Advertisement

ಹುಲಿ ಚರ್ಮ ಜಪ್ತಿ ; ಜೆಡಿಎಸ್‌ ಮುಖಂಡನ ಬಂಧನ

04:47 PM Dec 11, 2022 | Team Udayavani |

ಬೀದರ್ : ತಾಲೂಕಿನ ಸಂಗೋಳಗಿ ಗ್ರಾಮದ ಜೆಡಿಎಸ್‌ನ ಹಿರಿಯ ಮುಖಂಡ ಅಶೋಕ ಸಂಗಪ್ಪಾ ಪಾಟೀಲ ಎಂಬುವರ ಮನೆ ಮೇಲೆ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಹುಲಿ ಚರ್ಮದ ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಪ್ಪಿಸಿದ್ದಾರೆ.

Advertisement

ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರೆ ಗಾಜರೆ ನೇತೃತ್ವದ ಎರಡು ತಂಡಗಳು ದಾಳಿ ನಡೆಸಿ ಮನೆಯಲ್ಲಿ ಶೋಧಿಸಿದ್ದಾರೆ. ಈ ವೇಳೆ ಪಾಟೀಲ ಅವರ ಲಾಕರ್ ನಲ್ಲಿ ಇಟ್ಟಿದ್ದ ಹುಲಿ ಚರ್ಮದ 4 ತುಂಡುಗಳನ್ನು ಜಪ್ತಿ ಮಾಡಿ ಕೊಂಡಿದ್ದಾರೆ. ಪಾಟೀಲ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ”ಅಪರಿಚಿತ ಸ್ವಾಮೀಜಿಯೊಬ್ಬರು ನಮ್ಮ ಮನೆಗೆ ಬಂದು ಇದನ್ನು ಪೂಜೆ ಮಾಡಿ ಎಂದು ನಮಗೆ ಕೊಟ್ಟಿದ್ದಾರೆ”  ಎಂದು ಹೇಳಿದ್ದಾರೆ.

ಬೀದರ ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ, ಕಲ್ಬುರ್ಗಿ ವಲಯ ಅರಣ್ಯ ಅಧಿಕಾರಿ ರೇವಣಸಿದ್ಧ, ಉಪ ವಲಯ ಅರಣ್ಯ ಅಧಿಕಾರಿ ರಮೇಶ, ಗಸ್ತು ಅರಣ್ಯ ಪಾಲಕ ಸಿದ್ಧಲಿಂಗ, ಶಾಂತಕುಮಾರ, ದಸ್ತಗಿರಿಸಾಬ್, ಸುರೇಶ ಮತ್ತು ಸಿಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಆರೋಪಿ ಅಶೋಕ ಪಾಟೀಲ ಅವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next