Advertisement
ತುಳುನಾಡಿನ ಈ ಹುಲಿವೇಷಕ್ಕೆ ಬಹು ಶತಮಾನಗಳ ಪರಂಪರೆ ಇದೆ. ಹುಲಿ ವೇಷ ಧಾರಣೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಪ್ರದ ರ್ಶನ, ಕಲಾತ್ಮಕ, ಜನಪದೀಯ ನಂಬಿಕೆಗಳು ಕೂಡ ಅಂತರ್ಗತಗೊಂಡಿವೆ. ಹಾಗೆ ಇದು ಕೇವಲ ವೇಷಧಾರಣೆ ಮತ್ತು ಕುಣಿತವಲ್ಲ; ಇದು ತುಳುನಾಡಿನ ಜೀವನಶೈಲಿಯ ಅಂತಃಸತ್ವ ಕೂಡ.
ನಲ್ಪುನ ಪೊರ್ಲು ತೂಯನಾ, …
ಸಂತಸೊದ ಈ ಶುಭ ಘಳಿಗೆ,
ನಂಕಾರೆ ಕೊರಿಯೆರ್‌ಗೆ, ಉಲ್ಲಾಸದ ಈ
ಮೆರವಣಿಗೆ ಊರೊರ್ಮೆ ಕಣತೆರ್‌ಗೆ
ನಮ್ಮ ಊರ ಸಿಂಗಾರಂದ್, ಈ ಭೂಮಿಗ್
ಬಂಗಾರ್ ಬುಳೆಂದ್, ನನಲಾಗ ಪಾಡ್‌ದ್,
ನಲಿಪುನ ಸಮಯ ಯೇ ತಾಸೆದ… (ಕಾಪಿಕಾಡ್ ಅವರ ಜನಪ್ರಿಯ ತುಳು ಗೀತೆ ಇದು- ತಾಸೆಯ ಪೆಟ್ಟಿಗೆ ಊರಿನ ಹುಲಿಗಳು ಕುಣಿಯುವ ಅಂದ ನೋಡಿ ದಿಯಾ… ಸಂತಸದ ಈ ಶುಭ ಘಳಿಗೆ ನಮ ಗಾಗೆ ಬಂದಿದೆ, ಉಲ್ಲಾಸದ ಈ ಮೆರವಣಿಗೆ ಊರೆಲ್ಲ ತಂದಿಹರು, ನಮ್ಮ ಊರ ಸಿಂಗಾರಕೆ, ಈ ಭೂಮಿಗೆ ಬಂಗಾರ ಬೆಳೆಗೆ ಹಾರುತ ಹಾರುತ ಕುಣಿಯುವ ಸಮಯವೇ ತಾಸೆಯ….)
Related Articles
Advertisement
ಅನನ್ಯ ಪರಂಪರೆಗಳ ಸಂಶೋಧಕರ ಪ್ರಕಾರ: ಕರಾವಳಿಯ ಈ ಪ್ರದೇಶ ಮಾತೃಪ್ರಧಾನ ಜೀವನ ವಿಧಾನವನ್ನು ಹೊಂದಿದೆ. ಹಾಗೆ, ಕರಾವಳಿ ಮಲೆನಾಡಿನ ಉದ್ದಗಲಕ್ಕೆ ಅಧಿಕ ಸಂಖ್ಯೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ- ದೇವಿಯ ದೇವಸ್ಥಾನಗಳಿವೆ. ಶ್ರೀ ದೇವಿಯ- ವಿಶೇಷವಾಗಿ ದುಷ್ಟನಿಗ್ರಹದ ಅನೇಕ ಅವತಾ ರಗಳಲ್ಲಿ ಆಕೆಯ ವಾಹನ ಹುಲಿ. ಹಾಗೆ, ಆರೋಗ್ಯ ಸಂಬಂಧಿತ (ಚಲನಾರಾಹಿತ್ಯ, ಕೋಟ್ಲೆ ಇತ್ಯಾದಿ) ಸಮಸ್ಯೆ ಉಂಟಾದಾಗ ಹುಲಿವೇಷ ಧಾರಣೆ, ವ್ರತ ಕುಣಿತದ ಸೇವೆಯ ಹರಕೆಯ ಅರ್ಪಣೆಯಾಯಿತು. ರೋಗ ಗುಣವಾದ ಬಳಿಕ, ನವರಾತ್ರಿಗೆ ಹುಲಿ ವೇಷ ಹಾಕಿ, ನಾಲ್ಕು ಮನೆಗೆ ತೆರಳಿ ಹರಕೆ ಸಲ್ಲಿಸುವುದು. ಮನೆಯಲ್ಲಿ ತಂದೆ ತಾಯಿಯ, ಕುಟುಂಬದ ಇತರ ಸದಸ್ಯರ ಪರವಾಗಿಯೂ ಈ ಹರಕೆ ಸಲ್ಲಿಸುವುದಿತ್ತು. ಕೆಲವು ಆಚರಣೆಗಳಲ್ಲಿ ಒಂಬತ್ತು ದಿನ ಸಸ್ಯಾ ಹಾರ (ಎಲ್ಲರೂ) ಸಹಿತ ಕಟ್ಟುನಿಟ್ಟಿನ ವ್ರತ. ಕೊನೆಯ ಮೂರು ದಿನಗಳಲ್ಲಿ ವೇಷಧಾರಣೆ ಮತ್ತು ಮನೆಯಿಂದ ಹೊರಗೆ ವಾಸ; ಹಲವು ಹುಲಿಗಳಿದ್ದರೂ ತಲೆಗೆ ಮಂಡೆ ಇಡುವುದು ಒಂದೇ ಹುಲಿಗೆ. ಅದು ತಾಯಿ ಹುಲಿಗೆ. ಮಂಡೆ ಅಂದರೆ ಇಲ್ಲಿ ಹುಲಿಯ ಮುಖ ವಾಡ. ಮಂಡೆ ಇರಿಸುವ ಮೊದಲು, ಅದಕ್ಕೆ ಮಂಡೆ ಪೂಜೆ ಮಾಡಲಾಗುತ್ತದೆ. ಹುಲಿವೇ ಷಗಳು ಮನೆ ಬಂದರೆ ಒಳ್ಳೆಯದು ಎಂಬ ನಂಬಿಕೆ ಇದೆ.
ಕಾಲಾನುಕಾಲಕ್ಕೆ ಈ ಆಚರಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಈ ಆಧುನಿಕ ಶೈಲಿಯಲ್ಲಿ ಹೊಸತನಗಳ ಅಂತರ್ಗತವಾಯಿತು. ಕನ್ನಡ, ತುಳು ಮುಂ ತಾದ ಸಿನೆಮಾಗಳಲ್ಲೂ ಮತ್ತು ರಿಯಾಲಿಟಿ ಶೋಗಳಲ್ಲೂ ಹುಲಿವೇಷದ ತಾಸೆಯ ಸದ್ದು, ಬಣ್ಣಗಳು ಮಿಂಚುತ್ತಿರುವ ಕಾಲವಿದು. ಹುಲಿವೇಷ ಅಂದಾಕ್ಷಣ ತಾಸೆಯ ಉಲ್ಲೇಖ ಬರಲೇ ಬೇಕು. ಇದು ಹುಲಿವೇಷದ ಐಕಾ ನಿಕ್ ಹಿನ್ನೆಲೆ. ಚರ್ಮವಾದ್ಯಕ್ಕೆ ಲಯ ಬದ್ಧವಾದ ಏಟು ಧ್ವನಿಸುವ ಸದ್ದು ಹುಲಿವೇ ಷವೆಂದೇ ಸಾರ್ವತ್ರಿಕವಾಗಿ ಸಾರುತ್ತದೆ. ಈ ತಾಸೆಯ ಸದ್ದು ಡೆಂಡೆರೆ ಡೆಂಡೆರೆ ಕೇಳಿದಾಕ್ಷಣ ಅಬಾಲವೃದ್ಧರೂ ಕೂಡ ಹೆಜ್ಜೆ ಹಾಕು ವಂತಾಗುತ್ತದೆ. ಈಗ ಹುಲಿವೇಷಕುಣಿತದಲ್ಲಿ ಹುಡುಗಿಯರೂ, ವನಿತೆಯರೂ ಮುಂದಾಗಿದ್ದಾರೆ. ಕರಾವಳಿಯಾದ್ಯಂತ ಈ ತಂಡಗಳು ಹೆಚ್ಚುತ್ತಲೇ ಇವೆ.ಈ ಮೂಲಕ ಜನಪದೀಯ ಪರಂಪರೆ ಯೊಂದು ಧಾರ್ಮಿಕ ನೆಲೆಗಟ್ಟಿನಲ್ಲಿ ರಂಜನಾತ್ಮಕ ಸ್ವರೂಪ ತಾಳಿದ ಬಗೆಯಿದು. ಹಾಗೆಂದು ಹುಲಿವೇಷದ ಬಣ್ಣ ಬಳಿ ಯುವ ಪ್ರಕ್ರಿಯೆಯು ಅತೀ ಕಠಿನ. ಮೊದಲ ಹಂತದಲ್ಲಿ ಬಿಳಿ ಬಣ್ಣ ಬಳಿದು ಕೊಂಡು ಎರಡೂ ಕೈಗಳನ್ನು ಹನ್ನೆರಡು ತಾಸು ವಿಸ್ತರಿಸಿಕೊಂಡು ನಿಲ್ಲುವ ಕಠಿನ ಕ್ರಿಯೆ. ಬಳಿಕ ಹುಲಿಯಂತೆ ಹಳದಿ ಮತ್ತು ಕಪ್ಪು ಪ್ರತ್ಯೇಕ ಪಟ್ಟಿಗಳು, ಮುಖಕ್ಕೆ ಹುಲಿ ತರದ ಬಣ್ಣ ಬಣ್ಣದ ವಿನ್ಯಾಸಗಳು. ಹುಲಿ ವೇಷ ಧಾರಣೆಯಾದ ಬಳಿಕ ನಿದ್ದೆಯೂ ಕಷ್ಟ. ಬಾಳೆ ಎಲೆಯ ಮೇಲೆ ಮಲಗುವುದು ಅನಿವಾರ್ಯ ಪ್ರಕ್ರಿಯೆ. ಇದೆಲ್ಲವೂ ಆದ ಬಳಿಕ ಈಗ ಹೊಸ ವಿನ್ಯಾಸಗಳಿವೆ. ಮಂಡೆ ಪಿಲಿ, ಅಪ್ಪೆ ಪಿಲಿ, ಚಿಟ್ಟೆ ಪಿಲಿ, ಬಿಟ್ಟೆ ಪಿಲಿ, ಮಲ್ಲ ಪಿಲಿ, ಬಾಲೆ ಪಿಲಿ (ಇಂತಹ ವರ್ಣನೆ ಸಾಕಷ್ಟಿದೆ) ಹೀಗೆ ಗುಂಪು ಗುಂಪಾಗಿ ತಂಡಗಳು ಹುಲಿವೇಷನಿರತವಾಗಿರುತ್ತವೆ. ಏಷ್ಯಾಖಂಡದಲ್ಲಿ ತೈವಾನ್, ಚೀನ, ಜಪಾನ್ ಮುಂತಾದ ದೇಶಗಳಲ್ಲೂ ಕೂಡ ಅಲ್ಲಿನ ಪ್ರಾದೇಶಿಕ ಅಗತ್ಯಕ್ಕೆ ಅನುಸಾರ ಹುಲಿವೇ ಷಗಳಿವೆ. ಭಾರತದಲ್ಲೇ ಕೇರಳ, ತಮಿಳು ನಾಡು ಮುಂತಾದ ರಾಜ್ಯಗಳಲ್ಲೂ ಆಚರ ಣೆಯಿದೆ. ಕೇರಳದಲ್ಲಿ ಓಣಂ ಸಂದರ್ಭದಲ್ಲಿ ವಿಶೇಷ ಆದ್ಯತೆಯಿದೆ. ಬಣ್ಣ ಬಳಿದುಕೊಳ್ಳುವ ವಿನ್ಯಾಸಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳಿರಬಹುದು ಅಷ್ಟೇ. ಹಾಗೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹುಲಿಗಳ ಸಂತತಿ ವಸ್ತುಶಃ ಇಲ್ಲವೆಂದೇ ಹೇಳಬಹುದು. ಇಲ್ಲಿ ಚಿರತೆ, ಚಿಟ್ಟೆ ಹುಲಿ ಆಗಾಗ ಕಾಣಿಸಿಕೊಂಡದ್ದಿದೆ. ಸದ್ಯದ ಕಾಲಘಟ್ಟದಲ್ಲಿ ಹುಲಿಗಳನ್ನು ಕಾಣು ವುದು ಈ ಪ್ರದೇಶದಲ್ಲಿ ವಿರಳ. ಒಂದು ವೇಳೆ ಕಂಡರೂ ಆ ಹುಲಿ ಕಾಡ ಹಾದಿ ತಪ್ಪಿ ಬಂದಿ ರುವ ಸಾಧ್ಯತೆಗಳಿವೆ. ಅದೇನಿದ್ದರೂ, ಹುಲಿವೇಷಗಳು ಇಲ್ಲಿ ಹುಲಿಯ ಅಸ್ತಿತ್ವವನ್ನು ಹೀಗೆ ಪ್ರದರ್ಶಿಸುತ್ತವೆ. ಗುಂಪಿನಲ್ಲಿ ಹುಲಿ ಗಳು ಕುಣಿಯುವ ಬಲು ಜನಪ್ರಿಯವಾದ ಗೀತೆಯ ಸಂಗೀತ- ಧರಣಿ ಮಂಡಲ ಮಧ್ಯ ದೊಳಗೆ ಇರುವ ಕರ್ನಾಟ ದೇಶದಲ್ಲಿ.. ಇಲ್ಲಿಯೂ ಪುಣ್ಯಕೋಟಿಯು ಗೀತಾ ನಾಯಕಿಯಾದರೂ ಅಂತಿಮವಾಗಿ ವಿಜೃಂ ಭಿಸುವುದು ಚಂಡವ್ಯಾಘ್ರನ ತ್ಯಾಗ. ಈ ಮೂಲಕ ಸತ್ಯದ ವಿಜೃಂಭಣೆಯೂ ಹೌದು. ಅಂದಹಾಗೆ: ಮಂಗಳೂರು ಬಳಿ ಪಿಲಿಕುಳ ನಿಸರ್ಗ ಧಾಮವಿದೆ. ಒಂದು ಕಾಲಕ್ಕೆ ಕಾಡು, ಕೊಳ ವಾಗಿದ್ದ ಈ ಪ್ರದೇಶ ಈಗ ನಿಸರ್ಗಧಾಮ ದಿಂದ ಜಗದ್ವಿಖ್ಯಾತ, ಅಪಾರ ಜನಾಕರ್ಷ ಣೆಯ ಕೇಂದ್ರ. ವಿಶೇಷವೆಂದರೆ, ಒಂದು ಕಾಲದಲ್ಲಿ ಇಲ್ಲಿರುವ ಕೊಳಕ್ಕೆ ನೀರು ಕುಡಿ ಯಲು ಹುಲಿಗಳು ಬರುತ್ತಿದ್ದವಂತೆ. ಹುಲಿ: ಪಿಲಿ, ಕೊಳ: ಕುಳ ಹಾಗಾಗಿ ಇದು ಪಿಲಿಕುಳ! ಮನೋಹರ ಪ್ರಸಾದ್