Advertisement

ಟಕ್ಕಳಕಿ ಗೌಡರ ಸಿರಿಧಾನ್ಯ ಕೃಷಿ-ಖುಷಿ

02:52 PM Nov 13, 2019 | Suhan S |

ಕುಷ್ಟಗಿ: ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಶಿವನಗೌಡ ಪಾಟೀಲ ಅವರು, ಏಳು ಏಕರೆ ಜಮೀನಿನಲ್ಲಿ ನವಣೆ, ಬರಗ, ಕೊರಲೆ, ಸಜ್ಜೆ, ಸಾಮೆ ಸೇರಿ ಐದು ವಿಧದ ಸಿರಿಧಾನ್ಯ ಬೆಳೆದಿದ್ದು, ಸಿರಿಧಾನ್ಯದಲ್ಲಿ ಮಾದರಿ ರೈತರೆನಿಸಿದ್ದಾರೆ.

Advertisement

ಟಕ್ಕಳಕಿಯ ರೈತ ಶಿವನಗೌಡ ಪಾಟೀಲ ತಮ್ಮ 17 ಎಕರೆ ಜಮೀನಿಲ್ಲಿ ಒಂದಿಲ್ಲೊಂದು ಕೃಷಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೋಳ, ಕಡಲೆ, ಸೂರ್ಯಕಾಂತಿ ಇತ್ಯಾದಿ ಸಾಂಪ್ರದಾಯಕ ಬೆಳೆ ಬೆಳೆಯುತ್ತಿದ್ದ ಶಿವನಗೌಡ ಪಾಟೀಲ ಕಳೆದ 9 ವರ್ಷಗಳಿಂದ ಸಿರಿಧಾನ್ಯ ಬೆಳೆಯಲು ಮುಂದಾಗಿ ಅಪ್ಪಟ ಸಾವಯವ ಕೃಷಿಕ ಎನಿಸಿಕೊಂಡಿದ್ದಾರೆ. ಈಗಲೂ ತಮ್ಮ ಮನೆಯಲ್ಲಿ ಸಿರಿಧಾನ್ಯಗಳ ಆಹಾರವನ್ನೇ ಬಳಸುತ್ತಿದ್ದು, ಇತರೇ ರೈತರು ಈ ಧಾನ್ಯಗಳನ್ನು ಬೆಳೆಯಲು ಬೀಜಗಳನ್ನು ನೀಡುತ್ತಿದ್ದು, ಸದ್ದಿಲ್ಲದೇ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೇರಣೆಯಾಗುತ್ತಿದ್ದಾರೆ.  ಸಿರಿಧಾನ್ಯ ಆರೋಗ್ಯಕರ ಆಹಾರವಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಬೆಳೆದ ಇತರೇ ರೈತರು ಬೆಳೆದ ಸಿರಿಧಾನ್ಯಗಳನ್ನು ಮೌಲ್ಯವರ್ಧಿತಗೊಳಿಸಿ ಮಾರಾಟ ಮಾಡಿ, ಎಲ್ಲರಿಗೂ ಲಭಿಸುವಂತಾಗುವುದು ಮುಂದಿನ ಯೋಜನೆಯಾಗಿದೆ.

ಸಿರಿಧಾನ್ಯಕ್ಕೆ ಮೀಸಲು: ತಮ್ಮ 17 ಎಕರೆ ಜಮೀನಿಲ್ಲಿ 7 ಎಕರೆ ಸಿರಿಧಾನ್ಯಕ್ಕೆ ಮೀಸಲಿಟ್ಟಿದ್ದು, ಉಳಿದ ಜಮೀನಿಲ್ಲಿ ಬಿಳಿ ಜೋಳ, ಕಡಲೆ, ಕುಸುಬೆ ಇತ್ಯಾ ದಿ ಬೆಳೆದಿದ್ದಾರೆ. ಈ 7 ಎಕರೆಯ ಸಿರಿಧಾನ್ಯದಲ್ಲಿ ಮೂರು ತಿಂಗಳಿಗೆ ಕಟಾವಿಗೆ ಬರುವ ಕೊರಲೆ, ಸಾಮೆ, ನವಣೆ, ಜವಾರಿ ಸಜ್ಜೆ ಬೆಳೆಯಲ್ಲಿ ತೊಗರೆ ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಕೊರಲೆ ನವಣೆ 2 ಎಕರೆ, ಸಾಮೆ, ಜವಾರಿ ಸಜ್ಜೆ, ಬರಗ (ಆರ್ಕ) ತಲಾ 1 ಎಕರೆಯಲ್ಲಿ ಬೆಳೆದಿದ್ದಾರೆ. ಮೂರು ತಿಂಗಳ ಬೆಳೆಯಾಗಿರುವ ಕೊರಲೆ, ಸಾಮೆ, ನವಣೆ ಕಟಾವಿಗೆ ಬಂದಿದ್ದು, ಕೊರಲೆ 5 ಕ್ವಿಂಟಲ್‌, ಸಾಮೆ, ನವಣೆ ತಲಾ 2 ಕ್ವಿಂಟಲ್‌, ಸಜ್ಜೆ ಹಾಗೂ ಬರಗ ತಲಾ ಒಂದೂವರೆ ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಮೂಲ ಬೀಜ ಸಂಗ್ರಹ: ರೈತ ಶಿವನಗೌಡ ಪಾಟೀಲ ಅವರು, ಸಿರಿಧಾನ್ಯ ಬೆಳೆಯುವುದಷ್ಟೇ ಅಲ್ಲ ಅವರು, ಮೂಲ ತಳಿಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ತಾವು ಬೆಳೆದು ಸಂಗ್ರಹಿಸಿರುವ ದೋಸೆ ಜೋಳ, ಕೆಂಪು ಜೋಳ, ಸಕ್ಕರೆಮುಕರಿ ಜೋಳ, ಗಟ್ಟಿ ತೆನೆ ಜೋಳ, ಬಿಳಿಗುಂಡಿ ಜೋಳ, ಕರಿ ಕಡಲೆ, ಜವಾರಿ ಹೆಸರು, ಜವಾರಿ ಉದ್ದು,ಜವಾರಿ ಅಲಸಂದಿ, ಎಳ್ಳು. ಜವಾರಿ ಹತ್ತಿಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ಈ ಬೆಳೆಯನ್ನು ಬಿತ್ತಲಿಚ್ಚಿಸುವ ರೈತರು ಶಿವನಗೌಡ ಪಾಟೀಲ ಅವರನ್ನು ಸಂಪರ್ಕಿಸಿ ಬೀಜ ಒಯ್ಯುತ್ತಿದ್ದಾರೆ.

ಸಿರಿಧಾನ್ಯಗಳನ್ನು ಮೌಲ್ಯವ ರ್ಧಿತಗೊಳಿಸುವ ಹಾಗೂ ಸೂಕ್ಷ ವ್ಯವಸ್ಥೆ ಇದ್ದರೆ, ರೈತರು ಈ ಧಾನ್ಯಗಳನ್ನು ಬೆಳೆಯಲು ಇಚ್ಚಿಸುತ್ತಾರೆಯೇ ಹೊರತು, ಸರ್ಕಾರ ಪ್ರಚಾರ, ಪ್ರೋತ್ಸಾಹ ಧನದಿಂದ ಸಿರಿಧಾನ್ಯಗಳನ್ನು ಬೆಳೆಯಲು ಸಾಧ್ಯವಿಲ್ಲ. –ಶಿವನಗೌಡ ಪಾಟೀಲ, ರೈತ ಟಕ್ಕಳಕಿ ಗ್ರಾಮ

Advertisement

 

-ಮಂಜುನಾಥ ಮಹಾಲಿಂಗಪು

Advertisement

Udayavani is now on Telegram. Click here to join our channel and stay updated with the latest news.

Next