ಮುಂಬೈ: ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಮಿನಿ ವಿಡಿಯೋ ಆ್ಯಪ್ ಟಿಕ್ ಟಾಕ್ ನ್ನು ಭಾರತ ಸರ್ಕಾರ ನಿಷೇಧ ಮಾಡಿತ್ತು. ಆದರೆ ಈ ಆ್ಯಪ್ ಭಾರತದಲ್ಲಿ ಮತ್ತೆ ಕಾರ್ಯ ನಿರ್ವಹಿಸಲಿದೆ ಎಂದು ವರದಿಯಾಗಿದೆ.
ಕೆಲವು ತಿಂಗಳ ಹಿಂದೆ, ಟಿಕ್‌ಟಾಕ್ ಮಾಲೀಕತ್ವದ ಕಂಪನಿ ಬೈಟ್‌ಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮತ್ತೆ ತರಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸಿತ್ತು. ಈಗ ಭಾರತದಲ್ಲಿ ಪ್ರಮುಖ ಇ ಸ್ಪೋರ್ಟ್ಸ್ ಮತ್ತು ಗೇಮಿಂಗ್ ವೆಂಚರ್ ಆಗಿರುವ ಸ್ಕೈ ಸ್ಪೋರ್ಟ್ಸ್, ಖಂಡಿತವಾಗಿಯೂ ಟಿಕ್ ಟಾಕ್ ಭಾರತದಲ್ಲಿ ಮತ್ತೆ ಕಾರ್ಯ ನಿರ್ವಹಿಸಲಿದೆ ಎಂದು ಸ್ಪಷ್ಟನೆ ನೀಡಿದೆ.
ಚೀನಾ ಮೂಲದ ಆ್ಯಪ್ ಟಿಕ್ ಟಾಕ್ ಭಾರತದಲ್ಲಿ ಭಾರೀ ಸಂಖ್ಯೆಯ ಬಳಕೆದಾರರನ್ನು ಹೊಂದಿತ್ತು. ಆದರೆ ಇದನ್ನು ಭಾರತ ಸರ್ಕಾರ 2020ರಲ್ಲಿ ಬ್ಯಾನ್ ಮಾಡಿತ್ತು. ರಾಷ್ಟ್ರೀಯ ಭದ್ರತೆಯ ಕಾರಣದಿಂದ ಸರ್ಕಾರ ಟಿಕ್ ಟಾಕ್ ನೊಂದಿಗೆ ಇತರ 58 ಆ್ಯಪ್ ಗಳನ್ನು ನಿಷೇಧ ಮಾಡಿತ್ತು.
ಸ್ಕೈ ಸ್ಪೋರ್ಟ್ಸ್ ನ ಸಿಇಓ ಶಿವ ನಂದಿ ಮಾತನಾಡಿ, ಟಿಕ್ ಟಾಕ್ ಆ್ಯಪ್ ಭಾರತಕ್ಕೆ ಬರಲು ಸಜ್ಜಾಗಿದೆ. ಒಂದು ವೇಳೆ ಟಿಕ್ ಟಾಕ್ ಬಂದರೆ ಖಂಡಿತಾಗಿಯೂ ಪಬ್ ಜಿ (ಬ್ಯಾಟಲ್ ಗ್ರೌಂಡ್) ಮತ್ತೆ ಭಾರತದ ಗ್ರಾಹಕರಿಗೆ ಸಿಗಲಿದೆ” ಎಂದರು.
ಇದನ್ನೂ ಓದಿ:ಬೀಚ್ ನಲ್ಲಿ ವಿಜಯ್ – ಅನನ್ಯಾ ರೊಮ್ಯಾನ್ಸ್: ʼಲೈಗರ್ʼ ನಿಂದ ʼಆಫತ್ʼ ಹಾಡು ರಿಲೀಸ್
ಪಬ್ ಜಿಯನ್ನು ಬ್ಯಾನ್ ಮಾಡಿದ್ದಲ್ಲ. ಅದು ಮಧ್ಯಂತರ ಆದೇಶವಷ್ಟೆ. ಹೀಗಾಗಿ ಅದು ಮತ್ತೆ ಭಾರತೀಯ ಗ್ರಾಹಕರಿಗೆ ಸಿಗಲಿದೆ ಎಂದರು.
ಆದರೆ ಪಬ್ ಜಿ ಗೇಮಿಂಗ್ ಆ್ಯಪ್ ಭಾರತಕ್ಕೆ ಮರಳುವ ಬಗ್ಗೆ ಭಾರತ ಸರ್ಕಾರ ಅಥವಾ ಆ್ಯಪ್ ತಯಾರಿಕಾ ಸಂಸ್ಥೆ ಕ್ರಾಫ್ಟನ್ ಯಾವುದೇ ಸ್ಪಷ್ಟನೆ ನೀಡಿಲ್ಲ.