ಹೈದರಬಾದ್: ಟಿಕ್ ಟಾಕ್ ನಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಇದೀಗ ಯುವಕನೋರ್ವ ಟಿಕ್ ಟಾಕ್ ಮೋಹಕ್ಕೆ ಒಳಗಾಗಿ ತನ್ನ ಜೀವವನ್ನೆ ಕಳೆದುಕೊಂಡ ಘಟನೆ ತೆಲಂಗಾಣದ ನಿಜಾಮಬಾದ್ ಜಿಲ್ಲೆಯ ಭೀಮ್ ಗಲ್ ನಲ್ಲಿ ನಲ್ಲಿ ನಡೆದಿದೆ.
ಇಂದ್ರಪುರಂ ದಿನೇಶ್ (22) ಟಿಕ್ ಟಾಕ್ ವ್ಯಾಮೋಹ ದಿಂದ ಪ್ರಾಣ ಕಳೆದುಕೊಂಡ ಯುವಕ.
ಮೂವರು ಸ್ನೇಹಿತರೊಂದಿಗೆ ಚೆಕ್ ಡ್ಯಾಂ ನೋಡಲು ತೆರಳಿದ್ದ ದಿನೇಶ್, ನೀರಿನಲ್ಲಿ ಇಳಿದು ಟಿಕ್ ಟಾಕ್ ಮಾಡಲು ಮುಂದಾಗಿದ್ದ. ಆತನ ಸ್ನೇಹಿತರು ಒಂದೆಡೆ ನಿಂತು ಅದರ ರೆಕಾರ್ಡ್ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಸ್ನೇಹಿತರ ಎದುರೇ ದಿನೇಶ್ ಕೊಚ್ಚಿಹೋಗಿದ್ದು, ಆ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.
ಸ್ಥಳೀಯರು ರಕ್ಷಣೆ ಮಾಡಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಮೃತ ದಿನೇಶ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಮೂರು ತಿಂಗಳ ಹಿಂದೆಯಷ್ಟೆ ಮನೆಗೆ ಮರಳಿದ್ದ. ಜಿಲ್ಲಾಡಳಿತ ಸತತ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರ ತೆಗಿದಿದೆ.