ಚಿಕ್ಕಮಗಳೂರು: ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮೂಡಿಗೆರೆ ತಾಲೂಕಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್‌ಐ ನಿಷೇ ಧಿಸುವ ನಿಟ್ಟಿನಲ್ಲಿ ಎನ್‌ಐಎ ಸಾಕ್ಷéಗಳನ್ನು ಕಲೆ ಹಾಕಲು ಮುಂದಾಗಿದೆ. ಈ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ನಡೆದ ಹಲವು ಹತ್ಯೆಗಳ ಹಿಂದೆ ಈ ಸಂಘಟನೆಯ ಕೈವಾಡವಿದೆ.
ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಯಲ್ಲಿ ಸಂಘಟನೆಯವರು ತೊಡಗಿಕೊಂಡಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ. ತನಿಖೆ ವೇಳೆ ದೇಶದ್ರೋಹ ಕೆಲಸದ ಸಾಕ್ಷಿಗಳು ಲಭ್ಯವಾಗಿವೆ. ಬಾಂಬ್ ತಯಾರಿಕೆ, ಸೊ#ಧೀಟ ಮಾಡಿರುವ ವಿಷಯ ತನಿಖೆಯಿಂದ ಹೊರಬಂದಿದೆ.
ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಎನ್‌ಐಎ ದಾಳಿ ಖಂಡಿಸಿ ಪೊಲೀಸರು, ಮಾಧ್ಯಮದವರ ಮೇಲೆ ದಾಳಿ ಮಾಡಿದ್ದಾರೆ ಎಂದರು.
ಈ ಸಂಘಟನೆಗಳ ನಿಷೇಧಕ್ಕೆ ಸಾಕ್ಷಿ ಬೇಕು. ಎನ್‌ಐಎ ಸಾಕ್ಷಿಗಳನ್ನು ಕಲೆ ಹಾಕುವ ಕೆಲಸ ಮಾಡುತ್ತಿದೆ. ಈ ಸಂಘಟನೆಗಳು ಸಿಮಿಯ ಇನ್ನೊಂದು ರೂಪವಾಗಿದ್ದು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ತನಿಖೆ ವೇಳೆ ಎನ್‌ಐಎ ತಂಡಕ್ಕೆ ರಾಜ್ಯ ಪೊಲೀಸರು ರಕ್ಷಣೆ ನೀಡಬೇಕು. ಕಾಂಗ್ರೆಸ್ ಭಾರತ್ ಜೋಡೋ ಹೆಸರಿನಲ್ಲಿ ಭಾರತ್ ತೋಡೋ ಯಾತ್ರೆ ಮಾಡುತ್ತಿದೆ. ಇದು ಭಾರತದ ಒಗ್ಗಟ್ಟನ್ನು ಮುರಿಯುವ ತುಕಡೇ ಗ್ಯಾಂಗ್‌ನ ಯಾತ್ರೆ. ಭಾರತವನ್ನು ವಿಭಜನೆ ಮಾಡಿದವರು ಯಾರು, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಯಾರು ಹೊಣೆ, ಯಾರ ಕಾಲದಲ್ಲಿ ಆಗಿದ್ದು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದರು.