Advertisement
ಬದಲಾದ ಕ್ರಮದಂತೆ, ವಿಜೇತರ ಮೂರು ಪದಕಗಳನ್ನು ಮೂರು ಟ್ರೇಗಳಲ್ಲಿ ಹಾಕಿ ಪೋಡಿಯಂ ಮೇಲೆ ಇಡಲಾಗುವುದು. ವಿಜೇತರು ಬಂದು ತಮ್ಮ ಪದಕಗಳನ್ನು ತಾವೇ ಕುತ್ತಿಗೆಗೆ ಹಾಕಿಕೊಳ್ಳಬೇಕು. ಚಪ್ಪಾಳೆ ಇಲ್ಲ, ಅಭಿನಂದನೆ ಇಲ್ಲ, ಅಪ್ಪುಗೆ ಇಲ್ಲ, ಹಸ್ತಲಾಘವ ಇಲ್ಲ, ಯಾವ ಸಂಭ್ರಮವೂ ಇಲ್ಲ!
“ಕೊರೊನಾದಿಂದಾಗಿ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ವಿಜೇತರು ಅವರ ವರೇ ಪದಕಕಳನ್ನು ಧರಿಸಿಬೇಕಿದೆ. ಟ್ರೇಯಲ್ಲಿ ಪದಕ ತಂದಿರಿಸುವವರು ಕೂಡ ಇದನ್ನು ಗ್ಲೌಸ್ ಧರಿಸಿಯೇ ಮುಟ್ಟಿರುತ್ತಾರೆ. ಪದಕ ಸಮಾರಂಭದಲ್ಲಿ ವಿಜೇತರಿಗೆ ಯಾವ ವಿಶೇಷ ಗೌರವವೂ ಇರುವುದಿಲ್ಲ. ಇದು ಕೇವಲ ಸಾಂಕೇತಿಕ ಸಮಾರಂಭ’ ಎಂದು ಬಾಕ್ ಸ್ಪಷ್ಟಪಡಿಸಿದರು. ಕೊರೊನಾ ಹೆಚ್ಚಳ
ಒಲಿಂಪಿಕ್ಸ್ ಸಮೀಪಿಸುತ್ತಿದ್ದಂತೆಯೆ ಟೋಕಿಯೊದಲ್ಲಿ ಕೊರೊನಾ ಸಂಖ್ಯೆಯೂ ಹೆಚ್ಚಿದೆ. ಬುಧವಾರ 1,149 ಕೇಸ್ ದಾಖಲಾಗಿದೆ. ಕಳೆದ 6 ತಿಂಗಳಲ್ಲೇ ಇದು ಜಪಾನ್ ರಾಜಧಾನಿಯಲ್ಲಿ ಕಂಡುಬಂದ ಅತೀ ಹೆಚ್ಚಿನ ಸೋಂಕಿನ ಪ್ರಕರಣವಾಗಿರುವುದು ಕಳವಳದ ಸಂಗತಿ.
Related Articles
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 29 ಸದಸ್ಯರ ನಿರಾಶ್ರಿತರ ಕ್ರೀಡಾ ತಂಡಕ್ಕೆ (ರೆಪ್ಯುಜಿ ಟೀಮ್) ಕೊರೊನಾ ಆತಂಕ ಎದುರಾಗಿದೆ. ಕತಾರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಈ ತಂಡದ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಈ ತಂಡದ ಟೋಕಿಯೊ ಪ್ರಯಾಣ ವಿಳಂಬಗೊಳ್ಳಲಿದೆ.
Advertisement
ಸಿರಿಯಾ, ಸೌತ್ ಸುಡಾನ್, ಎರಿಟ್ರಿಯಾ, ಅಫ್ಘಾನಿಸ್ಥಾನ, ಇರಾನ್ ಮೊದಲಾದ ನಿರಾಶ್ರಿತ ಕ್ರೀಡಾಪಟುಗಳು ಈ ತಂಡದಲ್ಲಿದ್ದು, ಒಲಿಂಪಿಕ್ಸ್ ಧ್ವಜದಡಿ 12 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ನಿರಾಶ್ರಿತರ ತಂಡ ಪ್ರತಿನಿಧಿಸಿತ್ತು.
ಬ್ರಝಿಲ್ ತಂಡ ತಂಗಿರುವ ಹೋಟೆಲ್‌ನಲ್ಲೇ ಕೊರೊನಾ!ಒಲಿಂಪಿಕ್ಸ್ ಜೈವಿಕ ಸುರಕ್ಷಾ ವಲಯದಲ್ಲಿ ಬರುವ ಹೊಟೇಲೊಂದರ 7 ಸಿಬಂದಿಗೆ ಕೊರೊನಾ ಸೋಂಕು ಬಂದಿರುವುದು ಖಚಿತವಾಗಿದೆ! ಹಮನತ್ಸು ನಗರದಲ್ಲಿರುವ ಈ ಹೊಟೇಲ್‌ನಲ್ಲಿ ಬ್ರಝಿಲ್ ತಂಡ ಕೂಡ ತಂಗಿದೆ. ಈ ಹೊಟೇಲ್‌ನಲ್ಲೇ ಸೋಂಕು ಪತ್ತೆಯಾಗಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಸದ್ಯ ಬ್ರಝಿಲ್ ಆ್ಯತ್ಲೀಟ್ಸ್‌ಗಳು ಸುರಕ್ಷಾವಲಯದಲ್ಲಿರುವುದರಿಂದ ಆತಂಕಪಡುವ ಅಗತ್ಯವಿಲ್ಲ.