ನಾಗಪುರ: ದೇಶದಲ್ಲಿ ಸತತ ಎರಡು ವರ್ಷಗಳಿಂದ ಹುಲಿ ಸಾವಿನ ಸಂಖ್ಯೆ ಹೆಚ್ಚಿತ್ತಿದ್ದು, ಕಳೆದ ಆರು ತಿಂಗಳಲ್ಲಿ ಸಾವನ್ನಪ್ಪಿದ್ದ 86 ಹುಲಿಗಳ ಪೈಕಿ ಮಹಾರಾಷ್ಟ್ರದಲ್ಲಿ 22 ಸಾವು ಸಂಭವಿಸಿದೆ. ಇದರೊಂದಿಗೆ ಹುಲಿ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ
ಹೋಲಿಸಿದರೆ ದೇಶದಲ್ಲಿ ಹುಲಿ ಸಾವಿನ ಸಂಖ್ಯೆ ಶೇ.153ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ:ಶರದ್ ಮುಂದಿನ ರಾಷ್ಟ್ರಪತಿ?: ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಐಕ್ಯತೆ?: ಕಿಶೋರ್ ತಂತ್ರ ಏನು.?
ಕಳೆದ ಎರಡು ಹುಲಿ ಜನಗಣತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ, ಹೆಚ್ಚುತ್ತಿರುವ ಸಾವಿನ ಸಂಖ್ಯೆ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ದೇಶಾದ್ಯಂತ ಕೊರೊನಾ ಸಂಕಟ ಆರಂಭವಾಗಿದ್ದು, ಕೊರೊನಾದ ಎರಡನೇ ಅಲೆಯ ಸಂದರ್ಭದಲ್ಲಿ ಹುಲಿ ಮರಣ ಪ್ರಮಾಣವೂ ಹೆಚ್ಚಾಗಿದೆ. ಹುಲಿ ಸಾವಿನಲ್ಲಿ ಮಧ್ಯಪ್ರದೇಶವು ಪ್ರಥಮ ಸ್ಥಾನದಲ್ಲಿದ್ದರೆ ಮಹಾರಾಷ್ಟ್ರ ಎರಡನೇ ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2021ರ ಜೂನ್ 30ರ ಹೊತ್ತಿಗೆ 86 ಹುಲಿ ಸಾವುಗಳು ವರದಿಯಾಗಿವೆ.
ಜುಲೈನಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ. ಹುಲಿ ಅಂಗ ಜಪ್ತಿ ಮಾಡಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 72 ಸಾವುಗಳನ್ನು ದಾಖಲಿಸಿದೆ. ಪ್ರಾಧಿಕಾರದ ವರದಿಯ ಪ್ರಕಾರ, ಐದು ಅಥವಾಹೆಚ್ಚಿನ ಹುಲಿಗಳ ಅಂಗಗಳನ್ನು ಮುಟ್ಟುಗೋಲು
ಹಾಕಿಕೊಂಡ ಪ್ರಕರಣಗಳು ನಡೆದಿವೆ.
2020ರಲ್ಲಿ 98 ಹುಲಿ ಸಾವುಗಳು ದಾಖಲಾಗಿವೆ. ಈ ಪೈಕಿ ಜೂನ್ 2020ರ ಮೊದಲ ಆರು ತಿಂಗಳಲ್ಲಿ 56 ಸಾವುಗಳು ಸಂಭವಿಸಿವೆ. 2019ರ ಇಡೀ ವರ್ಷದಲ್ಲಿ ಹುಲಿ ಸಾವಿನ 84 ಪ್ರಕರಣಗಳು ವರದಿಯಾಗಿವೆ. ಹುಲಿಗಳ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂಬುದು ಸತತ ಮೂರು ವರ್ಷಗಳ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.ಈ ವರ್ಷದ ಮೊದಲ ಮೂರು ತಿಂಗಳಲ್ಲಿ ದೇಶಾದ್ಯಂತ 39 ಹುಲಿಗಳು ಸಾವನ್ನಪ್ಪಿದ್ದರೆ, ಆರು ತಿಂಗಳಲ್ಲಿ 86 ಹುಲಿಗಳು ಸಾವನ್ನಪ್ಪಿವೆ.