ರಾಣಿಬೆನ್ನೂರ: ಸಾಧನೆಯ ಮೆಟ್ಟಿಲೇರಲು ಕೀಳಿರಿಮೆ ಮೊದಲು ತೊರೆಯಬೇಕು. ಜೊತೆಗೆ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಪ್ರಮಾಣಿಕತೆ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ದಿಶೆಯಲ್ಲಿ ಯಾವ ವಿದ್ಯಾರ್ಥಿಗಳು ಮುನ್ನಡೆಯುತ್ತಾರೋ ಅವರು ಉತ್ತಮ ಸಾಧನೆ ಮಾಡುತ್ತಾರೆ ಎಂದು ಟ್ಯಾಗೋರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಸವರಾಜ ಕೇಲಗಾರ ಹೇಳಿದರು.
ಯಾವ ಮನೆಯಲ್ಲಿ ಪಾಲಕರು ಟಿವಿ ಗೀಳು ತೊರೆಯುವರೋ ಅಂಥವರ ಮಕ್ಕಳು ವಿದ್ಯಾವಂತರಾಗಬಲ್ಲರು. ಹೀಗಾಗಿ ಎಲ್ಲರೂ ಪರೀಕ್ಷೆ ಸಮಯದಲ್ಲಿ ಮತ್ತು ಅದಕ್ಕೂ ಮುನ್ನ ಟಿವಿಯನ್ನು ಅವಶ್ಯಕತೆಗಿಂತ ಹೆಚ್ಚು ಬಳಸಬಾರದು. ಆಗ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅಕ್ಷತಾ ಕೊರ್ಲಹಳ್ಳಿ, ಶಾಲೆಗೆ ದ್ವಿತೀಯ ಸ್ಥಾನ ಪಡೆದ ನಿಸರ್ಗಾ ಕುಂದಾಪುರ, ತೃತೀಯ ಸ್ಥಾನ ಪಡೆದ ಅನುಷಾ ನಾಡಿಗೇರ ಮತ್ತು ಪಿಯುಸಿ ವಾಣಿಜ್ಯ ವಿಭಾದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಿಂಥಾಲ್ ಜೈನ್, ಶಾಲೆಗೆ ದ್ವಿತೀಯ ಸ್ಥಾನ ಪಡೆದ ಮೇಘಾ ಗಾಮದ, ವಿಜ್ಞಾನ ವಿಭಾಗದಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶರಣಪ್ಪ ಬನ್ನಿಮಟ್ಟಿ ಅವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಹನಗೋಡಿಮಠ, ಉಮೇಶ ಹೊನ್ನಾಳಿ, ಶ್ರೀನಿವಾಸ ಗುಪ್ತಾ, ಡಿ.ಎಸ್. ಹಿರೇಮಠ, ಕೆ.ವಿ.ಶ್ರೀನಿವಾಸ, ರಾಜಣ್ಣ ಮೋಟಗಿ, ವಾಜುಬಾಯ ಪಟೇಲ್, ಶಂಕರಗೌಡ ಮಾಳಗಿ, ಮುಖ್ಯಶಿಕ್ಷಕ ಪ್ರಕಾಶ ಚೌಟಗಿ, ಶಿಕ್ಷಕಿ ಸುಮಾ ಪ್ರಸಾದ, ಶ್ರೀದೇವಿ ಎಸ್. ಹಾಗೂ ಪಾಲಕರು ಮತ್ತು ವಿದ್ಯಾರ್ಥಿಗಳು ಇದ್ದರು.
Advertisement
ಶುಕ್ರವಾರ ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಚಿತ್ತವಿಟ್ಟು ಕೇಳುವ ವಿದ್ಯಾರ್ಥಿಗಳು ಮಾತ್ರ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
Related Articles
Advertisement