಳ ಪಟ್ಟಿ ಮಾಡಹೊರಟರೆ ಲಿಪ್‌ಸ್ಟಿಕ್‌ಗೆ ಮರುಮಾತಿಲ್ಲದೆ ಮೊದಲ ಸ್ಥಾನ ಕೊಡಬೇಕಾಗುತ್ತದೆ. ಯಾವುದೇ ಸಭೆ ಸಮಾರಂಭಗಳಿರಲಿ, ಇಲ್ಲವೇ ಪೇಟೆಗೆ ಶಾಪಿಂಗ್ ಮಾಡಲು ಹೋಗುವಾಗಲೇ ಆಗಲಿ, ಲಿಪ್‌ಸ್ಟಿಕ್ ಹಚ್ಚದೆ ಮನೆಯ ಹೊಸ್ತಿಲು ದಾಟದ ಮಹಿಳೆಯರೂ ಇ¨ªಾರೆ. ತಾರೆಯರಂತೂ ಲಿಪ್‌ಸ್ಟಿಕ್ ಇಲ್ಲದೆ ಕ್ಯಾಮೆರಾ ಮುಂದೆ ಬರೋದೇ ಇಲ್ಲ. ನೆನಪಿರಲಿ: ಲಿಪ್‌ಸ್ಟಿಕ್ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು. ತಮ್ಮ ಮುಖ ಚೆನ್ನಾಗಿಲ್ಲ ಎಂದು ಕೊರಗುವ ಮಹಿಲೆಯರಿಗೆ ಒಂದು ಕಿವಿಮಾತು. ತುಟಿಯ ಆಕಾರವನ್ನು ಬದಲಾಯಿಸಲಾಗದಿದ್ದರೂ ಉಪಾಯದಿಂದ ತಿದ್ದಿ ತೀಡಿ, ಆಕಾರಕ್ಕೆ ಹೊಂದುವ ಬಣ್ಣ ಹಚ್ಚಿ ತುಟಿಗಳು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇನ್ನು ತುಟಿ ತುಂಬಾ ದಪ್ಪಗಿದೆಯೆಂದೋ, ತೆಳುವಾಯಿತೆಂದೋ ಚಿಂತೆ ಬೇಡ. ಅದಕ್ಕೂ ಪರಿಹಾರವಿದೆ. ಲಿಪ್ ಲೈನರ್ (ತುಟಿಯ ಪೆನ್ಸಿಲ…) ಬಹೋಪಯೋಗಿ. ತುಟಿಯ ಸುತ್ತಲೂ ಲಿಪ್ ಲೈನರ್ ಬಳಸುವುದರಿಂದ ತುಟಿಗೆ ಹಚ್ಚಿದ ಬಣ್ಣ ಸೋರಿ ಮುಖದ ಮೇಲೆ ಬೀಳದಂತಿರಲು ನೆರವಾಗುವುದಲ್ಲದೆ, ತುಟಿಯ ಆಕಾರವನ್ನೂ ಲಿಪ್ ಲೈನರ್‌ನ ಸಹಾಯದಿಂದ ತಿದ್ದಿ ತೀಡಬಹುದು.
Related Articles
Advertisement
ದಪ್ಪ ಮೇಲ್ತುಟಿ: ಮೇಲ್ತುಟಿ ದಪ್ಪಗಾಗಿ, ಕೆಳ ತುಟಿಗಳು ತೆಳುವಾಗಿರುವ ಉದಾಹರಣೆಗಳು ಭಾರತೀಯರಲ್ಲಿ ಅಧಿಕ. ಮೊದಲು ಲಿಪ್‌ಲೈನರ್‌ನಿಂದ ತುಟಿಗಳನ್ನು ತಿದ್ದಬೇಕು, ಮೇಲು¤ಟಿಗೆ ಗಾಢವಾಗಿ, ಕೆಳ ತುಟಿಗೆ ತುಸು ಲೈಟಾಗಿ ಲಿಪ್‌ಸ್ಟಿಕ್ ಹಚ್ಚಿದರೆ ಈ ತೊಂದರೆ ಎದ್ದು ಕಾಣಿಸುವುದಿಲ್ಲ.
ದಪ್ಪ ಕೆಳತುಟಿ: ಇವೇ ಸುಂದರವಾದ ತುಟಿಗಳು. ಮೇಕಪ್ ಮಾಡುವಾಗ ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಎರಡು ತುಟಿಗಳಿಗೂ ಒಂದೇ ತರಹ ಲಿಪ್‌ಸ್ಟಿಕ್ ಹಚ್ಚಿದರೆ ಸಾಕು.ಮುಖವು ವಯಸ್ಸಾದಂತಿದ್ದರೆ: ಆದಷ್ಟು ಸಹಜ ಬಣ್ಣದ ಕ್ರೀಮ್ ಲಿಪ್‌ಸ್ಟಿಕ್ಕನ್ನು ಉಪಯೋಗಿಸಿದಾಗ ತುಟಿಯಲ್ಲಿರುವ ನೆರಿಗೆಗಳು ಲಿಪ್‌ಸ್ಟಿಕ್ಕಿನ ಹಿಂದೆ ಅಡಗಿಕೊಳ್ಳುತ್ತವೆ. ಗೀತಾ ಕುಂದಾಪುರ